ಮೈಸೂರು [ಸೆ.03] : ಕಾಂಗ್ರೆಸ್ ನಾಯಕರಿಗೆ ಇಡಿ, ಐಟಿ ಎಂದು ಹೆದರಿಸಿ ತಮ್ಮ ಪಕ್ಷಕ್ಕೆ ಸೆಳೆಯುವ ತಂತ್ರ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ  ಮಾಜಿ ಸಂಸದ ಧ್ರುವನಾರಾಯಣ ಆರೋಪಿಸಿದ್ದಾರೆ. 

ಮೈಸೂರಿನಲ್ಲಿ ಮಾತನಾಡಿದ ಧ್ರುವನಾರಾಯಣ್ ರಾಜ್ಯದಲ್ಲಿ ಎದುರಾದ ನೆರೆ ಪರಿಸ್ಥಿತಿ ನಿರ್ವಹಣೆ ಹಾಗೂ ಆರ್ಥಿಕ ಪರಿಸ್ಥಿತಿ ಸುಧಾರಣೆ ವಿಚಾರದಲ್ಲಿ ಬಿಜೆಪಿ ಸೋತಿದೆ ಎಂದರು. 

ಡಿ.ಕೆ. ಶಿವಕುಮಾರ್‌ ಅವರನ್ನು 1985 ರಿಂದಲೇ ನಾನು ಬಲ್ಲೆ. ಆ ಕಾಲದಿಂದಲೇ ಅವರು ಗಣಿ ಗಾರಿಕೆ ಮಾಡುತ್ತಿದ್ದಾರೆ. ಅವರು ದುಡಿದ ಹಣದಿಂದಲೇ ಆದಾಯ ಪಡೆದವರು. ಬೇರೆಯವರೂ ಕೂಡ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದಾರೆ. ಅವರನ್ನೇಕೆ ತನಿಖೆ ಮಾಡುತ್ತಿಲ್ಲ. ಗುಜರಾತ್ ಶಾಸಕರನ್ನು ರಕ್ಷಣೆ ಮಾಡಿದ್ದಕ್ಕಾಗಿ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಧ್ರುವ ನಾರಾಯಣ್ ಆರೋಪಿಸಿದರು. 

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತನಿಖೆ ಮಾಡಲಿ ಆದರೆ ಉದ್ದೇಶ ಪೂರ್ವಕವಾಗಿ ಡಿಕೆಶಿಗೆ ಮಾನಸಿಕವಾಗಿ ಹಿಂಸೆ ಕೊಡಲಾಗುತ್ತಿದೆ. ಶೀಘ್ರದಲ್ಲೇ ಅನರ್ಹರಾದ ಶಾಸಕರ 17 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು ಇದೇ ಕಾರಣಕ್ಕಾಗಿ ಶಿವಕುಮಾರ್ ಅವರನ್ನು ಟಾರ್ಗೆಟ್ ಬಿಜೆಪಿಯವರು ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು.   

ಬಿಜೆಪಿಗೆ ಸೇರಿ ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಗೃಹ ಸಚಿವ ಅಮಿತ್ ಶಾ ಅವರೇ ಆಫರ್ ಕೊಟ್ಟಿದ್ದಾರೆ.  ಇದೇ ಉದ್ದೇಶದಿಂದಲೇ ಅವರಿಗೆ ಟಾರ್ಚರ್ ಮಾಡಲಾಗುತ್ತಿದೆ ಎಂದು ಧ್ರುವ ನಾರಾಯಣ್ ಗಂಭೀರ ಆರೋಪ ಮಾಡಿದರು.