ಟೋಲ್ ಪ್ಲಾಜಾಗೆ ನುಗ್ಗಿದ ಬಿಯರ್ ತುಂಬಿದ ಲಾರಿ! ಡಿಕ್ಕಿ ಹೊಡೆದ ರಭಸಕ್ಕೆ ಹೊಳೆಯಂತೆ ಹರಿದ ಬಿಯರ್! ರಾಜಸ್ಥಾನದ ಕಿಶನ್‌ಗಢ್‌ ಟೋಲ್ ಪ್ಲಾಜಾದಲ್ಲಿ ಘಟನೆ! ಅಪಘಾತದಲ್ಲಿ ಟೋಲ್ ಪ್ಲಾಜಾಗೆ ಭಾರೀ ಹಾನಿ

ಕಿಶನ್‌ಗಢ್‌(ಸೆ.22): ರಾಜಸ್ಥಾನದ ಕಿಶನ್‌ಗಢ್‌ನ ಟೋಲ್ ಪ್ಲಾಜಾದಲ್ಲಿ, ಲಾರಿಯೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಟೋಲ್‌ ಬೂತ್‌ಗೆ ನುಗ್ಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏಕಾಏಕಿ ಟೋಲ್ ಬೂತ್ ಗೆ ನುಗ್ಗಿದ ಬಿಯರ್ ತುಂಬಿದ ಲಾರಿ ಟೋಲ್ ಪ್ಲಾಜಾಗೆ ನುಗ್ಗಿ ಅವಾಂತರ ಸೃಷ್ಟಿಸಿತು. ಇನ್ನು ಲಾರಿಯಲ್ಲಿದ್ದ ಬಿಯರ್ ಬಾಟಲ್ ಗಳು ರಸ್ತೆಯಲ್ಲಿ ಚೆಲ್ಲಿದ ಪರಿಣಾಮ ರಸ್ತೆಯಲ್ಲಿ ಬಿಯರ್ ಹೊಳೆಯಂತೆ ಹರಿಯಿತು.

Scroll to load tweet…


ಟೋಲ್ ಪ್ಲಾಜಾಗೆ ನುಗ್ಗಿದ ಲಾರಿಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಏಕಾಏಕಿ ನುಗ್ಗಿದ ಲಾರಿಯಿಂದ ಸೃಷ್ಟಿಯಾದ ಅವಾಂತರಕ್ಕೆ ಸಾಕ್ಷಿಯಾಗಿದೆ.

ಇನ್ನು ಟೋಲ್ ಪ್ಲಾಜಾಗೆ ಲಾರಿ ನುಗ್ಗಿದ ಪರಿಣಾಮ, ಟೋಲ್ ಪ್ಲಾಜಾಗೆ ಭಾರೀ ಹಾನಿಯಾಗಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.