ಪತ್ನಿ ಉಷಾ , ಮಗಳು ಆಭರಣ, ಐಶ್ವರ್ಯರಿಗೆ, ಒಬ್ಬನೇ ಮಗ ಆಕಾಶನಿಗೆ ಏನು ಹೇಳಿ ಬಂದಿರಿ. ಹಬ್ಬಕ್ಕೆ ಇರುವುದಿಲ್ಲ. ಹೆದರಬೇಡಿ ಎಂದೇ ..ಹೆತ್ತಮ್ಮ ಗೌರಮ್ಮ, ಗಣೇಶನ ಹಬ್ಬಕ್ಕಿಲ್ಲದ ಮಗನನ್ನ ಅತ್ತೇ ಕಳುಹಿಸಿಕೊಟ್ಟರೆ.... ಇಷ್ಟು ಹೊತ್ತಿಗೆ ಮುಖ್ಯಮಂತ್ರಿಯಾಗಿ ಅದೆಷ್ಟು ವರ್ಷಗಳು ಕಳೆಯಬೇಕಿತ್ತು? ಆಗಲಿಲ್ಲ‌ ಏಕೆ? 

ಇನ್ನೂ ಎಲ್ಲ ಕೂದಲು ಬೆಳ್ಳಗಾಗಿಲ್ಲ, ನಾಯಕರಿದ್ದಾರೆ ಸಾಕಷ್ಟು, ಸರದಿ ಮುಗಿಯಲಿ ಎಂದು ನನಗೇ ಹೇಳಿದ್ದಿರಿ...ನಂಬುತ್ತೇನೆ. ಅದಷ್ಟೇ ನಿಜವೇ? ನಿಮ್ಮನ್ನ ಕಟ್ಟಿಹಾಕಿಯೇ ಮುಸಿಮುಸಿ ನಕ್ಕವರಿಲ್ಲವೇ? ಹುಸಿನಗೆ ಊರಿಗೆ ಮಾರಿ ಎಂಬಂತೆ! ವಿವಾದಗಳು ಹಾಳಾಗಲಿ. ಯಾವುದೇ ಪಕ್ಷಕ್ಕಾದರೂ ಸಂಪತ್ತಿನಂಥ ರಾಜಕಾರಣಿ. ಪಕ್ಷದ ಸಮಸ್ಯೆಗಳು ನಿಮ್ಮನ್ನೇ‌ ಹುಡುಕಿ ಬಂದಂತೆ ಬಗೆಹರಿಸಿದ್ದೀರಿ. 
ಹೌದು ಇದಷ್ಟೇ ನಿಜ .

3ನೇ ದಿನ ED ವಿಚಾರಣೆ ಮುಗಿಸಿಕೊಂಡು ಹೊರ ಬಂದ ಡಿಕೆಶಿ ಖಡಕ್ ಮಾತು

ನಾವೇ‌ ಹೇಳುವಂತೆ ಟ್ರಬಲ್ ಶೂಟರ್,  One of the daring and dynamic leader of our time.....ದೊಡ್ಡ ಆಲಹಳ್ಳಿ ಕೆಂಪೇಗೌಡ ಶಿವಕುಮಾರ್ ಬಗ್ಗೆ ಕೆಲವು ವಿಷಯ ಬರೆಯಲಿಕ್ಕಿದೆ. ಇದು ನಿರ್ವಿವಾದ. ಡಿಕೆಶಿ ಬದುಕಿದ್ದು, ಬಹುಶಃ ಬದುಕುವುದು ಹೀಗೆಯೇ..ಏನಿವಾಗ ಎನ್ನುವಂತೆ? ಕಾಲನ ಪರೀಕ್ಷೆಗೊಳಪಟ್ಟ ನಾಯಕ!

