Asianet Suvarna News Asianet Suvarna News

ಕೊಡಗಿನ ಕಾನನದಲ್ಲಿ ಆದಿವಾಸಿಗಳ ರಸ್ತೆ ನುಂಗಿದ ರೆಸಾರ್ಟ್!

ಅಷ್ಟಕ್ಕೂ ಇವರಿಗೆಲ್ಲ ಅನ್ಯಾಯವಾಗಿದ್ದು ಒಂದು ರೆಸಾರ್ಟ್​ನಿಂದ, ಅದುವೇ ಕೊಡಗಿನ ತಾಮರ ರೆಸಾರ್ಟ್​. ದಿನದಿಂದ ದಿನಕ್ಕೆ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ತಾನೆ ಇರುವ ಈ ತಾಮರ, ಈಗ ಆದಿವಾಸಿಗಳ ರಸ್ತೆ ಮೇಲು ಕೂಡ ಕಣ್ಣು ಹಾಕಿದೆ. ರಸ್ತೆಯಲ್ಲಿ ಓಡಾಡದಂತೆ ಸೋಲಾರ್ ಬೇಲಿ ನಿರ್ಮಿಸಿದೆ.

Tribals Accuse Resort of Encroaching Road

ಮಡಿಕೇರಿ (ಫೆ.20): ಮಂಜಿನ ನಗರಿ ಮಡಿಕೇರಿಯಲ್ಲಿ ಆದಿವಾಸಿಗಳಿಗೆ ಇತ್ತೀಚೆಗೆ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿದೆ. ದಿಡ್ಡಳ್ಳಿಯ ಆದಿವಾಸಿಗಳನ್ನು ಒಕ್ಕಲೆಬ್ಬಿಸಿದ ವಿಚಾರ ಈ ಹಿಂದೆ ಸುದ್ದಿಯಾಗಿತ್ತು. ಇದೀಗ ರೆಸಾರ್ಟೊಂದು ಹಾಡಿ ಜನರ ರಸ್ತೆಯನ್ನೇ ನುಂಗಿಹಾಕಿದ್ದು, ರಸ್ತೆ ಉಳಿಸಿಕೊಳ್ಳಲು ಬುಡಕಟ್ಟು ಜನ ಹೋರಾಟಕ್ಕಿಳಿದಿದ್ದಾರೆ.

Tribals Accuse Resort of Encroaching Road

ಮುಚ್ಚಿರುವ ಗೇಟ್ ರಸ್ತೆ ಬದಿಯಲ್ಲಿ ಸೋಲಾರ್ ಬೇಲಿಯ ತಂತಿ. ಮಾನವ ಸರಪಳಿ ನಿರ್ಮಿಸಿ ನ್ಯಾಯಕ್ಕಾಗಿ ಅಂಗಲಾಚುತ್ತಿರುವ ಈ ದೃಶ್ಯ ಕಂಡು ಬಂದಿದ್ದು ಕೊಡಗಿನ ಕಾನನದಲ್ಲಿ.

Tribals Accuse Resort of Encroaching Road

ಅಷ್ಟಕ್ಕೂ ಇವರಿಗೆಲ್ಲ ಅನ್ಯಾಯವಾಗಿದ್ದು ಒಂದು ರೆಸಾರ್ಟ್​ನಿಂದ, ಅದುವೇ ಕೊಡಗಿನ ತಾಮರ ರೆಸಾರ್ಟ್​. ದಿನದಿಂದ ದಿನಕ್ಕೆ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ತಾನೆ ಇರುವ ಈ ತಾಮರ, ಈಗ ಆದಿವಾಸಿಗಳ ರಸ್ತೆ ಮೇಲು ಕೂಡ ಕಣ್ಣು ಹಾಕಿದೆ. ರಸ್ತೆಯಲ್ಲಿ ಓಡಾಡದಂತೆ ಸೋಲಾರ್ ಬೇಲಿ ನಿರ್ಮಿಸಿದೆ.

Tribals Accuse Resort of Encroaching Road

ಕೇಂದ್ರದ ಪ್ರಭಾವಿ ಮುಖಂಡರೊಬ್ಬರ ಈ ‘ತಾಮರ’ ರೆಸಾರ್ಟ್​ ಕಾಡಿನ ಜಾಗ ಒತ್ತುವರಿ ಮಾಡಿಕೊಂಡಿದ್ದಷ್ಟೇ ಅಲ್ಲದೇ, ಆದಿವಾಸಿಗಳ ರಸ್ತೆಯನ್ನೇ ನುಂಗಿಹಾಕಲು ಹೊರಟಿದಿಯಂತೆ. ಪರ ಊರಿನ ಸಂಪರ್ಕಕ್ಕೆ ಇರುವ ಒಂದೇ ಒಂದು ರಸ್ತೆ ಇದು. ಹೀಗಾಗಿ ಇದನ್ನು ಉಳಿಸಿಕೊಳ್ಳಲು ಜನರು ಬೀದಿಗಿಳಿದಿದ್ದಾರೆ. ಉಸ್ತುವಾರಿ ಸಚಿವರಿಗೂ ಮನವಿ ಮಾಡಿಕೊಂಡಿದ್ದಾರೆ.

Tribals Accuse Resort of Encroaching Road

ಹಣದ ಮೋಹಕ್ಕೆ ಬಿದ್ದಿರುವ ತಾಮರ ರೆಸಾರ್ಟ್​, ಆದಿವಾಸಿಗಳ ಮೂಲಭೂತ ಸೌಕರ್ಯವನ್ನೇ ನುಂಗಿ ಹಾಕಲು ಹೊರಟಿದ್ದು ಯಾವ ನ್ಯಾಯ? ನ್ಯಾಯ ಕೊಡಿಸಬೇಕಾದವರು ಮೌನವಾಗಿದ್ದನ್ನು ನೋಡಿದಾಗ ಹಲವು ಅನುಮಾನ ಮೂಡುತ್ತಿವೆ. ಮತ್ತೊಂದು ದಿಡ್ಡಳ್ಳಿಯಂತ ಹೋರಟ ನಡೆಯುವ ಮುಂಚೆ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಲಿ.

ವರದಿ: ಗಿರಿಧರ್ ಕೆ.ಕೆ, ಕೊಡಗು

Follow Us:
Download App:
  • android
  • ios