ನೋಟು ಬ್ಯಾನ್ ಎಫೆಕ್ಟ್ ಜನರ ಮೇಲೆ ವಿವಿಧ ರೀತಿಯಲ್ಲಿ ಆಗುತ್ತಿದೆ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಸಂಚಾರಿ ಪೊಲೀಸರೊಬ್ಬರು ದಂಡ ಪಡೆಯುವ ಬದಲು 250 ರೂಪಾಯಿ ರೀಚಾರ್ಜ್ ಮಾಡಿಸಿರುವ ಘಟನೆ ನಡೆದಿದೆ. ಈ ಬಗ್ಗೆ ಕೃಷ್ಣ ಎಂಬ ಯುವಕ ಫೇಸ್'ಬುಕ್ ಮೂಲಕ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಬೆಂಗಳೂರು(ನ.23): ನೋಟು ಬ್ಯಾನ್ ಎಫೆಕ್ಟ್ ಜನರ ಮೇಲೆ ವಿವಿಧ ರೀತಿಯಲ್ಲಿ ಆಗುತ್ತಿದೆ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಸಂಚಾರಿ ಪೊಲೀಸರೊಬ್ಬರು ದಂಡ ಪಡೆಯುವ ಬದಲು 250 ರೂಪಾಯಿ ರೀಚಾರ್ಜ್ ಮಾಡಿಸಿರುವ ಘಟನೆ ನಡೆದಿದೆ.

ಈ ಬಗ್ಗೆ ಕೃಷ್ಣ ಎಂಬ ಯುವಕ ಫೇಸ್'ಬುಕ್ ಮೂಲಕ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಇದೇ ತಿಂಗಳ 18ರಂದು ಕೃಷ್ಣ ಮಾರತ್ ಹಳ್ಳಿಯ ರಿಂಗ್ ರೋಡ್ ಬಳಿ ಹೋಗುತ್ತಿದ್ದ ವೇಳೆ ತಡೆದ ಹೆಚ್'ಎಎಲ್ ಸಂಚಾರಿ ಹೆಡ್ ಕಾನ್ಸ್'ಟೇಬಲ್ ಶಿವಮೂರ್ತಿ ತಡೆದಿದ್ದಾರೆ.

 ಇನ್ನು ಬೈಕ್ ಮೇಲೆ 2 ಕೇಸ್'ಗಳು ಇರುವುದರಿಂದ 400 ರೂಪಾಯಿ ದಂಡ ಕಟ್ಟಲು ಹೇಳಿದ್ದು ಬೈಕ್ ಜ್ಪಪ್ತಿ ಮಾಡುವುದಾಗಿ ಹೇಳಿದ್ದಾರೆ. ದಂಡ ಕಟ್ಟಲು ಹಣವಿಲ್ಲ ಎಂದು ಹೇಳಿದ್ದನ್ನು ಕೇಳದ ಪೊಲೀಸ್ ಮೊಬೈಲ್'ಗೆ ರೀಚಾರ್ಜ್ ಮಾಡಿಸಿಕೊಂಡಿದ್ದಾರೆ.

ಇದರಿಂದ ಬೇಸರಗೊಂಡ ಯುವಕ ಕೃಷ್ಣ ಫೇಸ್ ಬುಕ್ ಮೂಲಕ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.