ಗೌರಿ ಲಂಕೇಶ್​​ ಹತ್ಯೆ ಬೆನ್ನಲ್ಲೇ ಪ್ರಗತಿಪರ ಸಂಘಟನೆಗಳು ಗೌರಿ ಬಳಗವನ್ನು ಅಸ್ತಿತ್ವಕ್ಕೆ ತಂದಿವೆ. ಗೌರಿ ಬಳಗದ ಮೂಲಕ ದೆಹಲಿ ಸೇರಿದಂತೆ ರಾಜ್ಯ, ಜಿಲ್ಲಾ ಮಟ್ಟಗಳಲ್ಲೂ ನಿರಂತರ ಸರಣಿ ಪ್ರತಿಭಟನೆ ಸಭೆ ನಡೆಸಲು ನಿರ್ಣಯಿಸಿವೆ. ರವೀಂದ್ರ ಕಲಾಕ್ಷೇತ್ರದ ಸಭಾಂಗಣದಲ್ಲಿ ಅನೌಪಚಾರಿಕ ಸಭೆ ನಡೆಸಿದ ಪ್ರಗತಿಪರ ಸಂಘಟನೆಗಳ ಮುಖಂಡರು, ನಿರಂತರವಾಗಿ ಸರಣಿ ಪ್ರತಿಭಟನೆ ಸಭೆ ನಡೆಸುವ ಪ್ರಸ್ತಾಪವ ಮಂಡಿಸಿದ್ದು, ನಾಳೆ 'ನಾನು ಗೌರಿ'  ಎಂಬ ಬೃಹತ್ ಜನಾಂದೋಲನ ನಡೆಯಲಿದೆ. ಜನಾಂದೋಲನದಲ್ಲಿ ಇವರೆಲ್ಲಾ ಭಾಗಿಯಾಗಲಿದ್ದಾರೆ.

ಬೆಂಗಳೂರು (ಸೆ.11): ಗೌರಿ ಲಂಕೇಶ್​​ ಹತ್ಯೆ ಬೆನ್ನಲ್ಲೇ ಪ್ರಗತಿಪರ ಸಂಘಟನೆಗಳು ಗೌರಿ ಬಳಗವನ್ನು ಅಸ್ತಿತ್ವಕ್ಕೆ ತಂದಿವೆ. ಗೌರಿ ಬಳಗದ ಮೂಲಕ ದೆಹಲಿ ಸೇರಿದಂತೆ ರಾಜ್ಯ, ಜಿಲ್ಲಾ ಮಟ್ಟಗಳಲ್ಲೂ ನಿರಂತರ ಸರಣಿ ಪ್ರತಿಭಟನೆ ಸಭೆ ನಡೆಸಲು ನಿರ್ಣಯಿಸಿವೆ. ರವೀಂದ್ರ ಕಲಾಕ್ಷೇತ್ರದ ಸಭಾಂಗಣದಲ್ಲಿ ಅನೌಪಚಾರಿಕ ಸಭೆ ನಡೆಸಿದ ಪ್ರಗತಿಪರ ಸಂಘಟನೆಗಳ ಮುಖಂಡರು, ನಿರಂತರವಾಗಿ ಸರಣಿ ಪ್ರತಿಭಟನೆ ಸಭೆ ನಡೆಸುವ ಪ್ರಸ್ತಾಪವ ಮಂಡಿಸಿದ್ದು, ನಾಳೆ 'ನಾನು ಗೌರಿ'ಎಂಬ ಬೃಹತ್ ಜನಾಂದೋಲನ ನಡೆಯಲಿದೆ. ಜನಾಂದೋಲನದಲ್ಲಿ ಇವರೆಲ್ಲಾ ಭಾಗಿಯಾಗಲಿದ್ದಾರೆ.

ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್​ ಅವರ ಹತ್ಯೆ ಈಗ ಪ್ರಗತಿಪರ ಸಂಘಟನೆಗಳ ಒಗ್ಗೂಡುವಿಕೆಗೆ ಪ್ರಬಲ ವೇದಿಕೆಯಾಗಿದೆ. ಹತ್ಯೆ ಖಂಡಿಸಿ ರಾಷ್ಟ್ರೀಯ ಮಟ್ಟ ಮತ್ತು ರಾಜ್ಯದ ಜಿಲ್ಲಾ ಮಟ್ಟದಲ್ಲೂ ನಿರಂತರವಾಗಿ ಸರಣಿ ಪ್ರತಿಭಟನೆ ಸಭೆಗಳು ನಡೆದಿದ್ದು, ನಾಳೆ ಬೃಹತ್ ಹೋರಾಟಕ್ಕೆ ಸಿದ್ದತೆ ಮಾಡಲಾಗಿದೆ. ಗೌರಿ ಹತ್ಯೆಯಾದ ಬೆನ್ನಲ್ಲೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಭೆ ಸೇರಿದ್ದ ಪ್ರಗತಿಪರ ಸಂಘಟನೆಗಳ ಮುಖಂಡರು ಸ್ವರಾಜ್ ಅಭಿಯಾನದ ಯೋಗೇಂದ್ರ ಯಾದವ್ ನೇತರತ್ವದಲ್ಲಿ ಜನಾಂದೋಲನ ನಡೆಸಲು ನಿರ್ಣಯ ಕೈಗೊಂಡಿದ್ದಾರೆ.

ನಾಳೆ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸೆಂಟ್ರಲ್ ಕಾಲೇಜು ಮೈದಾನದವರೆಗೆ ಬೃಹತ್ ರ್ಯಾಲಿ ನಡೆಸಲಿದ್ದಾರೆ. ಈ ರ್ಯಾಲಿಯಲ್ಲಿ ಮೇಧಾ ಪಾಟ್ಕರ್, ತೀಸ್ತಾ, ಪಿ ಸಾಯಿನಾಥ್, ಇರ್ಫಾನ್ ಅಲಿ, ಸಾಗರಿಕಾ ಘೋಷ್, ಸೀತಾರಾಮ್ ಯೆಚೂರಿ, ಸ್ವಾಮಿ ಯಘ್ನಾವಿಶ್, ಪ್ರಕಾಶ್ ರೈ, ನಟ ಚೇತನ್, ಗೋವಿಂದ್ ಪನ್ಸಾರೆ ಕುಟುಂಬ, ಹಾಗೂ ಕಲ್ಬುರ್ಗಿ ಫ್ಯಾಮಿಲಿ ಸೇರಿದಂತೆ ಸಾಹಿತಿಗಳು, ಪ್ರಗತಿಪರ ಚಿಂತಕರು, ಕಲಾವಿದರು , ಮುರುಗ ರಾಜರು, ಜಯಮೃತ್ಯುಂಜಯ ಸ್ವಾಮೀಜಿ, ಹಾಗೂ ಗೋವಾ, ತಮಿಳುನಾಡು, ತೆಲಂಗಾಣದಿಂದ ಗೌರಿ ಅಭಿಮಾನಿಗಳು ಕೂಡ ಸೇರಲಿದ್ದಾರೆ. ಅಲ್ಲದೆ ಕೋಮು ಸೌಹಾರ್ದ ವೇದಿಕೆಯ ಕೆ.ಎಲ್​.ಅಶೋಕ್​​, ಮಾವಳ್ಳಿ ಶಂಕರ್​, ಜಿ.ಎನ್​.ನಾಗರಾಜ್​​, ಚುಕ್ಕಿ ನಂಜುಂಡಸ್ವಾಮಿ, ರವಿಕೃಷ್ಣಾರೆಡ್ಡಿ, ಕೆ.ನೀಲಾ ಸೇರಿದಂತೆ ದಲಿತ, ಎಡಪಂಥೀಯ ಸಂಘಟನೆಗಳು ಕೂಡ ಕೈ ಜೋಡಿಸಲಿವೆ.

ಗೌರಿ ಹತ್ಯೆ ಖಂಡಿಸಿ ದೆಹಲಿಯಲ್ಲಿ ಬೃಹತ್​ ಮಟ್ಟದ ಪ್ರತಿಭಟನಾ ಸಭೆ ನಡೆಸುವ ಬಗ್ಗೆ ಸ್ವರಾಜ್​ ಅಭಿಯಾನದ ಯೋಗೇಂದ್ರ ಯಾದವ್ ಅವರು ಗೌರಿ ಒಡನಾಡಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿದ್ದಾರೆ. ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸರಣಿ ಪ್ರತಿಭಟನೆ ನಡೆಸಲು ತಯಾರಿ ಮಾಡಿಕೊಳ್ಳಲಾಗಿದೆ.