ಕೈ ಸವರಿದ್ದ ರೇಷ್ಮೆ ಮಾರಾಟ ಮಂಡಳಿ ಅದ್ಯಕ್ಷ ಟಿ.ಪಿ.ರಮೇಶ್ ವರ್ತನೆಗೆ ಜಿಲ್ಲೆಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಮಡಿಕೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪರಿಷತ್ ಸದಸ್ಯೆಯ ಕೈ ಸವರಿ ವಿವಾದಕ್ಕೀಡಾಗಿದ್ದ ಟಿ.ಪಿ. ರಮೇಶ್ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ. ಸ್ವಾತಂತ್ರೋತ್ಸವ ವೇದಿಕೆಯಲ್ಲಿ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಕೈ ಸವರಿದ್ದ ರೇಷ್ಮೆ ಮಾರಾಟ ಮಂಡಳಿ ಅದ್ಯಕ್ಷ ಟಿ.ಪಿ.ರಮೇಶ್ ವರ್ತನೆಗೆ ಜಿಲ್ಲೆಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಸುವರ್ಣನ್ಯೂಸ್ ವಿಸ್ತ್ರತ ವರದಿ ಪ್ರಸಾರ ಮಾಡಿತ್ತು. ಅಲ್ದೆ ನಿನ್ನೆ ರಮೇಶ್ ವರ್ತನೆ ಖಂಡಿಸಿ, ಕೊಡಗು ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಸ್ವಯಂ ಪ್ರೇರಿತರಾಗಿ ರಾಜಿನಾಮೆ ನೀಡಲಿ ಎಂದಿದ್ದರು. ಈ ಹಿನ್ನೆಲೆಯಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷರಿಗೆ ಟಿ.ಪಿ.ರಮೇಶ್ ಪತ್ರದ ಮೂಲಕ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದು, ಪತ್ರದಲ್ಲಿ ಉಸ್ತುವಾರಿ ಸಚಿವರ ಸೂಚನೆಯಂತೆ ನಡೆದುಕೊಳ್ಳುತ್ತಿರುವುದಾಗಿ ಉಲ್ಲೇಖಿಸಿದ್ದಾರೆ.
