ಬಂದ್ ಮಾಡಿದ್ರೆ ಹುಷಾರ್..! : ನಗರ ಪೊಲೀಸ್ ಆಯುಕ್ತರ ಖಡಕ್ ಸೂಚನೆ

Tomorrow BJP Karnataka Bundh Is Doubt
Highlights

ರೈತರ ಸಾಲ ಮನ್ನಾಗೆ ಆಗ್ರಹಿಸಿ ನಾಳೆ ರಾಜ್ಯಾದ್ಯಂತ ಬಿಜೆಪಿ ಬಂದ್ ಗೆ ಕರೆ ನೀಡಿದ್ದು, ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ. ಸುನಿಲ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.  
 

ಬೆಂಗಳೂರು :  ರೈತರ ಸಾಲ ಮನ್ನಾಗೆ ಆಗ್ರಹಿಸಿ ನಾಳೆ ರಾಜ್ಯಾದ್ಯಂತ ಬಿಜೆಪಿ ಬಂದ್ ಗೆ ಕರೆ ನೀಡಿದ್ದು, ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ. ಸುನಿಲ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.  

ಬಂದ್ ಆಚರಿಸುವುದು ನ್ಯಾಯಾಲಯದ ಆದೇಶದಂತೆ ಕಾನೂನು  ಮತ್ತು ಸಂವಿಧಾನ ಬಾಹಿರವಾಗಿದ್ದು ಬಂದ್ ನಡೆಸಿದವರ ವಿರುದ್ಧ ಮುಲಾಜಿಲ್ಲದೇ ಸೂಕ್ತ ಕ್ರಮ  ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. 

ಇನ್ನು ರಾಜ್ಯದಲ್ಲಿ ಬಂದ್ ಗೆ ಕರೆ ನೀಡಿದ ಬಿಜೆಪಿ ಮುಖಂಡರು, ಕಾರ್ಯಕರ್ತರು  ಬಂದ್ ಮಾಡದಂತೆ ಸೂಕ್ತ ಕ್ರಮ ವಹಿಸಬೇಕು ಎಂದು ಆಯುಕ್ತರು  ಪೊಲೀಸರಿಗೆ ಸೂಚನೆ ನೀಡಿದ್ದಾರೆ. 

ಇನ್ನು ರಾಜ್ಯದಲ್ಲಿ ಕರೆ ನೀಡಿರುವ ಬಂದ್ ಗೆ ಇದುವರೆಗೂ ಕೂಡ ಯಾವುದೇ ಸಂಘಟನೆಗಳೂ ಕೂಡ ಬೆಂಬಲ ನೀಡಿಲ್ಲ. ಅಷ್ಟೇ ಅಲ್ಲದೇ  ಈ ಬಗ್ಗೆ ಬಿಜೆಪಿಯಲ್ಲೇ ಸ್ಪಷ್ಟ ನಿರ್ಧಾರವಿಲ್ಲ. 

loader