ಜುಲೈ ಒಂದರಿಂದ ಅನ್ವಯವಾಗುವಂತೆ ರಾಜ್ಯದಲ್ಲಿರುವ ಎಲ್ಲಾ ಟ್ರಾನ್ಸ್‌ಫಾರ್ಮರ್‌ ತಯಾರಿಕಾ ಕಂಪನಿಗಳು ಸ್ಟಾರ್‌ ದರ್ಜೆಯ ಟ್ರಾನ್ಸ್‌ಫಾರ್ಮರ್‌ಗಳನ್ನೇ ತಯಾರಿಸುವಂತೆ ಸೂಚನೆ ನೀಡಲಾಗಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಬೆಂಗಳೂರು: ರೈತರು ಐದು ಸ್ಟಾರ್‌ ಇರುವ ಪಂಪ್‌ಸೆಟ್‌ಗಳನ್ನೇ ಇನ್ನು ಮುಂದೆ ಖರೀದಿಸಬೇಕು ಎಂದು ಹೇಳಿದ್ದ ರಾಜ್ಯ ಸರ್ಕಾರ ಇದೀಗ ಟ್ರಾನ್ಸ್‌ಫಾರ್ಮರ್‌ಗಳಿಗೂ ಅದನ್ನು ಕಡ್ಡಾಯ ಮಾಡಿದೆ. ತನ್ಮೂಲಕ ಶೇ.25ರಷ್ಟುವಿದ್ಯುತ್‌ ಉಳಿತಾಯವಾಗಲಿದೆ ಎಂದು ಹೇಳಿದೆ.

ಜುಲೈ ಒಂದರಿಂದ ಅನ್ವಯವಾಗುವಂತೆ ರಾಜ್ಯದಲ್ಲಿರುವ ಎಲ್ಲಾ ಟ್ರಾನ್ಸ್‌ಫಾರ್ಮರ್‌ ತಯಾರಿಕಾ ಕಂಪನಿಗಳು ಸ್ಟಾರ್‌ ದರ್ಜೆಯ ಟ್ರಾನ್ಸ್‌ಫಾರ್ಮರ್‌ಗಳನ್ನೇ ತಯಾರಿಸುವಂತೆ ಸೂಚನೆ ನೀಡಲಾಗಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿರುವ ಕರ್ನಾಟಕ ವಿದ್ಯುತ್‌ ಕಾರ್ಖಾನೆಯ ನೂತನ ವಿಸ್ತರಣಾ ಘಟಕಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ನಗರ ಪ್ರದೇಶದಲ್ಲಿ ಫೈವ್‌ ಸ್ಟಾರ್‌ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ನಾಲ್ಕು ಸ್ಟಾರ್‌ಗಳ ಟ್ರಾನ್ಸ್‌ಫಾರ್ಮರ್‌ ಕಡ್ಡಾಯವಾಗಿ ಬಳಸುವಂತೆ ಈಗಾಗಲೇ ಆದೇಶಿಸಲಾಗಿದೆ. ಇವುಗಳ ಬಳಕೆಯಿಂದ ಶೇ. 25ರಷ್ಟುವಿದ್ಯುತ್‌ ಉಳಿತಾಯವಾಗುತ್ತದೆ ಎಂದರು.

ಸಹಾಯವಾಣಿಗೆ ನಿತ್ಯ 20 ಸಾವಿರ ಕರೆ: ವಿದ್ಯುತ್‌ ಸಮಸ್ಯೆ ಸಂಬಂಧ ಸ್ಥಾಪಿಸಿರುವ ಸಹಾಯವಾಣಿ ದೂರವಾಣಿ ಸಂಖ್ಯೆ 1912ಕ್ಕೆ ಪ್ರತಿದಿನ ಸುಮಾರು 20 ಸಾವಿರ ಕರೆಗಳು ಬರುತ್ತಿದ್ದರೂ, ಸದ್ಯಕ್ಕೆ 11 ಸಾವಿರ ಕರೆಗಳನ್ನು ಮಾತ್ರ ಸ್ವೀಕಾರ ಮಾಡಲಾಗುತ್ತದೆ ಎಂದರು.

ಮೊಬೈಲ್ ಸ್ವಿಚಾಫ್ ಆದ್ರೆ ಸಸ್ಪೆಂಡ್: ಅಧಿಕಾರಿಗಳಿಗೆ ಇಂಧನ ಸಚಿವ ಡಿಕೆಶಿ ಎಚ್ಚರಿಕೆ

ವಿದ್ಯುತ್‌ ಸಮಸ್ಯೆ ನಿವಾರಿಸಲು ಹೊಸ ಯೋಜನೆ ರೂಪಿಸಲಾಗಿದೆ. ಸಮಸ್ಯೆ ಎದುರಾದಾಗ ಯಾರೂ ಪಲಾಯನ ಮಾಡುವಂತಿಲ್ಲ. ತಮ್ಮ ಮೊಬೈಲ್‌ ಫೋನ್‌ಗಳನ್ನು ಬಂದ್‌ ಮಾಡಬಾರದು. ಯಾವುದೇ ವೇಳೆ, ಎಷ್ಟೇ ಕರೆ ಬಂದರೂ ಸ್ವೀಕರಿಸಿ ಸಮಸ್ಯೆ ನಿವಾರಿಸಲು ಮುಂದಾಗಬೇಕು. ಪ್ರತಿಯೊಬ್ಬ ಅಧಿಕಾರಿಗಳಿಗೂ ಜವಾಬ್ದಾರಿ ನೀಡಲಾಗುವುದು. ಒಂದು ವೇಳೆ ಅಧಿಕಾರಿಗಳು ತಮ್ಮ ಮೊಬೈಲ್‌ ಫೋನ್‌ ಬಂದ್‌ ಮಾಡಿಕೊಂಡಿದ್ದಲ್ಲಿ ಅಂತಹವರನ್ನು ಅಮಾನತು ಮಾಡಲಾಗುವುದು. ಅಧಿಕಾರಿಗಳ ಮೇಲೆ ಕಣ್ಣಿಡಲು ಸೂಚನೆ ನೀಡಲಾಗಿದೆ ಎಂದು ಶಿವಕುಮಾರ್‌ ತಿಳಿಸಿದರು.

ರೈತರು ಐದು ಸ್ಟಾರ್‌ ಇರುವ ಪಂಪ್‌ಸೆಟ್‌ಗಳನ್ನೇ ಇನ್ನು ಮುಂದೆ ಖರೀದಿಸಬೇಕು ಎಂದು ಹೇಳಿದ್ದ ರಾಜ್ಯ ಸರ್ಕಾರ ಇದೀಗ ಟ್ರಾನ್ಸ್‌ಫಾರ್ಮರ್‌ಗಳಿಗೂ ಅದನ್ನು ಕಡ್ಡಾಯ ಮಾಡಿದೆ. ತನ್ಮೂಲಕ ಶೇ.25ರಷ್ಟುವಿದ್ಯುತ್‌ ಉಳಿತಾಯವಾಗಲಿದೆ ಎಂದು ಹೇಳಿದೆ.