ತಿಪಟೂರಿನ ಮಾಜಿ ಶಾಸಕ ಬಿ.ನಂಜಾಮರಿ ಮೊಮ್ಮಗಳ ನಾಮಕರಣ ನೆಪದಲ್ಲಿ ರಾಜಕೀಯ ಶಕ್ತಿ ಬಲ ಪ್ರದರ್ಶನ ಮಾಡಿದ್ದಾರೆ.

ತುಮಕೂರು (14): ತಿಪಟೂರಿನ ಮಾಜಿ ಶಾಸಕ ಬಿ.ನಂಜಾಮರಿ ಮೊಮ್ಮಗಳ ನಾಮಕರಣ ನೆಪದಲ್ಲಿ ರಾಜಕೀಯ ಶಕ್ತಿ ಬಲ ಪ್ರದರ್ಶನ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಿಪಟೂರು ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್​​'​ಗೆ ನಾಲ್ಕು ಜನ ಆಕಾಂಕ್ಷಿಗರಿದ್ದಾರೆ. ಇವರಲ್ಲಿ ನಂಜಾಮರಿ ಕೂಡಾ ಒಬ್ಬರು. ಹಾಗಾಗಿ ಮೊಮ್ಮಗಳು ತನಿಷ್ಕಾಳ ನಾಮಕರಣದ ನೆಪದಲ್ಲಿ ಮನೆ ಆವರಣದಲ್ಲೇ ರಾಜಕೀಯ ಶಕ್ತಿ ಪ್ರದರ್ಶನ ಮಾಡಿದ್ದಾರೆ. ತಿಪಟೂರು ಕ್ಷೇತ್ರದ‌ 15ಕ್ಕೂ ಹೆಚ್ಚು ವಿವಿಧ ಮಠಾಧೀಶರನ್ನು ಕರೆ ತಂದು ಪಾದಪೂಜೆ ಮಾಡಿ ಸ್ವಾಮಿಜಿಗಳ ಬೆಂಬಲ ಕೋರಿದ್ದಾರೆ. ಅಲ್ಲದೆ ಮುಸ್ಲಿಂ ಸಮುದಾಯ ಮುಖಂಡರನ್ನು ತಮ್ಮ ಬೆಂಬಲಕ್ಕೆ ನಿಲ್ಲಿಸಿಕೊಂಡಿದ್ದಾರೆ.