ಕುಡಿದು ಅಸ್ವಸ್ತಗೊಂಡಿದ್ದ ಮಂಗಳಮುಖಿಯರು ಚಿಕಿತ್ಸೆಗೆ ಅಂತ ಆಸ್ಪತ್ರೆಗೆ ಬಂದಿದ್ದರು.

ಪೊಲೀಸರು ಮತ್ತು ವೈದ್ಯರ ಮೇಲೆ ಮಂಗಳಮುಖಿಯರು ಹಲ್ಲೆ ನಡೆಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ನಿನ್ನೆ ರಾತ್ರಿ ಪಾನಮತ್ತರಾಗಿ ಚಿಗಟೇರಿ ಜಿಲ್ಲಾಸ್ಪತ್ರೆಗೆ ಬಂದಿದ್ದ ನಾಲ್ಕೈದು ಮಂಗಳಮುಖಿಯರು ಹಲ್ಲೆ ನಡೆಸಿದ್ದಾರೆ. ಕುಡಿದು ಅಸ್ವಸ್ತಗೊಂಡಿದ್ದ ಮಂಗಳಮುಖಿಯರು ಚಿಕಿತ್ಸೆಗೆ ಅಂತ ಆಸ್ಪತ್ರೆಗೆ ಬಂದಿದ್ದರು. ದರೆ ಸೌಜನ್ಯದಿಂದ ವರ್ತಿಸಿದರೆ ಮಾತ್ರ ಚಿಕಿತ್ಸೆ ನೀಡೋದಾಗಿ ವೈದ್ಯರು ಹೇಳಿದ್ದಾರೆ. ದರಿಂದ ಕೋಪಗೊಂಡ ಮಂಗಳಮುಖಿಯರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಮಧ್ಯಪ್ರವೇಶಿಸಿದ ಪೊಲೀಸ್ ಪೇದೆ ನಾಗರಾಜ್ಮೇಲೆಯೂ ಹಲ್ಲೆ ಮಾಡಿದ್ದಾರೆ. ಗಲಾಟೆ ಹೆಚ್ಚಾಗ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಈ ವೇಳೆ ಮಂಗಳಮುಖಿಯರು ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾರೆ. ಇಬ್ಬರು ಮಂಗಳಮುಖಿಯರನ್ನು ಬಂಧಿಸಲಾಗಿದ್ದು ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.