ತ್ರಿಪುರಾದ ಅರಣ್ಯ ಸಚಿವ ನರೇಶ್ ಜಮಾತಿಯಾ ಅವರ ಲೈಂಗಿಕ ಹಗರಣ ಪ್ರಕರಣದ ಬಗ್ಗೆ ಚರ್ಚೆ ನಡೆಸಲು ವಿಧಾನಸಭೆಯಲ್ಲಿ  ಅವಕಾಶ ನಿರಾಕರಿಸಿದ್ದಕ್ಕೆ ಕಲಾಪ ನಡೆಯುತ್ತಿದ್ದ ವೇಳೆ ಕುಪಿತರಾದ ತೃಣಮೂಲ ಕಾಂಗ್ರೆಸ್ ಶಾಸಕ ಸುದೀಪ್ ರಾಯ್ ಬರ್ಮನ್, ಸ್ಪೀಕರ್ ರಾಮೇಂದ್ರ ಚಂದ್ರ ದೇಬ್‍ನಾಥ್ ಅವರ ಅಧಿಕಾರ ದಂಡವನ್ನು ಕಸಿದು ಓಡಿದ್ದಾರೆ.

ತ್ರಿಪುರಾ(ಡಿ.20): ಅರಣ್ಯ ಸಚಿವರೊಬ್ಬರು ವಿಧಾನಸಭೆಯ ಸ್ಪೀಕರ್ ಬಳಿ ಇದ್ದ ಅಧಿಕಾರದ ದಂಡ ಕಸಿದು ಸದನದಿಂದ ಹೊರಗೆ ಓಡಿ ಹೋದ ಹಾಸ್ಯಸ್ಪದ ಘಟನೆ ತ್ರಿಪುರಾದಲ್ಲಿ ನಡೆದಿದೆ.

ತ್ರಿಪುರಾದ ಅರಣ್ಯ ಸಚಿವ ನರೇಶ್ ಜಮಾತಿಯಾ ಅವರ ಲೈಂಗಿಕ ಹಗರಣ ಪ್ರಕರಣದ ಬಗ್ಗೆ ಚರ್ಚೆ ನಡೆಸಲು ವಿಧಾನಸಭೆಯಲ್ಲಿ ಅವಕಾಶ ನಿರಾಕರಿಸಿದ್ದಕ್ಕೆ ಕಲಾಪ ನಡೆಯುತ್ತಿದ್ದ ವೇಳೆ ಕುಪಿತರಾದ ತೃಣಮೂಲ ಕಾಂಗ್ರೆಸ್ ಶಾಸಕ ಸುದೀಪ್ ರಾಯ್ ಬರ್ಮನ್, ಸ್ಪೀಕರ್ ರಾಮೇಂದ್ರ ಚಂದ್ರ ದೇಬ್‍ನಾಥ್ ಅವರ ಅಧಿಕಾರ ದಂಡವನ್ನು ಕಸಿದು ಓಡಿದ್ದಾರೆ.

ನರೇಶ್ ಜಮಾತಿಯಾ ಲೈಂಗಿಕ ಹಗರಣ ಪ್ರಕರಣದ ಬಗ್ಗೆ ಚರ್ಚೆ ನಡೆಸಬೇಕೆಂದು ಬರ್ಮನ್ ಪಟ್ಟು ಹಿಡಿದಿದ್ದರು. ಆದರೆ ಈ ಚರ್ಚೆಗೆ ಸ್ಪೀಕರ್ ದೇಬ್‍ನಾಥ್ ಅನುಮತಿ ನಿರಾಕರಿಸಿದ್ದರು. ಚರ್ಚೆಗೆ ಅನುಮತಿ ನಿರಾಕರಿಸಿದ್ದಕ್ಕೆ ಸಿಟ್ಟುಗೊಂಡ ಬರ್ಮನ್ ಸ್ಪೀಕರ್ ಅವರ ಅಧಿಕಾರ ದಂಡ ಕಸಿದು ಸದನದ ಸುತ್ತಲೂ ಓಡಿ, ಕಲಾಪಕ್ಕೆ ಭಂಗ ಮಾಡಿದ್ದಾರೆ.

ಬರ್ಮನ್ ಕೈಯಲ್ಲಿದ್ದ ಅಧಿಕಾರ ದಂಡವನ್ನು ವಾಪಸ್ ಪಡೆಯಲು ಕಾಂಗ್ರೆಸ್ ಮತ್ತು ಟಿಎಂಸಿ ಶಾಸಕರು ಅವರ ಹಿಂದೆಯೇ ಓಡಿದ್ದಾರೆ. ಸದನದಲ್ಲಿ ಕೋಲಾಹಲ ಸೃಷ್ಟಿಯಾದಾಗ ಸ್ಪೀಕರ್ ಕಲಾಪ ಮುಂದೂಡಿದ್ದಾರೆ.