ವರ ರಾಮಕೃಷ್ಣರೊಂದಿಗೆ ರಮ್ಯಾ ಮುಹೂರ್ತ ಇಂದು ನಡೆಯಬೇಕಿತ್ತು. ವಧುವಿನ ನಡವಳಿಕೆ ಕಂಡು ಮದುವೆ ಸಂಭ್ರಮದಲ್ಲಿದ್ದ ವರನ ಪೋಷಕರಿಗೆ ಶಾಕ್ ಆಗಿದೆ.
ತುಮಕೂರು(ನ.12): ಆರತಕ್ಷತೆಯಲ್ಲಿ ಹಾರ ಹಾಕುವಾಗ ನಗು ನಗುತ್ತಲೇ ಇದ್ದ ವಧು ಆರತಕ್ಷತೆ ಮುಗಿಯುತ್ತಿದ್ದಂತೆ ರಾತ್ರೋ ರಾತ್ರಿ ಪರಾರಿಯಾದ ಘಟನೆ ತುಮಕೂರಿನ ಕುಣಿಗಲ್ ತಾಲೂಕಿನ ಯಡಿಯೂರು ದೇವಸ್ಥಾನದಲ್ಲಿ ನಡೆದಿದೆ.
ವರ ರಾಮಕೃಷ್ಣರೊಂದಿಗೆ ರಮ್ಯಾ ಮುಹೂರ್ತ ಇಂದು ನಡೆಯಬೇಕಿತ್ತು. ವಧುವಿನ ನಡವಳಿಕೆ ಕಂಡು ಮದುವೆ ಸಂಭ್ರಮದಲ್ಲಿದ್ದ ವರನ ಪೋಷಕರಿಗೆ ಶಾಕ್ ಆಗಿದೆ. ಆರತಕ್ಷತೆಯಲ್ಲಿ ಖುಷಿಯಿಂದಲೇ ಇದ್ದ ವಧು ರಮ್ಯಾ ರಾತ್ರಿಯಿಂದ ಕಾಣೆಯಾಗಿದ್ದಾಳೆ. ವರ ರಾಮಕೃಷ್ಣ ಯಡಿಯೂರು ನಿವಾಸಿಯಾಗಿದ್ದು ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿದ್ದಾನೆ. ವಧು ರಮ್ಯಾ ಬೆಂಗಳೂರಿನ ಕಾಮಾಕ್ಷಿಪಾಳ್ಯ ನಿವಾಸಿ. ಈಕೆ ಓಡಿ ಹೋಗಿದಕ್ಕೆ ಕಾರಣ ತಿಳಿದು ಬಂದಿಲ್ಲ.