ಇದೇ ಮುಳುವಾಯಿತಾ? ಗೊತ್ತಿಲ್ಲ..ಕನಕಪುರದಿಂದ ಕಿವಿ ಮೇಲೆ ಹೂವಿಟ್ಟುಕೊಂಡು ಬಂದಿಲ್ಲ.ನಿಜ. ಆದರೆ ನಿಮಗೆ ಕಷ್ಟ ಎಂದಾಗಲೆಲ್ಲಾ ಹೂಕುಂಡವನ್ನೆ ನಿಮ್ಮ ತಲೆ ಮೇಲೆ ಇಟ್ಟವರಿಲ್ಲವೇ? ರಾಜಕಾರಣದ ಅರವತ್ತನಾಲ್ಕು ಪ್ಲಸ್ ಎರಡು ವಿದ್ಯೆಗಳನ್ನ ಕಲಿತ ನೀವು, ದೆಹಲಿಯ ಭಾಷೆಗೆ ಅರ್ಥ ಕಲಿತುಕೊಳ್ಳಲಿಲ್ಲ. ಅದೇ‌ ಹಾದಿ ತಪ್ಪಿಸಿತೇ?

ಮಹಾರಾಷ್ಟ್ರದ ಕಾಂಗ್ರೆಸ್ ಗೆ ಕಷ್ಟ ಬಂದರೆ ಸೋನಿಯಾ ಗಾಂಧಿಗೆ ಭರತ ಖಂಡದಲ್ಲಿ ಕಂಡಿದ್ದು ಇದೇ ಶಿವು. ಸಲುಹಿದಿರಿ ಅಷ್ಟೂ ಶಾಸಕರನ್ನ. ಅಹ್ಮದ್ ಪಟೇಲ್‌ ಗೆಲ್ಲ ಬೇಕೆಂದಾಗ, ಗುಜರಾತ್ ಕಾಂಗ್ರೆಸ್ ಶಾಸಕರಿಗೆ ನಿಮ್ಮದೇ ಈಗಲ್ ಟನ್ ನಲ್ಲಿ ಕರೆದು ಊಟ ಹಾಕಿದಿರಿ..

ಅಪ್ಪನ ನೆನೆದು ಕರಗಿದ ಡಿಕೆಶಿ; ಮಗನ ಕಣ್ಣೀರು ನೋಡಿ ಕೊರಗಿದ ಅಮ್ಮ!

ಬಿಜೆಪಿ ವಿರುದ್ಧ ಸಡ್ಡು ಹೊಡೆದು ಬಹುಮತ ಸಾಬೀತು ಪಡಿಸಲಿಕ್ಕೆ ನಂಬಿಕೊಂಡರೆ ಇನ್ನೊಬ್ಬ ಗಂಡಿರಲಿಲ್ಲ. ಬಹುಮತ ನಮ್ಮದೇ ಎಂದು ಗೆಲ್ಲುವುದಕ್ಕೆ ಮುಂಚೇಯೇ ಸದನದಲ್ಲಿ ಬೀಗುತ್ತಿದ್ದವರ ನಡುವೆ, ವಿಧಾನಸೌಧದ ಕಂಬಕ್ಕೆ ಒರಗಿ ಆನಂದ್ ಸಿಂಗ್, ಪ್ರತಾಪ್ ಗೌಡ ಪಾಟೀಲ್ ಗೆ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಿರಿ..ಸೋನಿಯಾರಿಗೂ ಕೇಳಿಸುವಂತೆ ರಾಹುಲ್ ಗೆ ಕೊಟ್ಟ ಮಾತದು.. Commitment ಅಂದರೆ ಹಾಗೆ ಅಲ್ಲವಾ?

ಕೆಪಿಸಿಸಿ ಅಧ್ಯಕ್ಷ ಸ್ಥಾನ...ನಿಮ್ಮ‌ ಕನಸಿನಂಥ ಹುದ್ದೆ. ಅದೇಕೋ ಗೊತ್ತಿಲ್ಲ ದಕ್ಕಬೇಕಾದಾಗಲೆಲ್ಲಾ ಅಡ್ಡಗಾಲು. ನೀವು ಅಧ್ಯಕ್ಷರಾಗಬೇಕೆಂದು ದೆಹಲಿಯ ತುಂಬಿದ ಸಭೆಯಲ್ಲಿ ಕೈ ಎತ್ತಿದವರು. ಅವರೊಬ್ಬರೆ. ಸಹೋದರ ಸುರೇಶ್! ಸುಮ್ಮನೇ ಒಂಟಿಯಾಗಿಬಿಟ್ಟಿರಿ.. ಕಾಲಭೈರವನ ಪಾದವೇ ಸಾಕ್ಷಿಯಾಗುವಂತೆ ದೇವೇಗೌಡರ ಮಗನನ್ನ ಮುಖ್ಯಮಂತ್ರಿ ಮಾಡಿದವರು. ದೂರವಾಣಿಯಲ್ಲೇ ಸಂತೈಸಿ ಬಿಟ್ಟರೇ?

