ತ್ರಿವಳಿ  ಮಕ್ಕಳಿಗೆ  ತಾಯಿಯೊಬ್ಬಳು ಜನ್ಮ ನೀಡಿದ್ದಾರೆ. ಬೀದರ್ ಜಿಲ್ಲಾಧಿಕಾರಿ ಅಂಗರಕ್ಷಕ ಹಣಮಂತರೆಡ್ಡಿಗೆ ಮೂವರು ಮಕ್ಕಳ ಭಾಗ್ಯ ಸಿಕ್ಕಿದೆ.  

ಬೆಂಗಳೂರು (ಮಾ. 21): ತ್ರಿವಳಿ ಮಕ್ಕಳಿಗೆ ತಾಯಿಯೊಬ್ಬಳು ಜನ್ಮ ನೀಡಿದ್ದಾರೆ. ಬೀದರ್ ಜಿಲ್ಲಾಧಿಕಾರಿ ಅಂಗರಕ್ಷಕ ಹಣಮಂತರೆಡ್ಡಿಗೆ ಮೂವರು ಮಕ್ಕಳ ಭಾಗ್ಯ ಸಿಕ್ಕಿದೆ.

ಎರಡು ಹೆಣ್ಣು ಒಂದು ಗಂಡು ಮಗುವಿಗೆ ತಾಯಿ ಆಶಾರಾಣಿ ಜನ್ಮ ನೀಡಿದ್ದಾರೆ. ತಾಯಿ, ಮಕ್ಕಳು ಆರೋಗ್ಯವಾಗಿದ್ದಾರೆ. ತೆಲಂಗಣದ ಸಂಗಾರೆಡ್ಡಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ.

ತ್ರಿವಳಿ ಮಕ್ಕಳ ಜನನದಿಂದ ಕುಟುಂಬ ಸಂತಸ ವ್ಯಕ್ತಪಡಿಸಿದೆ. ಬೀದರ್ ಜಿಲ್ಲಾ ಪೊಲೀಸ್’ನ ಡಿಎಆರ್ ಪೇದೆಯಾಗಿ ಹಣಮಂತರೆಡ್ಡಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.