ನವದೆಹಲಿ(ಜು.24): ಮುಸ್ಲಿಮರಲ್ಲಿ ಆಚರಣೆಯಲ್ಲಿರುವ ತ್ರಿವಳಿ ತಲಾಖ್‌ನಿಂದ ಮಹಿಳೆಯರಿಗಾಗುವ ಅನ್ಯಾಯ ಸರಿಪಡಿಸಲು ತ್ರಿವಳಿ ತಲಾಖ್ ಅನ್ನೇ ರದ್ದು ಮಾಡಲು ಕೇಂದ್ರ ಸರ್ಕಾರ ಹೊರಟಿರುವಾಗ, ಎಸ್‌ಪಿ ಮುಖಂಡ ರಿಯಾಜ್ ಅಹ್ಮದ್ ತ್ರಿವಳಿ ತಲಾಖ್ ಸಮರ್ಥಿಸಿಕೊಳ್ಳುವ ಮೂಲಕ ವಿವಾದದ ಕಿಚ್ಚು ಹೊತ್ತಿಸಿದ್ದಾರೆ.

ಮಹಿಳೆಯೊಬ್ಬರು ಪರ ಪುರುಷನ ಜತೆ ಅಕ್ರಮ ಸಂಬಂಧವಿಟ್ಟು ಕೊಂಡು, ತನ್ನ ಪತಿಗೆ ಅನ್ಯಾಯ ಮಾಡುತ್ತಿದ್ದರೆ, ಆ ವ್ಯಕ್ತಿಯ ಮುಂದೆ ಪತ್ನಿಗೆ ತ್ರಿವಳಿ ತಲಾಖ್ ಅಥವಾ ಪತ್ನಿಯನ್ನು ಕೊಲ್ಲುವ ಎರಡು ಆಯ್ಕೆಗಳಿರುತ್ತವೆ ಎಂದು ಎಸ್‌ಪಿ ಮುಖಂಡ ರಿಯಾಜ್ ಅಹ್ಮದ್ ವಿವಾದಾತ್ಮಕ ಹೇಳಿದ್ದಾರೆ.