ತಪ್ಪೇ ಮಾಡಿದ್ದರೆ ಕಾನೂನು ನೋಡಿಕೊಳ್ಳುತ್ತದೆ. ಇಲ್ಲಿ ತಪ್ಪುಗಳಿಗೆ ಸಮರ್ಥನೆಯೂ ಇಲ್ಲ. ವಿಷಯ ಅದಲ್ಲ. ನಿಮ್ಮ‌ ಪಕ್ಕದಲ್ಲಿ ಕೂತೇ ಧೈರ್ಯ ಹೇಳಬೇಕಿದ್ದ ಋಣಿಗಳು ಎಲ್ಲಿ. ಹೈಕಮಾಂಡ್ ಹೇಳಿದ ಮೇಲೆ, ಬಿದ್ದು ಹೋಗೋ ಮಾತು‌ ಎದ್ದು ಹೋಗಲಿ ಎಂಬಂತೆ ಕವಡೆ ಕಾಸಿನ ಎರಡು ಪ್ರೆಸ್ ಮೀಟ್.

ಬಿಜೆಪಿಗೆ ಡಿಕೆಶಿ ಸೆಳೆಯಲು ತಂತ್ರ : ಮಾಜಿ ಸಂಸದ ಧ್ರುವನಾರಾಯಣ್ ಆರೋಪ

ನೀವೇ ಬರೆದುಕೊಂಡಂತೆ ಭರ್ತಿ 840 ಕೋಟಿಗಳ ಒಡೆಯ, ಎಂಟೂವರೆ ಕೋಟಿಯ ಲೆಕ್ಕದಲ್ಲಿ ಇಡಿ ಎದುರು‌ ಕೂತಿದ್ದೀರಿ....ಇನ್ವೆಸ್ಟಿಗೇಷನ್ ಆಫಿಸರ್ ಮೋನಿಕ ಊಟಕ್ಕೆ ಅನುಮತಿಸಿದರೆ, ದೆಹಲಿಯ ಬೀದಿಗಳಲ್ಲಿ ಅಡ್ಡಾಡಿ ಊಟ ಮಾಡಬಹುದು. ಎಲ್ಲಿಗೆ ಬಂದು ನಿಂತಿರಿ.

ಇಡಿ ವಿಚಾರಣೆಗೂ ಮುನ್ನ ನೀವೇ‌ ನಂಬಿದ್ದ‌‌ ಕೆಂಕೇರಮ್ಮ, ಕಬ್ಬಾಳಮ್ಮ ಮಾತ್ರ ನಿಮ್ಮನ್ನ ಕಾಪಾಡಬೇಕೆ? Why are you alone...ನೀವು ಒಬ್ಬರಾದಿರಿ ಏಕೆ? ಜೊತೆಗೆ ಬಂದು ಕೂತು ಬಿಟ್ಟರೆ ಇಡಿ‌‌ ನಿಮ್ಮನ್ನ ಏನೂ ಮಾಡಲಾಗದೆಂದೋ, ಜಗತ್ತನ್ನೇ ಗೆದ್ದು ಬಿಡುತ್ತೀರೆಂದೋ ಅಲ್ಲ. ಇದು ಉಪಕೃತರ ಋಣದ ಪ್ರಶ್ನೆ..ಅದಕ್ಕೆ ಹೇಳಿದ್ದು ನೀವು ಕನಕಪುರದ ಕರಿಬೇವು...ಮತ್ತೂ ಬರೆದೇನು...ಈಗಲ್ಲ!

- ರಮಾಕಾಂತ್ ಆರ್ಯನ್