Asianet Suvarna News Asianet Suvarna News

ಸಭ್ಯತೆಯಿಂದ ವರ್ತಿಸಲು ಹೇಳಿದರೆ ವಾಮಾಚಾರ! ಮಂಗಳಮುಖಿಯರಿಂದ ಗ್ರಾಮಸ್ಥರು ಕಂಗಾಲು

ಸಭ್ಯತೆಯಿಂದ ವರ್ತಿಸುವಂತೆ ತಿಳಿ ಹೇಳಿದ ಗ್ರಾಮಸ್ಥರ ಮನೆಗೆ  ಮಂಗಳಮುಖಿಯರ ತಂಡ ವಾಮಾಚಾರ ಮಾಡಿಸಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ರುದ್ರಾಕ್ಷಿ ಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಕೆಲ ದಿನಗಳಿಂದ ಹಿಂದೆ ಇಬ್ಬರು ಮಂಗಳಮುಖಿಯರು ಮನೆಯೊಂದನ್ನು ಬಾಡಿಗೆಗೆ ಪಡೆದು ವಾಸವಿದ್ದು ತದನಂತರ ಇವರ ಜೊತೆಗೆ ಇನ್ನು ಎಂಟು ಹತ್ತು ಮಂಗಳಮುಖಿಯರು ಮತ್ತೆರಡು ಮನೆಗಳನ್ನು ಪಡೆದು‌ವಾಸವಾಗಿದ್ದರು.

Transgenders Accused of Doing Witchcraft in Mandya

ಮಂಡ್ಯ: ಸಭ್ಯತೆಯಿಂದ ವರ್ತಿಸುವಂತೆ ತಿಳಿ ಹೇಳಿದ ಗ್ರಾಮಸ್ಥರ ಮನೆಗೆ  ಮಂಗಳಮುಖಿಯರ ತಂಡ ವಾಮಾಚಾರ ಮಾಡಿಸಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ರುದ್ರಾಕ್ಷಿ ಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಕೆಲ ದಿನಗಳಿಂದ ಹಿಂದೆ ಇಬ್ಬರು ಮಂಗಳಮುಖಿಯರು ಮನೆಯೊಂದನ್ನು ಬಾಡಿಗೆಗೆ ಪಡೆದು ವಾಸವಿದ್ದು ತದನಂತರ ಇವರ ಜೊತೆಗೆ ಇನ್ನು ಎಂಟು ಹತ್ತು ಮಂಗಳಮುಖಿಯರು ಮತ್ತೆರಡು ಮನೆಗಳನ್ನು ಪಡೆದು‌ವಾಸವಾಗಿದ್ದರು.

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ಈ ಗ್ರಾಮದ ಮುಂಭಾಗವೇ ಇರೋ ರಸ್ತೆಯಲ್ಲಿ ಈ ಮಂಗಳಮುಖಿಯರು  ಸಾರ್ವಜನಿಕರಿಂದ ಅಸಭ್ಯವಾಗಿ ವರ್ತಿಸಿ ಹಣ ಕೀಳುತ್ತಿದ್ದರು ಎನ್ನಲಾಗಿದೆ.

ಗ್ರಾಮದ ಮುಂದೆ ಈ ರೀತಿ ಅಸಭ್ಯವಾಗಿ ವರ್ತಿಸಿ ಗ್ರಾಮದ ಮರ್ಯಾದೆ ಕಳೆಯದಂತೆ ಗ್ರಾಮದ ಕೆಲವರು ನಿನ್ನೆ ಮಂಗಳಮುಖಿಯರಿಗೆ ಬುದ್ದಿವಾದ ಹೇಳಿದ್ದರು ಎನ್ನಲಾಗಿದ್ದು, ಇದರಿಂದ ಕುಪಿತರಾದ ಮಂಗಳಮುಖಿಯರು ರಾತ್ರಿ ತಮಗೆ ಬುದ್ದಿವಾದ  ಬುದ್ದಿವಾದ ಹೇಳಿದ ಗ್ರಾಮದ ಹಲವು ಗ್ರಾಮಸ್ಥರ ಮನೆಗೆ ವಾಮಾಚಾರ ಮಾಡಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮನೆಯ ಮುಂದೆ ನಿಂಬೆಹಣ್ಣು, ಕುಂಕುಮ, ಮೊಟ್ಟೆ ಒಡೆದು ವಾಮಾಚಾರ ಮಾಡಿಸಿರೋದನ್ನು ಪ್ರಶ್ನೆ ಮಾಡಿದ್ದಕ್ಕೆ ಗ್ರಾಮಸ್ಥ ರ ಮೇಲೆ ಈ ಮಂಗಳಮುಖಿಯರ ತಂಡ ಜಗಳಗೈದು ದಾಂಧಲೆ ನಡೆಸಿದ್ದಾರೆ.

ಅಲ್ಲದೇ ತಮ್ಮ ತಂಟೆಗೆ ಬಂದರೆ ಸರಿ‌ ಇರುವುದಿಲ್ಲ ಎಂದು ಅಶ್ಲೀಲವಾಗಿ ಬೈಯ್ದು ದಾಂಧಲೆಗೆ ಮುಂದಾಗಿದ್ದಾರೆ. ಮಂಗಳಮುಖಿಯರ ಈ ಹೊಸ ವರಸೆಯಿಂದ ರುದ್ರಾಕ್ಷಿಪುರ ಗ್ರಾಮಸ್ಥರು ಕಂಗಾಲಾಗಿದ್ದಾರೆ.

ಅಲ್ಲದೇ ಇವರ ಈ ವರಸೆಯಿಂದ ಗ್ರಾಮಸ್ಥರಿಗೆ ಹೊಸದೊಂದು ಸಂಕಟ ಶುರುವಾಗಿದೆ. ಮನೆ ಖಾಲಿ ಮಾಡಿ ಎಂದು ಹೇಳಿದರೆ, ಮಾಟ ಮಾಡಿಸುವುದಾಗಿ ಬೆದರಿಕೆ ಹಾಕುತ್ತಿರುವುದು ಈಗ ಮನೆ ಮಾಲೀಕರಿಗೂ ಕೂಡ ಸಂಕಷ್ಟ ತಂದೊಡ್ಡಿದೆ. 

Follow Us:
Download App:
  • android
  • ios