ಈ ಬಗ್ಗೆ ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತರಾದ ಆರ್.ಹಿತೇಂದ್ರ ನೂತನ ಯೋಜನೆಯ ರೂಪಿಸುವುದರ ಬಗ್ಗೆ ಟ್ವಿಟ್ಟರ್'ನಲ್ಲಿ ಸುಳಿವು ಬಿಟ್ಟಿದ್ದಾರೆ.
ಬೆಂಗಳೂರು(ಮೇ.02): ಸಂಚಾರಿ ನಿಯಮ ಉಲ್ಲಂಘಿಸಿದವರಿಂದ ದಂಡ ವಸೂಲಿ ಮಾಡಲು ಬೆಂಗಳೂರು ಸಂಚಾರಿ ಪೊಲೀಸರು ಮಾಸ್ಟ'ರ್ ಪ್ಲ್ಯಾನ್ ಮಾಡಿದ್ದಾರೆ. ವಾಹನ ಮಾಲೀಕರು ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಪಾವತಿ ಮಾಡದೆ ತಪ್ಪಿಸಿಕೊಂಡಿದ್ದರೆ ಪೊಲೀಸರೆ ಮನೆಗೆ ಬಂದು ದಂಡ ವಸೂಲಿ ಮಾಡಲಿದ್ದಾರೆ. ಈ ಬಗ್ಗೆ ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತರಾದ ಆರ್.ಹಿತೇಂದ್ರ ನೂತನ ಯೋಜನೆಯ ರೂಪಿಸುವುದರ ಬಗ್ಗೆ ಟ್ವಿಟ್ಟರ್'ನಲ್ಲಿ ಸುಳಿವು ಬಿಟ್ಟಿದ್ದಾರೆ.
