ಸಂಚಾರ ನಿಯಮ ಉಲ್ಲಂಘನೆ ಪತ್ತೆಯೂ ಇಲ್ಲಿ ಬಿಸಿನೆಸ್| ಸಂಚಾರ ನಿಯಮ ಉಲ್ಲಂಘಿಸಿದವರ ಬಗ್ಗೆ ಮಾಹಿತಿ ಕೊಡಿ, ಬಹುಮಾನ ಗೆಲ್ಲಿ| ಗೋವಾದಲ್ಲಿ ಸಂಚಾರಿ ಕಾವಲುಗಾರ ಯೋಜನೆ| 1000 ರು. ನಗದು ಬಹುಮಾನದ ಸ್ಕೀಂ ಸೂಪರ್‌ಹಿಟ್| ಈವರೆಗೆ 7000 ಜನರ ನೋಂದಣಿ, .38 ಲಕ್ಷ ಬಹುಮಾನ ವಿತರಣೆ| ಯೋಜನೆ ವಿರುದ್ಧ ಶಾಸಕರ ಆಕ್ಷೇಪ, ವಿಧಾನಸಭೆಯಲ್ಲಿ ಪ್ರಸ್ತಾಪ
ಪಣಜಿ[ಜು.17]: ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಂದ ಪೊಲೀಸರು ದಂಡ ವಸೂಲಿ ಮಾಡುವುದು ಸರ್ವೇ ಸಾಮಾನ್ಯ. ಆದಾಗ್ಯೂ ಜನರು ಸಂಚಾರ ನಿಯಮ ಉಲ್ಲಂಘಿಸುತ್ತಲೇ ಇರುತ್ತಾರೆ. ಇದಕ್ಕೆ ಕಡಿವಾಣ ಹಾಕುವ ಪ್ರಯತ್ನವಾಗಿ ಗೋವಾ ಪೊಲೀಸರು, ಸಂಚಾರ ನಿಯಮ ಗಾಳಿಗೆ ತೂರುವವರ ಕುರಿತು ಸಾರ್ವಜನಿಕರಿಂದಲೇ ಮಾಹಿತಿ ಪಡೆಯುವ, ಮಾಹಿತಿದಾರರಿಗೆ ಬಹುಮಾನ ನೀಡುವ ಯೋಜನೆಯೊಂದನ್ನು ಜಾರಿಗೊಳಿಸಿದ್ದು, ಸೂಪರ್‌ಹಿಟ್ ಆಗಿದೆ!
ಟ್ರಾಫಿಕ್ ಸೆಂಟಿನೆಲ್ ಸ್ಕೀಂ(ಸಂಚಾರ ಕಾವಲುಗಾರ ಯೋಜನೆ)ನಡಿ ಸಾರ್ವಜನಿಕರು ಹೆಸರು ನೋಂದಾಯಿಸಿಕೊಳ್ಳಬಹುದು. ಯಾರಾದರೂ ಸಂಚಾರ ನಿಯಮ ಉಲ್ಲಂಘಿಸಿದಾಗ ಆ ಕುರಿತ ಫೋಟೋ ಅಥವಾ ವಿಡಿಯೋ ಸೆರೆ ಹಿಡಿದು ವಾಟ್ಸ್‌ಆ್ಯಪ್, ಇ-ಮೇಲ್, ಫೇಸ್‌ಬುಕ್ ಪೇಜ್ ಮೂಲಕ ಪೊಲೀಸರಿಗೆ ರವಾನಿಸಬೇಕು. ಈ ವಿಡಿಯೋ/ಫೋಟೋದಲ್ಲಿ ವಾಹನ ನೋಂದಣಿ ಸಂಖ್ಯೆ, ದಿನಾಂಕ, ಸಮಯ, ಸ್ಥಳ, ನಿಯಮ ಉಲ್ಲಂಘನೆಯ ವಿವರ ಇರಬೇಕು.
ಪ್ರತಿ ನಿಯಮ ಉಲ್ಲಂಘನೆ ಪತ್ತೆ ಹಚ್ಚಿದಾಗ 10 ಅಂಕಗಳನ್ನು ಪೊಲೀಸರು ನೀಡುತ್ತಾರೆ. ಅದು 100 ಅಂಕಗಳಾದಾಗ 1000 ರು. ಬಹುಮಾನ ನೀಡುತ್ತಾರೆ. ಈ ಯೋಜನೆ ಈಗಾಗಲೇ ಭಾರಿ ಯಶಸ್ವಿಯಾಗಿದ್ದು, 7000 ಮಂದಿ ಸೆಂಟಿನೆಲ್‌ಗಳಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈವರೆಗೆ ಗೋವಾ ಪೊಲೀಸರು 37.81 ಲಕ್ಷ ರು. ಬಹುಮಾನ ರೂಪದಲ್ಲಿ ಕೊಟ್ಟಿದ್ದಾರೆ. 29.91 ಲಕ್ಷ ರು. ಬಹುಮಾನವನ್ನು ಇನ್ನೂ ಪಾವತಿಸಬೇಕಾಗಿದೆ.
2007ರಿಂದ ಜಾರಿಯಲ್ಲಿರುವ ಈ ಯೋಜನೆಗೆ ರಾಜಕೀಯ ಪಕ್ಷಗಳಿಂದ ಈಗ ವಿರೋಧ ವ್ಯಕ್ತವಾಗಿದೆ. ಯೋಜನೆಯನ್ನು ತ
