ಪ್ರಕೃತಿ ಮಡಿಲಿನಲ್ಲಿ ಮಂಜರಾಬಾದ್ ಕೋಟೆ

Tourist Spot Manjarabad Fort
Highlights

ಸಕಲೇಶಪುರದ ದೋಣಿಗಾಲ್ ಎಂಬ ಊರಿನ ಚಿಕ್ಕ ಗುಡ್ಡದ ಮೇಲೆ ಈ ಕೋಟೆ ಇದೆ. ಇದನ್ನೇರಲು 250 ಮೆಟ್ಟಿಲುಗಳನ್ನೇರಬೇಕು. ಇದರೊಳಗೆ ಅನೇಕ ಸುರಂಗ ಮಾರ್ಗಗಳಿದ್ದವು ಎನ್ನಲಾಗುತ್ತದೆ. ಈ ಕೋಟೆ ನಿರ್ಮಿಸಿದ್ದು ಒಬ್ಬ ಪ್ರೆಂಚ್ ವಾಸ್ತುಶಿಲ್ಪಿ. 1792ರಲ್ಲಿ ಟಿಪ್ಪು ಮಂಜ್ರಾಬಾದ್ ಕೋಟೆಯನ್ನು ನಿರ್ಮಿಸಿದ.

ಬೆಂಗಳೂರು[ಮೇ.29]: ಮಂಜರಾಬಾದ್ ಕೋಟೆ ಸಕಲೇಶಪುರದಲ್ಲಿ ದಟ್ಟ ಕಾನನದಿಂದ ಆವರಿಸಿಕೊಂಡ ಟಿಪ್ಪುವಿನ ಕಾಲದ ಪ್ರಾಚೀನ ಕೋಟೆ ಇದೆ. ಹೆಸರು ಮಂಜ್ರಾಬಾದ್ ಕೋಟೆ ಅಂತ. ಶಿರಾಡಿ ಘಾಟಿ ರಸ್ತೆ ಸಂಚಾರವಿದ್ದಾಗ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಂದ ಹಾಸನ ಮಾರ್ಗವಾಗಿ ಬೆಂಗಳೂರಿಗೆ ಬರುತ್ತಿದ್ದವರು ಈ ಕೋಟೆಗೆ ಭೇಟಿ ನೀಡಿ ಮುಂದೆ ಹೋಗುತ್ತಿದ್ದರು.
ಸಕಲೇಶಪುರದ ದೋಣಿಗಾಲ್ ಎಂಬ ಊರಿನ ಚಿಕ್ಕ ಗುಡ್ಡದ ಮೇಲೆ ಈ ಕೋಟೆ ಇದೆ. ಇದನ್ನೇರಲು 250 ಮೆಟ್ಟಿಲುಗಳನ್ನೇರಬೇಕು. ಇದರೊಳಗೆ ಅನೇಕ ಸುರಂಗ ಮಾರ್ಗಗಳಿದ್ದವು ಎನ್ನಲಾಗುತ್ತದೆ. ಈ ಕೋಟೆ ನಿರ್ಮಿಸಿದ್ದು ಒಬ್ಬ ಪ್ರೆಂಚ್ ವಾಸ್ತುಶಿಲ್ಪಿ. 1792ರಲ್ಲಿ ಟಿಪ್ಪು ಮಂಜ್ರಾಬಾದ್ ಕೋಟೆಯನ್ನು ನಿರ್ಮಿಸಿದ. ಈಸ್ಟ್ ಇಂಡಿಯಾ ಕಂಪೆನಿ ಆಗ ಟಿಪ್ಪುವಿನೊಂದಿಗೆ ಸಮರಕ್ಕಿಳಿದಿತ್ತು. ಬ್ರಿಟಿಷ್ ವಿರೋಧಿಯಾಗಿದ್ದ ಫ್ರೆಂಚ್ ಇಂಜಿನಿಯರ್‌ಗಳು ಇದನ್ನು ಮಿಲಿಟರಿ ಸ್ಟೈಲ್‌ನಲ್ಲಿ ನಿರ್ಮಿಸಿದರು. ದಟ್ಟ ಮಂಜಿನಲ್ಲಿ ಈ ಕೋಟೆ ಮುಚ್ಚಿಹೋಗುತ್ತಿತ್ತು. ಹಾಗಾಗಿ ಇದನ್ನು ಟಿಪ್ಪು ‘ಮಂಜ್ರಾಬಾದ್’ ಎಂದು ಕರೆದ. ಟಿಪ್ಪು ಸುಲ್ತಾನ್ ಈ ಕೋಟೆಯಲ್ಲಿರುತ್ತಿದ್ದ ಎನ್ನಲಾಗುತ್ತದೆ.
ಎಲ್ಲಿದೆ?
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ಲ್ಲಿ ಬರುತ್ತದೆ. ಸಕಲೇಶಪುರದಿಂದ 10 ಕಿಮೀ ಹಾಗೂ ಹಾಸನದಿಂದ 37 ಕಿಮೀ ದೂರದಲ್ಲಿದೆ. 

loader