ಪ್ರಸಿದ್ಧ ಪ್ರಸಾದವೆಂದ ಪರಿಗಣಿಸಲಾಗಿರುವ ಲಡ್ಡು ಮಾರಾಟದಿಂದ ---
ತಿರುಪತಿ(ಫೆ.14): ಇಲ್ಲಿನ ವಿಶ್ವಪ್ರಸಿದ್ಧ ತಿರುಪತಿ ತಿರುಮಲ ದೇಗುಲಕ್ಕೆ 2017-18ರ ವಿತ್ತೀಯ ವರ್ಷದಲ್ಲಿ 2,858 ಕೋಟಿ ವರಮಾನ ಬರುವ ನಿರೀಕ್ಷೆಯಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ ಹೇಳಿದೆ. ಭಕ್ತಾದಿಗಳಿಂದ ಹುಂಡಿಗೆ ಹಾಕುವ 1,110 ಕೋಟಿ, ವಿವಿಧ ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲಾಗಿರುವ ಹಣಕ್ಕೆ 807.7 ಕೋಟಿ ಬಡ್ಡಿ, ಭಕ್ತಾದಿಗಳ ಕೂದಲು ಮಾರಾಟದಿಂದ 100 ಕೋಟಿ, ದರ್ಶನದ ಟಿಕೆಟ್‌ನಿಂದ 256 ಕೋಟಿ, ಪ್ರಸಿದ್ಧ ಪ್ರಸಾದವೆಂದ ಪರಿಗಣಿಸಲಾಗಿರುವ ಲಡ್ಡು ಮಾರಾಟದಿಂದ 165 ಕೋಟಿ ಮತ್ತು ಭಕ್ತಾದಿಗಳು ಬಂದು ಕೆಲ ದಿನಗಳ ಕಾಲ ನೆಲೆಸುವುದರಿಂದ 124 ಕೋಟಿ ಸಂಪಾದನೆಯಾಗುವ ಸಾಧ್ಯತೆಯಿದೆ. ಇದರಲ್ಲಿ, ಇಂಜಿನಿಯರ್ ಕಾರ್ಯಗಳಿಗೆ 200 ಕೋಟಿ ಮತ್ತು ಖಾಯಂ ಸಿಬ್ಬಂದಿ ಮತ್ತು ಗುತ್ತಿಗೆ ಕಾರ್ಮಿಕರ ವೇತನಕ್ಕಾಗಿ 828 ಕೋಟಿ ವೆಚ್ಚವಾಗಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
