ನಿನ್ನೆಯಷ್ಟೆ ಸ್ಯಾಂಡಲ್ ವುಡ್ ಬ್ಯೂಟಿ ಅಮೂಲ್ಯ ಮತ್ತು ಜಗದೀಶ್ ಮೆಹಂದಿ ಕಾರ್ಯಕ್ರಮ ಬಹಳ ಸಂಭ್ರಮದಿಂದ ನಡೆಯಿತು. ಸಂಭ್ರಮದ ಮೆಹಂದಿ ಕಾರ್ಯಕ್ರಮಕ್ಕೆ  ಸ್ಯಾಂಡಲ್​ ವುಡ್​  ಬಳಗ ಸಾಕ್ಷಿಯಾಯಿತು. ಇಂದು ನವ ವಧು-ವರರು ಆದಿಚುಂಚನಗಿರಿ ಕ್ಷೇತ್ರದತ್ತ ಪ್ರಯಾಣ ಬೆಳಸಲಿದ್ದಾರೆ.

ಬೆಂಗಳೂರು(ಮೇ.11): ನಿನ್ನೆಯಷ್ಟೆ ಸ್ಯಾಂಡಲ್ ವುಡ್ ಬ್ಯೂಟಿ ಅಮೂಲ್ಯ ಮತ್ತು ಜಗದೀಶ್ ಮೆಹಂದಿ ಕಾರ್ಯಕ್ರಮ ಬಹಳ ಸಂಭ್ರಮದಿಂದ ನಡೆಯಿತು. ಸಂಭ್ರಮದ ಮೆಹಂದಿ ಕಾರ್ಯಕ್ರಮಕ್ಕೆ ಸ್ಯಾಂಡಲ್​ ವುಡ್​ ಬಳಗ ಸಾಕ್ಷಿಯಾಯಿತು. ಇಂದು ನವ ವಧು-ವರರು ಆದಿಚುಂಚನಗಿರಿ ಕ್ಷೇತ್ರದತ್ತ ಪ್ರಯಾಣ ಬೆಳಸಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಮೂಲ್ಯ ಸ್ವಗೃಹದಲ್ಲಿ ವಧು ಪೂಜೆ ಸಲ್ಲಿಸಿ ಕುಟುಂಬ ಸಮೇತ ಅಮೂಲ್ಯ ಆದಿಚುಂಚನಗಿರಿಗೆ ಪ್ರಯಾಣ ಬೆಳಸಲಿದ್ದಾರೆ. ಇನ್ನು ಅಮೂಲ್ಯ ಕುಟುಂಬ ಪ್ರಯಾಣ ಬೆಳಸಿದ ಬಳಿಕ ಆರ್ ಆರ್ ನಗರದಿಂದ ಜಗದೀಶ್ ವರ ಪೂಜೆ ಮುಗಿಸಿ ಕುಟುಂಬ ಸಮೇತರಾಗಿ ಆದಿಚುಂಚನಗಿರಿಯತ್ತ ಪ್ರಯಾಣ ಬೆಳಸಲಿದ್ದಾರೆ.

ಇನ್ನು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದಲ್ಲಿ ಜಗದೀಶ್ ಕುಟುಂಬದವರನ್ನ ಮಂಟಪಕ್ಕೆ ಕರೆದುಕೊಂಡು ಬರುವ ಶಾಸ್ತ್ರ ನಡೆಯುತ್ತದೆ. ಇದಾದ ಮೇಲೆ ಗಂಗೆ ಶಾಸ್ತ್ರ ಹಾಗು ವಧು ವರರ ಶಾಸ್ತ್ರಗಳು ನಡೆಯಲಿವೆ. ನಾಳೆ ಶುಭ ಲಗ್ನದಲ್ಲಿ ಅಮೂಲ್ಯ ಜಗದೀಶ್ ಮದುವೆ ಮುಹೂರ್ತ ನೆರವೇರಲಿದೆ. ಎರಡು ಕುಟುಂಬದವರು ಹಾಗೂ ಶ್ರೀ ನಿರ್ಮಾಲಾನಂದ ಸ್ವಾಮಿ ಸಮ್ಮುಖದಲ್ಲಿ ಜಗದೀಶ್ ಅಮೂಲ್ಯ ಕೈ ಹಿಡಿಯಲಿದ್ದಾರೆ. ನೂರಾರು ಜನ ಸ್ಯಾಂಡಲ್​ವುಡ್​ ಮಂದಿ ಅಮ್ಮು, ಜಗದೀಶ್​ ಮದುವೆಗೆ ಸಾಕ್ಷಿಯಾಗಲಿದ್ದಾರೆ.