Asianet Suvarna News Asianet Suvarna News

ನಾಳೆ ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ; ಏನೇನ್ ಇರುತ್ತೆ? ಏನೇನ್ ಇರಲ್ಲ? ಇಲ್ಲಿದೆ ವಿವರ

ಕರ್ನಾಟಕ ಖಾಸಗಿ ಆಸ್ಪತ್ರೆಗಳ ತಿದ್ದುಪಡಿಗಳ ಕಾಯ್ದೆ ವಿರೋಧ ವ್ಯಕ್ತಪಡಿಸುತ್ತಿರುವ ಭಾರತೀಯ ವೈದ್ಯಕೀಯ ಸಂಘ ನಾಳೆ ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರಕ್ಕೆ ಕರೆ ನೀಡಿದೆ. ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ರವರೆಗೆ ಮುಷ್ಕರ ನಡೆಯಲಿದೆ. ಬೆಳಿಗ್ಗೆ 8 ರಿಂದ ಹೊರರೋಗಿಗಳ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Tomorrow Doctors Protest

ಬೆಂಗಳೂರು (.02): ಕರ್ನಾಟಕ ಖಾಸಗಿ ಆಸ್ಪತ್ರೆಗಳ ತಿದ್ದುಪಡಿಗಳ ಕಾಯ್ದೆ ವಿರೋಧ ವ್ಯಕ್ತಪಡಿಸುತ್ತಿರುವ ಭಾರತೀಯ ವೈದ್ಯಕೀಯ ಸಂಘ ನಾಳೆ ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರಕ್ಕೆ ಕರೆ ನೀಡಿದೆ. ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ರವರೆಗೆ ಮುಷ್ಕರ ನಡೆಯಲಿದೆ. ಬೆಳಿಗ್ಗೆ 8 ರಿಂದ ಹೊರರೋಗಿಗಳ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಸರ್ಕಾರದ ಈ ಕಾಯ್ದೆಯ ವಿರುದ್ಧ ಈಗಾಗಲೇ ಜೂನ್ 16 ರಂದು ಪ್ರತಿಭಟನೆ ಮಾಡಿದ್ದೇವೆ.  ಅಂದು ಸಿಎಂ ಸೇರಿದಂತೆ ಆರೋಗ್ಯ ಸಚಿವರನ್ನು ಭೇಟಿ ಮಾಡಿ, ನಮ್ಮ ಸಮಸ್ಯೆಗಳು, ಬೇಡಿಕೆಗಳ ಬಗ್ಗೆ ಚರ್ಚೆ ಮಾಡಿದ್ದೆವು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈಗ ಹೊಸದಾಗಿ ಕುಂದು ಕೊರತೆ ಪರಿಹಾರ ಸಮಿತಿ ಜಾರಿ ತರಲು ಸರ್ಕಾರ ನಿರ್ಧಾರ ಮಾಡಿದೆ.  ಇದರಲ್ಲಿ ಯಾವ ವೈದ್ಯರ ವಿರುದ್ಧ ದೂರು ಹೂಡಿದ್ದಾರೋ ಆ ವೈದ್ಯರು ಲಾಯರ್ ನೇಮಕ ಮಾಡುವ ಹಾಗಿಲ್ಲ.  ಅಂದರೆ ಕಸಬ್'ನಂತಹ ದೇಶ ದ್ರೋಹಿಗೆ ಲಾಯರ್ ಇಟ್ಟುಕೊಳ್ಳಲು ಅವಕಾಶ ಇರುವ ನಮ್ಮ ದೇಶದಲ್ಲಿ ವೈದ್ಯರನ್ನು  ಹೀಗ್ಯಾಕೆ ನಡೆಸಿಕೊಳ್ಳುತ್ತೀರಾ ಎಂದು  ಭಾರತೀಯ ವೈದ್ಯಕೀಯ ಸಂಘ ಅಧ್ಯಕ್ಷ ರವೀಂದ್ರ  ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಾಳೆ  ಯಾವುದೇ ರೀತಿಯ ಆಪರೇಷನ್ಸ್ ಮಾಡಲಾಗುವುದಿಲ್ಲ.  ಸಾಂಕೇತಿಕವಾಗಿ ಹೊರ ರೋಗಿಗಳ ಸೇವೆ ಸ್ಥಗಿತ ಗೊಳಿಸುತ್ತೇವೆ.  ಸರ್ಕಾರ ಆಗಲೂ ಮಾತು ಕಥೆಗೆ ಮುಂದಾಗದಿದ್ರೆ, ನವೆಂಬರ್ 09 ಹಾಗೂ 10 ರಂದು ವೈದ್ಯ ವೃತ್ತಿ ಯನ್ನು ತ್ಯಜಿಸುತ್ತೇವೆ. ಸರ್ಕಾರ ಜಾರಿ ಮಾಡುತ್ತಿರುವ ಕಾಯ್ದೆಯಿಂದ ವೈದ್ಯರು ಹಾಗೂ ರೋಗಿಗಳು ಭಾರಿ ತೊಂದರೆ ಅನುಭವಿಸುತ್ತಾರೆ.

 ರಾಜ್ಯದಲ್ಲಿ ಒಟ್ಟು ಐವತ್ತು ಸಾವಿರ ಖಾಸಗಿ ಆಸ್ಪತ್ರೆಗಳು ಇವೆ. ಎಲ್ಲಾ ಆಸ್ಪತ್ರೆಗಳು ಮುಷ್ಕರಕ್ಕೆ ಬೆಂಬಲ ನೀಡಿವೆ.

