ಅದೃಷ್ಟ ಅಂದರೆ 28 ವರ್ಷದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರದ್ದು. ಗೆದ್ದು ಬಂದ 4 ದಿನದಲ್ಲೇ ದಿಲ್ಲಿಯ ಆಂಗ್ಲ ಮಾಧ್ಯಮಗಳು ತೇಜಸ್ವಿ ಬೆನ್ನುಹತ್ತಿದ್ದು, ನಿರರ್ಗಳ ಭಾಷೆ ಬಳಸುವ ಮತ್ತು ಸ್ಫುರದ್ರೂಪಿ ಆಗಿರುವ ತೇಜಸ್ವಿ ಸೂರ್ಯರನ್ನು ತಮ್ಮ ತಮ್ಮ ಸ್ಟುಡಿಯೋಗಳಿಗೆ ಚರ್ಚೆಗೆ ಒಯ್ಯಲು ಹಾತೊರೆಯುತ್ತಿವೆ.

ದಕ್ಷಿಣದಿಂದ ಅಸ್ಖಲಿತ ಇಂಗ್ಲಿಷ್‌ ಮಾತನಾಡುವ ಬಿಜೆಪಿ ವಕ್ತಾರ ಒಬ್ಬ ದಿಲ್ಲಿ ಮಾಧ್ಯಮಗಳಿಗೆ ಬೇಕಿತ್ತು. ಆ ಶೂನ್ಯವನ್ನು ತೇಜಸ್ವಿ ತುಂಬಲಿದ್ದಾರೆ. ಇಲ್ಲವಾದರೆ ಬಹುತೇಕ ದಕ್ಷಿಣದ ನಾಯಕರಿಗೆ ಹಿಂದಿ ಕೂಡ ಹರಕುಮುರುಕು, ಇಂಗ್ಲಿಷ್‌ ಕೂಡ ಅಷ್ಟಕಷ್ಟೇ. ತೇಜಸ್ವಿಗೆ ಆ ಸಮಸ್ಯೆಯಿಲ್ಲ. ಆದರೆ ದಿಲ್ಲಿ ಆಂಗ್ಲ ಮಾಧ್ಯಮಗಳು ಎಷ್ಟುಬೇಗ ತಲೆ ಮೇಲೆ ಮೆರೆಸುತ್ತವೆಯೋ ಅಷ್ಟೇ ಬೇಗ ಬಿಸಾಕುತ್ತವೆ. ಆ ಬಗ್ಗೆ ಗಮನ ಇರುವುದು ಒಳ್ಳೆಯದು. 

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ‘ಇಂಡಿಯಾ ಗೇಟ್’ ಕ್ಲಿಕ್ ಮಾಡಿ