ಮುಸ್ಲಿಂ ಮಹಿಳೆಯರ ಹಿತರಕ್ಷಣೆಗೆ ತಂದಿರುವ ಮಹತ್ವಪೂರ್ಣ ತ್ರಿವಳಿ ತಲಾಖ್‌ ಮಸೂದೆಗೆ ತಡೆಯೊಡ್ಡಿರುವ ಕಾಂಗ್ರೆಸ್‌ ಹಾಗೂ ಪ್ರತಿಪಕ್ಷಗಳ ವಿರುದ್ಧ ದೇಶಾದ್ಯಂತ ಶಾಂತಿಯುತ ಆಂದೋಲನ ನಡೆಯಬೇಕಿದೆ ಎಂದು ಕೇಂದ್ರ ಸಚಿವ ಅನಂತ ಕುಮಾರ್‌ ಹೇಳಿದ್ದಾರೆ. 

ನವದೆಹಲಿ: ಮುಸ್ಲಿಂ ಮಹಿಳೆಯರ ಹಿತರಕ್ಷಣೆಗೆ ತಂದಿರುವ ಮಹತ್ವಪೂರ್ಣ ತ್ರಿವಳಿ ತಲಾಖ್‌ ಮಸೂದೆಗೆ ತಡೆಯೊಡ್ಡಿರುವ ಕಾಂಗ್ರೆಸ್‌ ಹಾಗೂ ಪ್ರತಿಪಕ್ಷಗಳ ವಿರುದ್ಧ ದೇಶಾದ್ಯಂತ ಶಾಂತಿಯುತ ಆಂದೋಲನ ನಡೆಯಬೇಕಿದೆ ಎಂದು ಕೇಂದ್ರ ಸಚಿವ ಅನಂತ ಕುಮಾರ್‌ ಹೇಳಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದ್ದಾರೆ. ವಿಷಯಕ್ಕೆ ಸಂಬಂಧಿಸಿ ವಿವಿಧ ಸಂಘಟನೆಗಳು ಕೈಜೋಡಿಸಬೇಕು ಎಂದಿದ್ದಾರೆ.

ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಮಸೂದೆ ಹಾಗೂ ಎಸ್‌ಸಿ/ಎಸ್‌ಟಿಗಳ ಹಿತಾಸಕ್ತಿಯನ್ನು ಕಾಪಾಡುವ ಐತಿಹಾಸಿಕ ಮಸೂದೆಗಳು ಈ ಮುಂಗಾರು ಅಧಿವೇಶನದಲ್ಲಿ ಅಂಗೀಕಾರಗೊಂಡಿವೆ. 

ಮಹತ್ವದ ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ಐತಿಹಾಸಿಕ ನಿರ್ಣಯವನ್ನು ಕಾಂಗ್ರೆಸ್‌ ಸರ್ಕಾರ 1955ರಿಂದಲೂ ಮುಂದೂಡುತ್ತಾ ಬಂದಿತ್ತು. ಇದೇ ಅಧಿವೇಶನದಲ್ಲಿ ದಲಿತರ ಹಕ್ಕುಗಳ ರಕ್ಷಣೆಗೆ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಗಳ ಹಿತಾಸಕ್ತಿ ಕಾಪಾಡುವ ಐತಿಹಾಸಿಕ ಮಸೂದೆ ಅಂಗೀಕಾರಗೊಂಡಿದೆ ಎಂದು ಅವರು ತಿಳಿಸಿದ್ದಾರೆ.