ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೀರ್ಘ ಕಾಲದಿಂದ ಪತ್ನಿ ತೊರೆದಿದ್ದಾರೆ ಎಂಬ ವಿಷಯ ತಿಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಭಾರತದ ಪ್ರಧಾನಿಗೆ ವಧು ಹೊಂದಿಸಿ ಕೊಡುವುದಾಗಿ ತಮಾಷೆ ಮಾಡಿದ್ದರೆಂದು ಹೇಳಲಾಗಿದೆ. 

ಟ್ರಂಪ್‌ ಜಾಗತಿಕ ನಾಯಕರ ಜೊತೆ ‘ರಾಜತಾಂತ್ರಿಕ ಸಂಪ್ರದಾಯಭಂಗ’ ಮಾಡಿದ ಘಟನೆಗಳ ಉಲ್ಲೇಖವುಳ್ಳ ಲೇಖನವೊಂದರಲ್ಲಿ ಈ ಮಾಹಿತಿ ಹಂಚಿಕೊಳ್ಳಲಾಗಿದೆ. 

ಕಳೆದ ವರ್ಷ ಅಮೆರಿಕ ಪ್ರವಾಸದ ಸಂದರ್ಭ, ಮೋದಿ ತಮ್ಮ ಪತ್ನಿಯೊಂದಿಗೆ ಬರುತ್ತಿಲ್ಲ ಎಂದು ಆಪ್ತರು ಹೇಳಿದಾಗ ಟ್ರಂಪ್‌, ‘ಓ, ನಾನು ಅವರಿಗೆ ಯಾರನ್ನಾದರೂ ಹೊಂದಿಸಿ ಕೊಡಬಲ್ಲೆ’ ಎಂದಿದ್ದಾರೆ. 

ಅಲ್ಲದೆ, ಟ್ರಂಪ್‌ಗೆ ದಕ್ಷಿಣ ಏಷ್ಯಾ ರಾಷ್ಟ್ರಗಳ ಬಗ್ಗೆಯೂ ಹೆಚ್ಚು ಸ್ಪಷ್ಟತೆಯಿದ್ದಂತಿಲ್ಲ. ದಕ್ಷಿಣ ಏಷ್ಯಾದ ನಕಾಶೆ ನೋಡಿ, ಅವರು ಇಲ್ಲಿನ ದೇಶಗಳನ್ನು ಗುರುತಿಸಿದ್ದರು. ಈ ವೇಳೆ ನೇಪಾಳವನ್ನು ‘ನಿಪ್ಪಲ್‌’ ಮತ್ತು ಭೂತಾನ್‌ ಅನ್ನು ‘ಬಟನ್‌’ ಎಂದು ಉಚ್ಚರಿಸಿದ್ದರು ಎನ್ನಲಾಗಿದೆ.