ಹಲವು ಸಲ ತನ್ನ ಗರ್ಲ್‌ ಫ್ರೆಂಡ್‌ ಜೊತೆ ಬೈಕ್‌ನಲ್ಲಿ ಸುತ್ತಾಡಿದ್ದಾನೆ. ಆದರೆ ಒಮ್ಮೆ ಈತನ ಅದೃಷ್ಟ ಕೆಟ್ಟಿತ್ತು. ಹಿಂಬದಿ ಕುಳಿತ್ತಿದ್ದ ಗರ್ಲ್‌ ಫ್ರೆಂಡ್‌ ಹೆಲ್ಮೆಟ್‌ ಧರಿಸಿರಲಿಲ್ಲ
ಅಹಮದಾಬಾದ್(ಅ.18) : ಸಂಚಾರಿ ಪೊಲೀಸರು ಕೊಟ್ಟ ನೋಟಿಸ್ನಿಂದ ಮಹಿಳೆಯೊಬ್ಬಳಿಗೆ ತನ್ನ ಗಂಡನ ಅನೈತಿಕ ಸಂಬಂಧ ರಟ್ಟಾದ ಘಟನೆ ಗುಜರಾತಿನಲ್ಲಿ ನಡೆದಿದೆ.
ಅಹಮದಾಬಾದ್ನ ಗೋಮತಿ ಪುರದ ನಿವಾಸಿಯೊಬ್ಬ ತನ್ನ ಪರಸ್ತ್ರಿ ಸಂಬಂಧ ರಟ್ಟಾಗಿ ಪೊಲೀಸರ ಎದುರೇ ಪತ್ನಿ ಕಡೆಯಿಂದ ಗೂಸಾ ತಿಂದಿದ್ದಾನೆ.
ಹೇಗಾಯಿತು ಅಂತೀರಾ
ರಾಮ(ಹೆಸರು ಬದಲಾಯಿಸಲಾಗಿದೆ) ಎಂಬುವ ಅಹಮದಾಬಾದ್ನ ಗೋಮತಿ ಪುರದಲ್ಲಿ ತನ್ನ ಹೆಂಡತಿಯ ಜೊತೆ ವಾಸವಾಗಿದ್ದಾನೆ. ಹಲವು ಸಲ ತನ್ನ ಗರ್ಲ್ ಫ್ರೆಂಡ್ ಜೊತೆ ಬೈಕ್ನಲ್ಲಿ ಸುತ್ತಾಡಿದ್ದಾನೆ. ಆದರೆ ಒಮ್ಮೆ ಈತನ ಅದೃಷ್ಟ ಕೆಟ್ಟಿತ್ತು. ಹಿಂಬದಿ ಕುಳಿತ್ತಿದ್ದ ಗರ್ಲ್ ಫ್ರೆಂಡ್ ಹೆಲ್ಮೆಟ್ ಧರಿಸಿರಲಿಲ್ಲ. ಇದನ್ನು ಗಮನಿಸಿದ್ದ ಸಂಚಾರ ಪೊಲೀಸರು ಇಬ್ಬರ ಬೈಕ್ನಲ್ಲಿ ಕುಳಿತಿರುವುದನ್ನು ಫೋಟೊ ತೆಗೆದು ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಘಟನೆ ನಡೆದು ಒಂದು ತಿಂಗಳ ಬಳಿಕ ರಾಮ ಅವರ ಮನೆಗೆ ಸಂಚಾರ ಪೊಲೀಸರು ಹೆಲ್ಮೆಟ್ ಇಲ್ಲದೇ ಪ್ರಯಾಣಿಸಿದ್ದಕ್ಕೆ ದಂಡ ಕಟ್ಟುವಂತೆ ನೋಟಿಸ್ ಕಳುಹಿಸಿದ್ದರು. ನೋಟಿಸ್ ಕಳುಹಿಸಿದ್ದರೆ ಈತನ ಅದೃಷ್ಟ ಚೆನ್ನಾಗಿರುತ್ತಿತ್ತೇನೊ. ಆದರೆ ನೋಟಿಸ್ ಜೊತೆಯಲ್ಲಿ ಬೈಕ್ನಲ್ಲಿದ್ದ ಗರ್ಲ್ ಫ್ರೆಂಡ್ ಪೋಟೊವನ್ನು ಕಳುಹಿಸಿಕೊಟ್ಟಿದ್ದರು. ಇದರಿಂದ ಕೋಪಗೊಂಡ ರಾಮನ ಪತ್ನಿ ಪೊಲೀಸ್ ಠಾಣೆಗೆ ತೆರಳಿ ಆ ಹುಡಗಿ ಯಾರು ಎಂಬುದನ್ನು ಪತ್ತೆ ಹಚ್ಚಿಕೊಡುವಂತೆ ದುಂಬಾಲು ಬಿದ್ದಿದ್ದಾಳೆ.
ವಿಷಯ ತಿಳಿದ ರಾಮ ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗಲು ಠಾಣೆಗೆ ಬಂದಿದ್ದಾರೆ. ಈ ವೇಳೆ ಪೊಲೀಸರ ಎದುರಿನಲ್ಲೇ ಪತ್ನಿ ರಾಮನಿಗೆ ಗೂಸ ಕೊಟ್ಟಿದ್ದಾಳೆ. ಅಂತಿಮವಾಗಿ ಪೊಲೀಸರು ರಾಜಿ ಮಾಡಿ ದಂಪತಿಗಳನ್ನು ಮನೆಗೆ ಕಳುಹಿಸಿದ್ದಾರೆ.
ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದರಿಂದ ಪರಸ್ತ್ರಿ ಸಂಬಂಧಗಳು ರಟ್ಟಾಗುತ್ತವೆ ಎಂಬುದಕ್ಕೆ ಈ ಘಟನೆ ತಾಜಾ ಉದಾಹರಣೆ.
