ಮುಕೇಶ್ ಅಂಬಾನಿ ಸಂಪತ್ತು 83200 ಕೋಟಿ ರು. (13 ಶತಕೋಟಿ ಡಾಲರ್) ನಷ್ಟು ಹೆಚ್ಚಿದೆ. ಇನ್ನು ಅದಾನಿ ಗ್ರೂಪ್‌ನ ಗೌತಮ್ ಅದಾನಿ, ವಿಪ್ರೋದ ಅಜೀಂ ಪ್ರೇಮ್‌ಜಿ, ಆರ್.ಕೆ. ದಮಾನಿ ಅವರ ಆಸ್ತಿ ಮೌಲ್ಯ ಕೂಡ ತಲಾ 2೦೦೦೦ ಕೋಟಿ ರು.(3-4 ಶತಕೋಟಿ ಡಾಲರ್) ನಷ್ಟು ಏರಿದೆ ಎಂದು ವರದಿ ತಿಳಿಸಿದೆ.
ನವದೆಹಲಿ(ಆ.05): ಭಾರತದ ಟಾಪ್ 20 ಕೈಗಾರಿಕೋದ್ಯಮಿಗಳ ಸಂಪತ್ತು 2017ರ ಮೊದಲ 7 ತಿಂಗಳಲ್ಲಿ 3.20 ಕೋಟಿ ರು.(50 ಶತಕೋಟಿ ಡಾಲರ್) ನಷ್ಟು ವೃದ್ಧಿಗೊಳ್ಳುವ ಮೂಲಕ 13 ಲಕ್ಷ ಕೋಟಿ ರು. (200 ಶತಕೋಟಿ ಡಾಲರ್) ದಾಟಿದೆ. ಇದು ಭಾರತದ 130 ಲಕ್ಷ ಕೋಟಿ ರು. (2 ಲಕ್ಷ ಕೋಟಿ ಡಾಲರ್) ಆರ್ಥಿಕತೆಯ ಶೇ.10ರಷ್ಟಾಗಿದೆ ಎಂದು ವರದಿಯೊಂದು ತಿಳಿಸಿದೆ. ಬ್ಲೂಂಬರ್ಗ್ ಬಿಲಿಯನೇರ್ ಇಂಡೆಕ್ಸ್ ಈ ದತ್ತಾಂಶ ಕ್ರೋಡೀಕರಿಸಿದೆ.
ಮುಕೇಶ್ ಅಂಬಾನಿ ಸಂಪತ್ತು 83200 ಕೋಟಿ ರು. (13 ಶತಕೋಟಿ ಡಾಲರ್) ನಷ್ಟು ಹೆಚ್ಚಿದೆ. ಇನ್ನು ಅದಾನಿ ಗ್ರೂಪ್ನ ಗೌತಮ್ ಅದಾನಿ, ವಿಪ್ರೋದ ಅಜೀಂ ಪ್ರೇಮ್ಜಿ, ಆರ್.ಕೆ. ದಮಾನಿ ಅವರ ಆಸ್ತಿ ಮೌಲ್ಯ ಕೂಡ ತಲಾ 2೦೦೦೦ ಕೋಟಿ ರು.(3-4 ಶತಕೋಟಿ ಡಾಲರ್) ನಷ್ಟು ಏರಿದೆ ಎಂದು ವರದಿ ತಿಳಿಸಿದೆ.
ಕೋಟಕ್ ಮಹೀಂದ್ರಾ ಕಂಪನಿಯ ಉದಯ ಕೋಟಕ್ ಅವರ ಆಸ್ತಿ 20600 ಕೋಟಿ ರು. (3.22 ಶತಕೋಟಿ ಡಾಲರ್) ನಷ್ಟು, ಅವೆನ್ಯೂ ಸೂಪರ್ಮಾರ್ಟ್ನ ರಾಧಾಕೃಷ್ಣ ದಮಾನಿ ಅವರ ಸಂಪತ್ತು 22100 ಕೋಟಿ ರು. (3.46 ಶತಕೋಟಿ ಡಾಲರ್) ನಷ್ಟು, ಕುಮಾರ ಮಂಗಳಂ ಬಿರ್ಲಾ ಆಸ್ತಿ 2೦೦೦೦ ಕೋಟಿ ರು. (3.13 ಶತಕೋಟಿ ಡಾಲರ್) ನಷ್ಟು ಏರಿದೆ ಎಂದು ವರದಿ ತಿಳಿಸಿದೆ.
