ನವದೆಹಲಿ (ನ.14): ದೇಶದ ಎಲ್ಲಾ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ  ನವೆಂಬರ್ 18 ರ ಮಧ್ಯರಾತ್ರಿವರೆಗೆ ಸುಂಕವನ್ನು (ಟೋಲ್ ) ರದ್ದುಗೊಳಿಸಲಾಗಿದೆ.

500 ಹಾಗೂ 1000 ರೂ. ನೋಟುಗಳ ರದ್ದಿನ ಪರಿಣಾಮವಾಗಿ ಜನರಿಗೆ ಉಂಟಾಗಿರುವ ಅನಾನುನೂಲವನ್ನು ಪರಿಗಣಿಸಿ ನ.14 ವರೆಗೆ ರಾಷ್ಟ್ರೀಯ ಹೆದ್ದಾರಿಗಳನ್ನು ಸುಂಕ (ಟೋಲ್) ಮುಕ್ತಗೊಳಿಸಿತ್ತು. ಈಗ ನ.18 ರವರೆಗೆ ಅದನ್ನು ಮುಂದೂಡಿದೆ.

ಪ್ರಯಾಣಿಕರಿಗೆ ಆಗುವ ಅನಾನುಕೂಲವನ್ನು ತಪ್ಪಿಸಲು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.