ಅಮೆರಿಕ ಅಧ್ಯಕ್ಷರ ಕುರಿತು ಇದೆಂತಾ ಹೊಗಳಿಕೆ?! ಟ್ರಂಪ್ ಶಿಷ್ನ ಅಸಮಾನ್ಯ ಎಂದ ನೀಲಿ ಚಿತ್ರ ತಾರೆ! ಸ್ಟಾರ್ಮಿ ಡೇನಿಯಲ್ಸ್ ಬರೆದ ಪುಸ್ತಕದಲ್ಲಿ ಏನಿದೆ?! ಟ್ರಂಪ್ ಜೊತೆಗಿನ ಮಂಚದಾಟದ ರಹಸ್ಯ ಬಿಚ್ಚಿಟ್ಟ ನಟಿ 

ವಾಷಿಂಗ್ಟನ್(ಸೆ.19): ಅಮೆರಿಕ ಅಧ್ಯಕ್ಷರ ಅಫೇರ್ ವಿಷಯ ಹಲವು ಬಾರಿ ಸುದ್ದಿಯಲ್ಲಿತ್ತು. ಈಗ ಡೊನಾಲ್ಡ್ ಟ್ರಂಪ್ ನನ್ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎಂದು ನೀಲಿ ಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್ ಆರೋಪಿಸಿದ್ದಾರೆ. 

Add Asianetnews Kannada as a Preferred SourcegooglePreferred

ಫುಲ್ ಡಿಸ್ಕ್ಲೋಷರ್ ಎಂಬ ಪುಸ್ತಕದಲ್ಲಿ ಡೊನಾಲ್ಡ್ ಟ್ರಂಪ್ ಬಗ್ಗೆ ಬರೆದಿರುವ ಸ್ಟಾರ್ಮಿ ಡೇನಿಯಲ್ಸ್, " ಡೊನಾಲ್ಡ್ ಟ್ರಂಪ್ ಅಸಮಾನ್ಯ ಶಿಷ್ನ ಹೊಂದಿದ್ದಾರೆ ಎಂದು ಹೇಳಿದ್ದಾರೆ. 

ದಿ ಗಾರ್ಡಿಯನ್ ಗೆ ಸಿಕ್ಕಿರುವ ಮಾಹಿತಿಯ ಪ್ರಕಾರ, 2006 ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನಡೆದ ಸೆಲಬ್ರಿಟಿ ಗಾಲ್ಫ್ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಹಾಸಿಗೆ ಹಂಚಿಕೊಂಡಿದ್ದಾಗಿ ಹೇಳಿರುವ ಸ್ಟಾರ್ಮಿ ಡೇನಿಯಲ್ಸ್, ಡೊನಾಲ್ಡ್ ಟ್ರಂಪ್ ಅಸಮಾನ್ಯ ಮರ್ಮಾಂಗ ಹೊಂದಿದ್ದಾರೆ ಎಂದು ಹೇಳಿದ್ದಾರೆ. 

ಡೊನಾಲ್ಡ್ ಟ್ರಂಪ್ ಅವರೊಂದಿಗೆ ಲೈಂಗಿಕ ಕ್ರಿಯೆ ಅತ್ಯಂತ ಕನಿಷ್ಠ ಸಂತಸ ನೀಡಿತ್ತು ಎಂದು ಹೇಳಿರುವ ಸ್ಟಾರ್ಮಿ ಡೇನಿಯಲ್ಸ್, ಡೊನಾಲ್ಡ್ ಟ್ರಂಪ್ ಅವರ ಮರ್ಮಾಂಗ ಮಾರಿಯೋ ಕಾರ್ಟ್ ನಲ್ಲಿ ಬರುವ ಮಶ್ರೂಮ್ ಪಾತ್ರದ ರೀತಿಯಲ್ಲಿತ್ತು ಎಂದು ಪುಸ್ತಕದಲ್ಲಿ ಬರೆದಿರುವುದನ್ನು ದಿ ಗಾರ್ಡಿಯನ್ ವರದಿ ಮಾಡಿದೆ. 

ಆದರೆ ನೀಲಿ ಚಿತ್ರತಾರೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದನ್ನು ಡೊನಾಲ್ಡ್ ಟ್ರಂಪ್ ಹಲವು ಬಾರಿ ಅಲ್ಲಗಳೆದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸ್ಟಾರ್ಮಿ ಡೇನಿಯಲ್ಸ್ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಈ ರೀತಿಯ ಆರೋಪಗಳನ್ನು ಮಾಡದಂತೆ 130,000 ಅಮೆರಿಕನ್ ಡಾಲರ್ ನಷ್ಟು ಆಮಿಷವೊಡ್ಡಲಾಗಿತ್ತು ಎಂದು ಹೇಳಿದ್ದರು.