ಸತತ ಸೋಲಿಗೆ ತಲೆಕೆಟ್ಟು ಆಗಾಗ ಗುಟ್ಟಾಗಿ ವಿದೇಶಕ್ಕೆ ಹೋದವರಿಗೆ ನಶೆಯ ವಿಚಾರ ಚೆನ್ನಾಗಿ ತಿಳಿದಿರುತ್ತದೆ.
ಬೆಂಗಳೂರು(ಫೆ.04): 'ನೀವು ನಶೆಯಲ್ಲಿದ್ದರೆ ಈಗೆ ಆಗೋದು' ಎಂದು ಪ್ರಧಾನಿ ನರೇಂದ್ರ ಮೋದಿಯವರ ಬೆಂಗಳೂರು ಭಾಷಣವನ್ನು ಟ್ವಿಟರ್'ನಲ್ಲಿ ಟೀಕಿಸಿದ್ದ ನಟಿ ಕಂ ಮಾಜಿ ಸಂಸದೆ ರಮ್ಯಾ ಅವರಿಗೆ ಗರಂ ಆಗಿರುವ ನಟ ಗಣೇಶ್ ಪತ್ನಿ ಹಾಗೂ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಿಲ್ಪಾ ಗಣೇಶ್ ಟ್ವಿಟರ್'ನಲ್ಲಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.
ಸತತ ಸೋಲಿಗೆ ತಲೆಕೆಟ್ಟು ಆಗಾಗ ಗುಟ್ಟಾಗಿ ವಿದೇಶಕ್ಕೆ ಹೋದವರಿಗೆ ನಶೆಯ ವಿಚಾರ ಚೆನ್ನಾಗಿ ತಿಳಿದಿರುತ್ತದೆ. ರಮ್ಯಾ ಹೆಸರಿನಲ್ಲಿಯೇ ರಮ್ ಎಂದು ಇದೆ. ಇದು ನೋಡಿದರೆ ಟ್ವೀಟ್ ಮಾಡುವಾಗ ಕುಡಿದಿರುತ್ತಾರೆನ್ನಿಸುತ್ತೆ' ಎಂದು ಟ್ವಿಟರ್'ನಲ್ಲಿ ತಿರುಗೇಟು ನೀಡಿದ್ದಾರೆ.
