ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕೋಟ ಶ್ರೀನಿವಾಸ್ ಪೂಜಾರಿ ನಡುವೆ ಟ್ವೀಟ್ ವಾರ್ ನಡೆದಿದೆ.  ಹಾಸ್ಟೆಲ್ ಗಳ ಅವ್ಯವಸ್ಥೆ ಕುರಿತು ಟ್ವೀಟ್ ಮಾಡಿದ ಪೂಜಾರಿ ಖರ್ಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರು : ಗದಗದ ವಿದ್ಯಾರ್ಥಿನಿಲಯದ ಅವ್ಯವಸ್ಥೆ ಬಗ್ಗೆ ಟ್ವೀಟ್ ಮಾಡಿ ಸಚಿವ ಪ್ರಿಯಾಂಕ ಖರ್ಗೆ ರಾಜೀನಾಮೆಗೆ ಆಗ್ರಹಿಸಿರುವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸತತ ಟ್ವೀಟ್‌ಗಳ ಮೂಲಕ ಪ್ರಿಯಾಂಕ ಖರ್ಗೆ ತಿರುಗೇಟು ನೀಡಿದ್ದಾರೆ. ಈ ಮೂಲಕ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಪ್ರಿಯಾಂಕ ಖರ್ಗೆ ನಡುವೆ ಟ್ವೀಟ್ ವಾರ್ ನಡೆದಿದೆ. 

ಗದಗದ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಕ್ಕೆ ಹಠಾತ್ ಭೇಟಿ ನೀಡಿದ್ದ ಶ್ರೀನಿವಾಸಪೂಜಾರಿ, ಅಲ್ಲಿನ ಅವ್ಯವಸ್ಥೆ ಕಂಡು ಈ ಪುರುಷಾರ್ಥಕ್ಕೆ ಸಚಿವಗಿರಿ ಬೇಕೆ? ರಾಜೀನಾಮೆ ನೀಡಿ ಎಂದು ಖರ್ಗೆಗೆ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವ ಪ್ರಿಯಾಂಕ ಖರ್ಗೆ, ರಾಜ್ಯದಲ್ಲಿ 3000 ಸಾವಿರ ವಸತಿ ನಿಲಯ ಇದೆ. ಅವುಗಳ ಸ್ಥಿತಿಯ ಬಗ್ಗೆಯೂ ಅರಿವಿದೆ. ನಿಮ್ಮ ಶಾಸಕರ ನಿಧಿಯಿಂದ ಈವರೆಗೆ ಎಷ್ಟು ಎಸ್‌ಸಿ, ಎಸ್‌ಟಿ ವಿದ್ಯಾರ್ಥಿನಿಲಯಗಳಿಗೆ ಅನುದಾನ ನೀಡಿ ಸರಿಪಡಿಸಿದ್ದೀರಿ ತಿಳಿಸಿ. 

ನಿಮಗೆ ಎಸ್‌ಸಿ, ಎಸ್‌ಟಿ ಬಗ್ಗೆ ಕಾಳಜಿ ಇದ್ದರೆ ಎಸ್‌ಸಿ, ಎಸ್‌ಟಿ ವಿರುದ್ಧ ಕಾನೂನುಗಳನ್ನು ತರುತ್ತಿರುವ ಪ್ರಧಾನಿ ಮೋದಿ ರಾಜೀನಾಮೆ ಕೇಳಿ ಎಂದು ಟಾಂಗ್ ನೀಡಿದರು. ಎಸ್‌ಸಿ, ಎಸ್‌ಟಿ ಕಾಯಿದೆ ದುರ್ಬಲಗೊಳಿಸಿರುವ ನರೇಂದ್ರ ಮೋದಿ ವಿರುದ್ಧ ಆಗಸ್ಟ್ ೯ಕ್ಕೆ ಭಾರತ್ ಬಂದ್‌ಗೆ ದಲಿತರು ಕರೆ ನೀಡಿದ್ದಾರೆ. ಕೋಟ ಅವರೇ, ತಾವು ಪ್ರಬುದ್ಧರು. ಈ ಪ್ರಸ್ತಾವನೆ ಹೀಗೆ ಏಕಾಯಿತು ಎಂಬುದನ್ನು ಜನರಿಗೆ ತಿಳಿಸಿ ಎಂದು ಇನ್ನೊಂದು ಟ್ವೀಟ್‌ನಲ್ಲಿ ಹೇಳಿದರು. 

ಏರೋ ಇಂಡಿಯಾವನ್ನು ಬೆಂಗಳೂರಿನಿಂದ ಲಕ್ನೋಗೆ ಸ್ಥಳಾಂತರಿಸುವ ಸಾಧ್ಯತೆ ಇದೆ. ಅದನ್ನು ಬೆಂಗಳೂರಿನಲ್ಲೇ ಉಳಿಸಿಕೊಳ್ಳಲು ಯತ್ನಪಡಿ. ಇಲ್ಲದಿದ್ದರೆ ಕೇಂದ್ರ ಸಚಿವರಾದ ಅನಂತಕುಮಾರ್, ನಿರ್ಮಲಾ ಸೀತಾರಾಮನ್, ಡಿ.ವಿ. ಸದಾನಂದಗೌಡರ ರಾಜೀನಾಮೆ ಕೇಳಿ ಎಂದೂ ಪ್ರಿಯಾಂಕ ಖರ್ಗೆ ತಿರುಗೇಟು ನೀಡಿದರು. 

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…