ನಾಳೆ ಏನೇನು ಇರಲ್ಲ..?

ನಾಳೆ ಹೊರ ರೋಗಿಗಳ ಪ್ರವೇಶ ನಿಷೇಧ.

ಹೊರ ರೋಗಿಗಳಿಗೆ ಆಪರೇಶನ್​ ಮಾಡಲ್ಲ

ಜ್ವರ, ಡೆಂಗ್ಯೂ ರೋಗಗಳಿಗೆ ಚಿಕಿತ್ಸೆ ಇಲ್ಲ

ವೈದ್ಯ ಸೇವೆ ಸ್ಥಗಿತ

ಸಣ್ಣ ಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ಇರುವುದಿಲ್ಲ

ಏನೇನು ಸಿಗುತ್ತೆ..?

ತುರ್ತು ಚಿಕಿತ್ಸೆ ಸೇವೆ ಲಭ್ಯ

ಹೆರಿಗೆ ಕೇಸ್​​ ಬಂದ್ರೆ ಸೇವೆ ನೀಡಲಾಗುವುದು

ಈಗಾಗಲೇ ದಾಖಲಾಗಿರುವ ಒಳ ರೋಗಿಗಳಿಗೆ ಚಿಕಿತ್ಸೆ ಲಭ್ಯ

ಮೆಡಿಸನ್ಸ್ ವ್ಯವಸ್ಥೆ ಲಭ್ಯ

ವೈದರ ಬೇಡಿಕೆ ಏನು..?

ಕುಂದುಕೊರತೆ ಪರಿಹಾರ ಸಮಿತಿ ರಚನೆ ಬೇಡಬಾರದು

ಜೈಲು ಶಿಕ್ಷೆ ಮತ್ತು ದಂಡ ಹಾಕವ ಕೆಲಸ ಮಾಡಬಾರದು

ದರ ನಿಗದಿ ಮಾಡೋದೋ ಆಯಾ ಆಸ್ಪತ್ರೆಗಳ ವಿಮೋಚನೆಗೆ ಬೀಡಬೇಕು

ಖಾಸಗಿ ಆಸ್ಪತ್ರೆಗಳ ನಿಗದಿ ಮಾಡಿದ ದರದ ಪಟ್ಟಿ ಪ್ರಕಟ ಮಾಡಲಾಗುವುದು

ಖಾಸಗಿ ಆಸ್ಪತ್ರೆಯ ದರವನ್ನ ಸರ್ಕಾರ ನಿಗದಿ ಮಾಡಬಾರದು

ಚಿಕಿತ್ಸೆ ನೀಡುವ ವೇಳೆ ರೋಗಿ ಮೃತ ಪಟ್ಟಲ್ಲಿ ವೈದ್ಯರನ್ನ ದೋಷಿಸುವಂತಿಲ್ಲ

ಸರ್ಕಾರದ ವಿಧೇಯಕದಲ್ಲೇನಿದೆ..?

ಖಾಸಗಿ ಆಸ್ಪತ್ರೆಗಳ ವೈದ್ಯಕೀಯ ಶುಲ್ಕ ನಿಗದಿ ಅಧಿಕಾರ ರಾಜ್ಯ ಸರ್ಕಾರಕ್ಕೆ

ರಾಜ್ಯ ಸರ್ಕಾರ ನಿಗದಿ ಮಾಡಿದ ಶುಲ್ಕವನ್ನ ಖಾಸಗಿ ಆ್ಪತ್ರೆಗಳ ಒಳಗೆ ರೇಟ್​ ಬೋಲ್ಡ್​ ಹಾಕಬೇಕು

ಚಿಕಿತ್ಸೆಯ ವೆಚ್ಚವನ್ನು ಚಿಕಿತ್ಸೆ ಮೊದ್ಲೆ ಅಂದಾಜಿಸಬೇಕು, ಅಂದಾಜಿಸಿದ ಬಿಲ್​ ಮೀತಿ ಮೀರುವಂತಿಲ್ಲ

ತುರ್ತು ಸಂದರ್ಭದಲ್ಲಿ ರೋಗಿಯಿಂದ ಮುಂಗಡ ಪಾವತಿಗೆ ಒತ್ತಾಯಿಸುವಂತಿಲ್ಲ

ಮುಂಗಡ ಹಣಕ್ಕಾಗಿ ಒತ್ತಾಯಿಸಿ ಚಿಕಿತ್ಸೆ ನಿರಾಕರಿಸುವಂತಿಲ್ಲ

ರೋಗಿಯ ಮೃತದೇಹ ಹಸ್ತಾಂತರಿಸುವಾಗ ಬಾಕಿ ಮೊತ್ತಕ್ಕೆ ಒತ್ತಾಯಿಸುವಂತಿಲ್ಲ

ಹೆಚ್ಚಿನ ಶುಲ್ಕ ವಸೂಲಿ ಮಾಡಿದರೆ 5 ಲಕ್ಷ ರೂ.ವರೆಗೆ ದಂಡ, 3 ವರ್ಷಗಳವರೆಗೆ ಜೈಲು

ಪ್ರತಿ ಜಿಲ್ಲೆಗೂ ಕುಂದುಕೊರತೆ ಪರಿಹಾರ ಸಮಿತಿ ರಚನೆ

ದರ ನಿಗದಿ ಮಾಡಲ್ಲೂ ತಜ್ಞರ ಸಮಿತಿ ರಚನೆ

Follow Us:
Download App:
  • android
  • ios