ನಾಳೆ ರಾಜ್ಯಸಭೆ ಚುನಾವಣೆ : 2 ಪಕ್ಷಗಳಿಗೆ ಅಡ್ಡ ಮತದಾನದ ಭೀತಿ

news | Thursday, March 22nd, 2018
Suvarna Web Desk
Highlights

ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಗೆಲುವಿಗೆ ಅಗತ್ಯವಾದ ಮತಗಳನ್ನು ಬಿಜೆಪಿ ಪಡೆಯಲಿದ್ದು, ರಾಜೀವ್ ಚಂದ್ರಶೇಖರ್ ಗೆಲುವು ಸುಲಭವಾಗಲಿದೆ. ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ಕೆಲವು ಮತಗಳ ಕೊರತೆಯಿದೆ. ಕಾಂಗ್ರೆಸ್​ನ ಮೂರನೇ ಅಭ್ಯರ್ಥಿಯ ಗೆಲುವಿಗೆ ಕೂಡ ಕೆಲವು ಮತಗಳ ಕೊರತೆಯಿದೆ

ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರೋ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಬೆಳಗ್ಗೆ 9 ಗಂಟೆಗೆ ಮತದಾನ ಆರಂಭವಾಗಲಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್​ಗೆ ಅಡ್ಡ ಮತದಾನದ ಭೀತಿ ಶುರುವಾಗಿದೆ.

ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ನಾಳೆ ಮತದಾನ ನಡೆಯಲಿದೆ. ಮೂರು ಪಕ್ಷಗಳಿಂದ  ಎಲ್. ಹನುಮಂತಯ್ಯ, ನಾಸೀರ್ ಹುಸೇನ್, ಜೆ.ಸಿ. ಚಂದ್ರಶೇಖರ್ , ಬಿಜೆಪಿಯ ರಾಜೀವ್ ಚಂದ್ರಶೇಖರ್ ಹಾಗೂ ಜೆಡಿಎಸ್‌ನ ಬಿ.ಎಂ. ಫಾರೂಕ್ ಸೇರಿ ಐವರು ಕಣದಲ್ಲಿದ್ದಾರೆ.

ಚುನಾವಣಾ ಹೊಸ್ತಿಲಲ್ಲೇ ಜೆಡಿಎಸ್​ಗೆ ಅಡ್ಡಮತದಾನದ ಭೀತಿ ಶುರುವಾಗಿದೆ. ಹೀಗಾಗಿ ತಮ್ಮ ಅಭ್ಯರ್ಥಿಗಳಿಗೆ ಮತ ಖಾತರಿಗೊಳಿಸಲು ತಮ್ಮ ಶಾಸಕರಿಗೆ ವಿಪ್ ಜಾರಿ ಮಾಡಿವೆ. ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಗೆಲುವಿಗೆ ಅಗತ್ಯವಾದ ಮತಗಳನ್ನು ಬಿಜೆಪಿ ಪಡೆಯಲಿದ್ದು, ರಾಜೀವ್ ಚಂದ್ರಶೇಖರ್ ಗೆಲುವು ಸುಲಭವಾಗಲಿದೆ. ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ಕೆಲವು ಮತಗಳ ಕೊರತೆಯಿದೆ. ಕಾಂಗ್ರೆಸ್​ನ ಮೂರನೇ ಅಭ್ಯರ್ಥಿಯ ಗೆಲುವಿಗೆ ಕೂಡ ಕೆಲವು ಮತಗಳ ಕೊರತೆಯಿದೆ. ಈ ಮತಗಳನ್ನು ಕಾಂಗ್ರೆಸ್ ಪಕ್ಷ ಜೆಡಿಎಸ್ ಬಂಡಾಯ ಶಾಸಕರು ಪಕ್ಷೇತರರ ನೆರವು ಪಡೆದು ಸರಿದೂಗಿಸಿಕೊಳ್ಳುವ ತಂತ್ರ ರೂಪಿಸಿದೆ.

ರಾಜ್ಯಸಭಾ ಚುನಾವಣೆ ರಾಜಕೀಯ ಪಕ್ಷಗಳ ಒಗ್ಗಟ್ಟಿನ ಅಗ್ನಿ ಪರೀಕ್ಷೆ ಎಂದೇ ಬಿಂಬಸಲಾಗ್ತಿದೆ. ಹೀಗಾಗಿ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ. ವಿಧಾನಸೌಧದ ಮೊದಲನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 106 ರಲ್ಲಿ ಮತದಾನ ನಡೆಯಲಿದೆ. ಸಂಜೆ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ.

ಇನ್ನು ಒಟ್ಟೂ 16 ರಾಜ್ಯಗಳಿಂದ ರಾಜ್ಯಸಭೆಯ 58 ಸ್ಥಾನಗಳಿಗೆ ನಾಳೆ ಚುನಾವಣೆ ನಡೆಯುತ್ತಿದೆ. ಬಹುಮತದ ಸದಸ್ಯರನ್ನು ಪಡೆಯುವ ನಿಟ್ಟಿನಲ್ಲಿ ಬಿಜೆಪಿಗೆ ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ.  

 

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk