ಸೋನಿಯಾ, ಪ್ರಿಯಾಂಕಾ, ರಾಹುಲ್ ಆಗಾಗ ದಿಲ್ಲಿಯ ಖಾನ್‌ ಮಾರ್ಕೆಟ್‌ಗೆ ಊಟಕ್ಕೆ ಹೋಗುತ್ತಾರೆ ಎನ್ನುವುದನ್ನೇ ನೆಪ ಮಾಡಿ ಖಾನ್‌ ಮಾರ್ಕೆಟ್‌ ಗ್ಯಾಂಗ್‌ ಎಂದು ಮೋದಿ ಟೀಕಿಸಿದ್ದರು. ಇದರಿಂದ ಕಾಂಗ್ರೆಸ್‌ ನಾಯಕರ ಮೇಲಾದ ಪರಿಣಾಮ ಹಾಗಿರಲಿ, ಸ್ವತಃ ಖಾನ್‌ ಮಾರ್ಕೆಟ್‌ ವ್ಯಾಪಾರಿಗಳಿಗೆ ಆತಂಕ ಶುರುವಾಗಿದೆ.

ದಿಲ್ಲಿಯಲ್ಲೂ ತೇಜಸ್ವಿ ಸೂರ್ಯ ಹವಾ! 

ಎಲ್ಲಿ ಮೋದಿ ಮಾತಿನಿಂದ ಅಧಿಕಾರಿಗಳು ತೊಂದರೆ ಕೊಡುತ್ತಾರೋ ಎಂದು ವ್ಯಾಪಾರಿಗಳು ಬಿಜೆಪಿ ಧ್ವಜ ಹಚ್ಚಿ, ದೊಡ್ಡ ದೊಡ್ಡ ಮೋದಿ ಪೋಸ್ಟರ್‌ಗಳನ್ನು ಅಂಗಡಿಗಳಲ್ಲಿ ಹಾಕಿಕೊಂಡಿದ್ದಾರೆ. ಅಂದಹಾಗೆ ಖಾನ್‌ ಮಾರ್ಕೆಟ್‌ ಏಷ್ಯಾದ ಅತ್ಯಂತ ದುಬಾರಿ ಮಾರುಕಟ್ಟೆಗಳಲ್ಲಿ ಒಂದು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ‘ಇಂಡಿಯಾ ಗೇಟ್’ ಕ್ಲಿಕ್ ಮಾಡಿ