ಕಳೆದ ಮೂರು ವರ್ಷದಲ್ಲಿ ದೇಶದಲ್ಲಿ ಕಡಿಮೆ ಅಭಿವೃದ್ಧಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಟಿವಿಯಲ್ಲಿ ಮಾತ್ರ ಹೀರೋ ಹಾಗೆ ಕಾಣಿಸಿಕೊಳ್ಳುತ್ತಾರೆ ಆದರೆ ವಾಸ್ತವದಲ್ಲಿ ಅವರು ಜೀರೋ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಟೀಕಿಸಿದ್ದಾರೆ.
ನವದೆಹಲಿ (ಜೂ.06): ಕಳೆದ ಮೂರು ವರ್ಷದಲ್ಲಿ ದೇಶದಲ್ಲಿ ಕಡಿಮೆ ಅಭಿವೃದ್ಧಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಟಿವಿಯಲ್ಲಿ ಮಾತ್ರ ಹೀರೋ ಹಾಗೆ ಕಾಣಿಸಿಕೊಳ್ಳುತ್ತಾರೆ ಆದರೆ ವಾಸ್ತವದಲ್ಲಿ ಅವರು ಜೀರೋ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಟೀಕಿಸಿದ್ದಾರೆ.
“ಇದು ಕೇವಲ ಘೋಷಣೆ ಮತ್ತು ಜನಪ್ರಿಯತೆ ಸರ್ಕಾರ. ಪ್ರಧಾನಿಯವರು ಟಿವಿಯಲ್ಲಿ ಹೀರೋ ತರ ಕಾಣಿಸುತ್ತಾರೆ. ನಿಜವಾಗಿ ಜೀರೋ ಆಗಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಭಯವನ್ನು ಮಾತ್ರ ಸೃಷ್ಟಿಸಿದ್ದಾರೆ ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ಪಕ್ಷದ ಸಭೆಯಲ್ಲಿ ಸೋನಿಯಾ ಗಾಂಧಿ, ಮೋದಿ ಸರ್ಕಾರ ಕೇವಲ ಮೂರು ವರ್ಷ ಪೂರೈಸಿದೆ. ಎಲ್ಲಿ ಸಾಮರಸ್ಯಯಿತ್ತೋ ಅಲ್ಲಿ ಒಡಕು ಮೂಡಿದೆ. ಸಹನೆ ಇದ್ದಲ್ಲಿ ಪ್ರಚೋದನೆ ಮಾಡಿದ್ದಾರೆ. ಕಾಶ್ಮೀರದಲ್ಲಿ ಗಲಭೆ ಉಂಟಾಗಿದೆ. ಆರ್ಥಿಕವಾಗಿ ಬಲಿಷ್ಠರಾಗಿದ್ದೆವು. ಈಗ ಅರ್ಥ ವ್ಯವಸ್ಥೆ ಸ್ಥಗಿತಗೊಂಡಿದೆ. ದೇಶದಲ್ಲಿ ಸಂಕುಚಿತ ಮನೋಭಾವನೆ ಉಂಟಾಗಿದೆ ಎಂದು ಹೇಳಿದ್ದಾರೆ.
