ಸ್ಮಾರ್ಟ್ ಸಿಟಿ ತುಮಕೂರಿಗೆ ಮತ್ತೊಂದು ಗರಿಮೆ ಲಭಿಸಿದೆ. ತುಮಕೂರು ಜಿಲ್ಲಾಸ್ಪತ್ರೆ ಉತ್ತಮ ಸೇವೆ ಒದಗಿಸುವಲ್ಲಿ ರಾಜ್ಯದ ಮೊದಲ ನಂಬರ್ 1 ಆಸ್ಪತ್ರೆ ಎಂಬ ಕೀರ್ತಿಗೆ ಭಾಜನವಾಗಿದೆ.
ತುಮಕೂರು (ಡಿ.25): ಸ್ಮಾರ್ಟ್ ಸಿಟಿ ತುಮಕೂರಿಗೆ ಮತ್ತೊಂದು ಗರಿಮೆ ಲಭಿಸಿದೆ. ತುಮಕೂರು ಜಿಲ್ಲಾಸ್ಪತ್ರೆ ಉತ್ತಮ ಸೇವೆ ಒದಗಿಸುವಲ್ಲಿ ರಾಜ್ಯದ ಮೊದಲ ನಂಬರ್ 1 ಆಸ್ಪತ್ರೆ ಎಂಬ ಕೀರ್ತಿಗೆ ಭಾಜನವಾಗಿದೆ.
ಉತ್ತಮ ಸೇವೆ ಹಾಗೂ ನಿರ್ವಹಣೆಯ ಬಗ್ಗೆ ಮೌಲ್ಯಮಾಪನ ನಡೆಸುವ ನ್ಯಾಷಿನಲ್ ಕ್ವಾಲಿಟಿ ಅಶ್ಯೂರೆನ್ಸ್ ಸ್ಟ್ಯಾಂಡರ್ಡ್ ನಡೆಸಿದ ಪರಿಶೀಲನೆಯಲ್ಲಿ ವೇಳೆ ಆಸ್ಪತ್ರೆಯಲ್ಲಿ ಕಂಡ ಸ್ವಚ್ಛ ಹಾಗೂ ವೈದ್ಯರ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಶೇಕಡ 92 ರಷ್ಟು ಅಂಕ ಗಳಿಸುವ ಮೂಲಕ ಸೇವೆ ಹಾಗೂ ನಿರ್ವಹಣೆಯಲ್ಲಿ ಮೊದಲ ಸ್ಥಾನ ಪಡೆದಕೊಂಡಿದೆ. ಜಿಲ್ಲಾಸ್ಪತ್ರೆಯ 8 ವಿಭಾಗದಲ್ಲಿ ನೀಡುವ ಸೇವೆಯ ಗುಣಮಟ್ಟದ ಬಗ್ಗೆ ತಂಡ ಪರಿಶೀಲನೆ ನಡೆಸಿದೆ. ಅಹಮದಬಾದ್ ಹಾಗೂ ಪುದುಚೇರಿಯಿಂದ ಬಂದಿದ್ದ, ಇಬ್ಬರು ತಜ್ಝರ ತಂಡ ಆಸ್ಪತ್ರೆಯ ಮೌಲ್ಯ ಮಾಪನ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದಾರು. ಈಗಾಗ್ಲೇ ಜಿಲ್ಲಾಸ್ಪತ್ರೆಗೆ ಪ್ರಶಸ್ತಿ ನೀಡಿರುವ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಹಣಕಾಸು ನೆರವು ನೀಡಲಿದೆ. ಈ ಮೂಲಕ ಜಿಲ್ಲಾಸ್ಪತ್ರೆಯಲ್ಲಿ ಉತ್ತಮ ಸೇವೆ ನೀಡಲು ಸಹಕಾರಿಯಾಗಲಿದೆ.
