ಬೆಂಗಳೂರು[ಜು. 19] ವರ್ಗಾವಣೆ ಪರ್ವ, ವರ್ಗಾವಣೆ ರಾಜ್ಯ, ಟ್ರಾನ್ಸ್ ಫರ್ ರಾಜ್, ವರ್ಗಾವಣೆ ರಾಜ್ಯಭಾರ ಏನು ಬೇಕಾದರೂ  ತಿಳಿದುಕೊಳ್ಳಬಹುದು. ಒಂದಂತೂ ಸತ್ಯ ರಾಜ್ಯದಲ್ಲಿ ವರ್ಗಾವಣೆ ಪರ್ವ ನಿರಂತರವಾಗಿದೆ.

ಮೂವರು ಡಿವೈಎಸ್‌ಪಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಆದೇಶ ನೀಡಿದ್ದಾರೆ.

ಸಿಐಡಿಗೆ ವರ್ಗಾವಣೆ ಆದೇಶದಲ್ಲಿದ್ದ ಚಂದ್ರಶೇಖರ್ ಎನ್.ಎಸ್‌.ಅವರನ್ನು ಹಲಸೂರು ಗೇಟ್ ಉಪವಿಭಾಗಕ್ಕೆ, ದಾವಣಗೆರೆ ಡಿಸಿಆರ್ ಬಿಯಾಗಿದ್ದ ಗೋಪಾಲಕೃಷ್ಣ ಬಿ. ಗೌಡರ್ ಅವರನ್ನು ಬೆಂಗಳೂರು ನಗರ ಪಶ್ಚಿಮ ವಿಭಾಗ ಟ್ರಾಫಿಕ್‌ ಗೆ, ಸ್ಥಳ ನಿರೀಕ್ಷಣೆಯಲ್ಲಿದ್ದ ಶ್ರೀನಿವಾಸ್ ಎಚ್‌. ಅವರನ್ನು ಕೋಲಾರ ಜಿಲ್ಲೆ ಮುಳುಬಾಗಿಲು ಉಪವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.