ವಾಷಿಂಗ್ಟನ್[ಏ.13]: ಇನ್ಸ್ಟಾಗ್ರಾಂನಲ್ಲಿ ಅತ್ಯಂತ ಪ್ರಸಿದ್ಧ ದಂಪತಿ ಎಂದೇ ಖ್ಯಾತಿ ಪಡೆದಿರುವ ಅಮೆರಿಕಾದ ಕೆಲಿ ಕ್ಯಾಸಿಲ್ ಹಾಗೂ ಕೋಡಿ ವರ್ಕ್ ಮೆನ್ ಕ್ಲಿಕ್ಕಿಸಿಕೊಂಡಿರುವ ಪೋಟೋ ಒಂದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಜನರು ಇದೊಂದು ಅಪಾಯಕಾರಿ ಹಾಗೂ ಮೂರ್ಖತನದ ಪ್ರದರ್ಶನ ಎಂದಿದ್ದಾರೆ. ಇನ್ನು ಈ ಫೋಟೋ ತೆಗೆಸಿಕೊಳ್ಳುವ ವೇಳೆ ಅಗತ್ಯ ಎಚ್ಚರಿಕೆ ವಹಿಸಲಾಗಿತ್ತು ಎಂದು ದಂಪತಿ ತಿಳಿಸಿದ್ದಾರೆ.

ಸದ್ಯ ಈ ಟ್ರಾವೆಲಿಂಗ್ ದಂಪತಿ ಬಾಲಿಯಲ್ಲಿದೆ. ಸದ್ಯ ವೈರಲ್ ಆದ ಫೋಟೋದಲ್ಲಿ ಕೆಲಿ ಈಜುಕೊಳದ ಗೋಡೆಯ ಆಸರೆಯಲ್ಲಿ ನಿಂತಿದ್ದು, ಈಜುಕೊಳದ ಒಳ ಭಾಗದಲ್ಲಿರುವ ಗಂಡ ಆಕೆಗೆ ಮುತ್ತು ನೀಡುವುದನ್ನು ನೋಡಬಹುದು. ಡೈಲಿ ಮೇಲ್ ವರದಿಯನ್ವಯ ಈ ಫೋಟೋ Ubud ನಲ್ಲಿರುವ ಕಯೋನ್ ಅರಣ್ಯ ದೊಳಗಿರುವ ರೆಸಾರ್ಟ್ ನಲ್ಲಿ ಕ್ಲಿಕ್ಕಿಸಲಾಗಿದೆ ಎಂದು ತಿಳಿದು ಬಂದಿದೆ.

 
 
 
 
 
 
 
 
 
 
 
 
 

🇺🇸 Our greatest strength in life, our most important principle, is discernment. Only you can know your body, feel the space around you and understand your capabilities. We would all do well to remember this, knowing that not every action, style or path we witness through others is or should be, replicated. At the end of the day we are to hold ourselves accountable for the decisions that we make. ※ 🇵🇦 La mejor fortaleza en la vida, el moral más importante, es discernimiento. Solo puedes entender tu cuerpo, sentir el espacio que te rodea y comprender tus capacidades. Haríamos bien en recorder este, sabiendo que no toda acción, estilo o camino que presenciamos por otros es o debe ser, replicado. Al final del dia, somos responsables de las decisiones que hacemos. ※ Thank you @kayonjungleresort for an unforgettable experience! ※ ※ #balitravel #couplesgoals #ilovetravel #bestplaces #baligasm #ubud #balitravel #novios #junglelife #viajeros #wetravel #travelinspo #adventurous #indonesiaparadise #speechlessplaces #infinitypool #welltraveled #earthpix #baliholiday

A post shared by Kelly + Kody ⚤🇺🇸 (@positravelty) on Apr 2, 2019 at 7:27am PDT

ಈ ಫೋಟೋ ವೈರಲ್ ಆಗುತ್ತಿದ್ದಂತೆಯೇ ಬಹಳಷ್ಟು ಚರ್ಚೆ ಹುಟ್ಟು ಹಾಕಿದೆ. ಹಲವರು ಈ ದಂಪತಿಯ ಖತರ್ನಾಕ್ ಸ್ಟಂಟ್ ಕಂಡು ಅನ್ ಲೈಕ್ ಕೂಡಾ ಮಾಡಿದ್ದಾರೆ. ಫೋಟೋಗೆ ಕಮೆಂಟ್ ಮಾಡಿದ ವ್ಯಕ್ತಿಯೊಬ್ಬ 'ಕೇವಲ ಒಂದು ಫೋಟೋಗಾಗಿ ಜೀವವನ್ನು ಪಣಕ್ಕಿಟ್ಟಿದ್ದೀರಿ. ಇದು ಸರಿಯಲ್ಲ' ಎಂದಿದ್ದಾರೆ.

 
 
 
 
 
 
 
 
 
 
 
 
 

Seize the day with a beautiful view from our amazing pool. Thank you @la_la_la_lara for having a good time with us💕 #trulyubud ••••• Get special rate through our website with our promo code : TKJRIG18 thekayonjungleresort.com Resort for Adult Only ••••• The Kayon Jungle Resort Member of @pramanahotels  Managed by @pramanaexperience ••• #trulykayon #kayonubud #kayonresort #kepiturestaurant #pramanahotels #natureview #naturelover #wonderfulindonesia #bestdestinationwedding #honeymoon #romantichotel #explorebali #bali #visitbali #thebaliguideline #balidaily #baligasm #balilife #ubud #thebalibible #balibible #lovetotravel #traveltheworld #wonderfulhotel

A post shared by The Kayon Jungle Resort (@kayonjungleresort) on Apr 7, 2019 at 1:21am PDT

ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಈ ದಂಪತಿ ನಾವು ಎಲ್ಲಾ ಮುಂಜಾಗೃತಾ ಕ್ರಮಗಳನ್ನು ವಹಿಸಿಕೊಂಡು ಈ ಫೋಟೋ ತೆಗೆಸಿದ್ದೇವೆ. ಎಲ್ಲಕ್ಕೀಮತ ಹೆಚ್ಚಾಗಿ ಈ ಈಜುಕೊಳದ ಕೆಳಗೆ ಮತ್ತೊಂದು ಈಜುಕೊಳವಿತ್ತು. ಇದನ್ನು ನಾವು ಕ್ರಾಪ್ ಮಾಡಿದ್ದೇವೆ ಎಂದಿದ್ದಾರೆ.