ಖಾಲಿದ್ ತಾನು ಕಾರ್ಯಾಚರಣೆ ನಡೆಸುವ ಪ್ರದೇಶದಲ್ಲಿ 17 ಯುವತಿಯರ ಜೊತೆ ಪ್ರೇಮದ ನಾಟಕ ಆಡುತ್ತಾ ಕಾಲ ಕಳೆಯುತ್ತಿದ್ದ. ಹೀಗೆ ಆತನಿಂದ ಮೋಸ ಹೋದ ಯುವತಿಯೊಬ್ಬಳು, ಆತ ಸೋಮವಾರ ತನ್ನ ಮನೆಗೆ ಬರುವ ಮಾಹಿತಿ ನೀಡಿದ್ದಳು.

ಶ್ರೀನಗರ(ಅ.10): ಮುನಿಸಿಕೊಂಡಿದ್ದ ಪ್ರೇಯಸಿ ನೀಡಿದ್ದ ಮಾಹಿತಿಯನ್ವಯ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಜೈಷ್ ಎ ಮಹಮ್ಮದ್ ಉಗ್ರ ಸಂಘಟನೆ ಕಮಾಂಡರ್ ಉಮರ್ ಖಾಲಿದ್ ಹತ್ಯೆಯಾಗಿದ್ದಾನೆ.

ಉತ್ತರ ಕಾಶ್ಮೀರದ ಲಾದೂರಾದಲ್ಲಿ ಪ್ರೇಯಸಿ ಮನೆಗೆ ಭೇಟಿ ನೀಡಿದ್ದ ವೇಳೆ ದಾಳಿ ನಡೆಸಿದ ಭದ್ರತಾ ಪಡೆಗಳು ಖಾಲಿದ್‌'ನನ್ನು ಸೆರೆ ಹಿಡಿಯಲು ಯತ್ನ ನಡೆಸಿದವಾದರೂ, ಆತ ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ ವೇಳೆ ಎನ್'ಕೌಂಟರ್ ನಡೆಯಿತು. ಈ ವೇಳೆ ಖಾಲಿದ್ ಸಾವನ್ನಪ್ಪಿದ್ದಾನೆ.

ಪ್ರೇಯಸಿಯಿಂದ ಸಿಕ್ಕಿಬಿದ್ದ: ಖಾಲಿದ್ ತಾನು ಕಾರ್ಯಾಚರಣೆ ನಡೆಸುವ ಪ್ರದೇಶದಲ್ಲಿ 17 ಯುವತಿಯರ ಜೊತೆ ಪ್ರೇಮದ ನಾಟಕ ಆಡುತ್ತಾ ಕಾಲ ಕಳೆಯುತ್ತಿದ್ದ. ಹೀಗೆ ಆತನಿಂದ ಮೋಸ ಹೋದ ಯುವತಿಯೊಬ್ಬಳು, ಆತ ಸೋಮವಾರ ತನ್ನ ಮನೆಗೆ ಬರುವ ಮಾಹಿತಿ ನೀಡಿದ್ದಳು. ಆಕೆ ನೀಡಿದ ಸುಳಿವಿನಂತೆ ಖಾಲಿದ್ ಸೋಮವಾರ ಯುವತಿ ಮನೆಯತ್ತ ಬಂದಾಗ, ಭದ್ರತಾ ಪಡೆಗಳು ಆತನನ್ನು ಸುತ್ತುವರೆದಿದ್ದವು. ಈ ವೇಳೆ ನಡೆದ ಎನ್'ಕೌಂಟರ್‌'ನಲ್ಲಿ ಖಾಲಿದ್ ಸಾವನ್ನಪ್ಪಿದ್ದಾನೆ.