ಆಧಾರ್ ಕಾರ್ಡ್ ಮಾಹಿತಿ ಸೋರಿಕೆ ಬಗ್ಗೆ ಆಗಾಗ ಅಪಸ್ವರಗಳು ಕೇಳಿ ಬರುತ್ತಲೇ ಇರುತ್ತವೆ. ಟ್ರಾಯ್ ಪ್ರಾಧಿಕಾರ ಎಷ್ಟೇ ಸಮರ್ಥನೆ ಕೊಟ್ಟರೂ ಹ್ಯಾಕ್ ಮಾಡಲು ಸಾಧ್ಯವಾಗುತ್ತಿವೆ. ಟ್ರಾಯ್ ಮುಖ್ಯಸ್ಥ ಆರ್ ಆರ್ ಶರ್ಮಾ ತಮ್ಮ ಆಧಾರ್ ನಂಬರ್ ಕೊಟ್ಟು ಟ್ರಾಕ್ ಮಾಡಿ ನೋಡೋಣ ಎಂದು ಸವಾಲು ಹಾಕಿದ್ದರು.
ಮುಂಬೈ (ಜು. 31): ಟ್ರಾಯ್ ಮುಖ್ಯಸ್ಥ ಆರ್.ಎಸ್. ಶರ್ಮಾ ತಮ್ಮ ಟ್ವಿಟರ್ ಖಾತೆಯಲ್ಲಿ ಆಧಾರ್ ನಂಬರ್ ಪೋಸ್ಟ್ ಮಾಡಿ, ಇದನ್ನು ಬಳಸಿಕೊಂಡು ಹೇಗೆ ಹಾನಿ ಮಾಡುತ್ತೀರಿ ನೋಡೋಣ ಎಂದು ಸವಾಲೊಡ್ಡಿದ್ದರು.
ಸವಾಲನ್ನು ಸ್ವೀಕರಿಸಿದ್ದ ಆಧಾರ್ ವಿರೋಧಿಗಳು ಅದನ್ನು ಬಳಸಿಕೊಂಡು ಶರ್ಮಾರ ಜನ್ಮ ದಿನಾಂಕ, ಪಾನ್ ನಂಬರ್, ವೋಟರ್ ಐಡಿ, ಟೆಲಿಕಾಂ ಆಪರೇಟರ್, ಫೋನ್ ಮಾಡೆಲ್, ಏರ್ ಇಂಡಿಯಾ ಐಡಿ, ವಾಟ್ಸಪ್‌ನಲ್ಲಿ ಬಳಸಲ್ಪಡುವ ಅವರ ವೈಯಕ್ತಿಕ ಫೋಟೊಗಳನ್ನೂ ಪತ್ತೆ ಹಚ್ಚಿ ಕೆಲವರು ಟ್ವೀಟ್ ಮಾಡಿದ್ದರು. ಇವೆಲ್ಲ ಬೇರೆಡೆಯಿಂದ ಪಡೆದ ಮಾಹಿತಿಗಳು, ಆಧಾರ್ ಬೇಧಿಸಲು ಸಾಧ್ಯವಿಲ್ಲ ಎಂದು ಶರ್ಮಾ ಮತ್ತು ಆಧಾರ್ ಪ್ರಾಧಿಕಾರ ಸಮರ್ಥಿಸಿಕೊಂಡಿತ್ತು.
ಆದರೆ, ಈಗ ವ್ಯಕ್ತಿಯೊಬ್ಬರು ಶರ್ಮಾರ ಆಧಾರ್ ನಂಬರ್ ಬಳಸಿಕೊಂಡು ಅವರ ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ ಭೀಮ್ ಆ್ಯಪ್ ಮೂಲಕ 1 ರು. ಪಾವತಿಸಿರುವುದಾಗಿ ಹೇಳಿಕೊಂಡಿದ್ದಾರೆ. ಇದರಿಂದ ಶರ್ಮಾರ ಸವಾಲನ್ನು ಬೇಧಿಸಲಾಗಿದೆಯೇ? ಎಂಬ ಸಂದೇಹ ಮೂಡಿದೆ. ‘ಬಳಕೆದಾರರ ಖಾಸಗಿತನ ರಕ್ಷಣೆಗಾಗಿ ಉತ್ತಮ ಸರ್ಕಾರಿ ವ್ಯವಸ್ಥೆಗಳನ್ನು ರೂಪಿಸಲು ಭೀಮ್ ಮೂಲಕ ಶರ್ಮಾರ ಆಧಾರ್‌ಗೆ ನನ್ನ ದೇಣಿಗೆ ನೀಡಿದ್ದೇನೆ’ ಎಂದು ಅನೀವರ್ ಎಂಬ ವರು 1 ರು. ದೇಣಿಗೆ ನೀಡಿದ ಬಗ್ಗೆ ವ್ಯಂಗ್ಯವಾಡಿದ್ದಾರೆ.
