ವಾಷಿಂಗ್ಟನ್(ನ.05): ಐಸಿಸ್ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿ ಹತ್ಯೆಯ ಬೆನ್ನಲ್ಲೇ, ಆತನ ಸಹೋದರಿಯನ್ನು ಟರ್ಕಿ ಸೇನೆ ಬಂಧಿಸಿವೆ.

ಉಗ್ರರಿಗೆ ಇದೆ ಗತಿ, ದಾಳಿಗೆ ಹೆದರಿ ಮೋಸ್ಟ್ ವಾಂಟೆಡ್ ಬಾಗ್ದಾದಿ ಆತ್ಮಾಹುತಿ
ಉತ್ತರ ಸಿರಿಯಾದ ಎಜಾಜ್ ಪಟ್ಟಣದಲ್ಲಿ ತಲೆಮರೆಸಿಕೊಂಡು ತಿರುಗುತ್ತಿದ್ದ ಬಾಗ್ದಾದಿ ಸಹೋದರಿ ರಸ್ಮಿಯಾ ಅವಾದ್ ಇದೀಗ ತಮ್ಮ ವಶದಲ್ಲಿದ್ದಾಳೆ ಎಂದು ಟರ್ಕಿ ಸೇನೆಯ ವಕ್ತಾರರು ಮಾಹಿತಿ ನೀಡಿದ್ದಾರೆ.

ರಸ್ಮಿಯಾ ಆವಾದ್ ಬಂಧನ ಇಸ್ಲಾಮಿಕ್ ಸ್ಟೇಟ್ ವಿರುದ್ಧದ ಹೋರಾಟಕ್ಕೆ ಸಿಕ್ಕ  ಮತ್ತೊಂದು ಜಯ ಎಂದು ಬಣ್ಣಿಸಲಾಗಿದೆ. ಉಗ್ರ ಸಂಘಟನೆಗೆ ಸೇರಿದ ಮಹತ್ವದ ಮಾಹಿತಿ ಆಕೆಯ ಬಳಿ ಇದ್ದು, ರಸ್ಮಿಯಾ ಬಂಧನವನ್ನು ಅತ್ಯಂತ ಯಶಸ್ವಿ ಕಾರ್ಯಾಚರಣೆ ಎಂದು ಟರ್ಕಿ ಬಣ್ಣಿಸಿದೆ.

ಐಸಿಸ್ ಉಗ್ರ ಬಾಗ್ದಾದಿಗೆ ಪತ್ನಿಯಿಂದಲೇ ಉರುಳು; ಕಾರ್ಯಾಚರಣೆ ಹೀಗಿತ್ತು!

ಇನ್ನು ರಸ್ಮಿಯಾ ಜೊತೆಗೆ ಆಕೆಯ ಐವರು ಮಕ್ಕಳನ್ನೂ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಟರ್ಕಿ ಸೇನಾ ಮೂಲಗಳು ತಿಳಿಸಿವೆ.

ಬಾಗ್ದಾದಿ ಮಾಹಿತಿ ನೀಡಿದಾತನಿಗೆ 175 ಕೋಟಿ ಬಹುಮಾನ

ಇನ್ನು ರಸ್ಮಿಯಾ ಬಂಧನ ಭಯೋತ್ಪಾದನೆ ವಿರುದ್ಧದ ತಮ್ಮ ಹೋರಾಟಕ್ಕೆ ಸಾಕ್ಷಿಯಾಗಿದ್ದು, ಟರ್ಕಿ ಮೇಲೆ ಯಾರೂ ಅನುಮಾನಪಡುವಂತಿಲ್ಲ ಎಂದು ಟರ್ಕಿ ಅಧ್ಯಕ್ಷರ ಮಾಧ್ಯಮ ಸಲೆಹಾಗರ ಫಹ್ರೆಟಿನ್ ಅಲ್ಟುನ್ ಪರೋಕ್ಷವಾಗಿ ಅಮರಿಕಕ್ಕೆ ಟಾಂಗ್ ನೀಡಿದ್ದಾರೆ.

ಬಾಗ್ದಾದಿ ಕೊನೆ ಕ್ಷಣಗಳು: ಪೆಂಟಗನ್ ಬಿಡುಗಡೆ ಮಾಡಿದ ವಿಡಿಯೋ ತುಣುಕುಗಳು!