ಈಜಿಪ್ಟ್ ಉಗ್ರ ದಾಳಿಗೆ 305 ಬಲಿ: ಶಂಕಿತರ ಮೇಲೆ ವಾಯುದಾಳಿ

ಕೈರೋ: ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಬಾಂಬ್ ಸ್ಫೋಟಿಸಿ ಹಲವರನ್ನು ಕೊಂದು, ಪ್ರಾಣ ಭೀತಿಯಿಂದ ಓಡಿ ಹೋಗುತ್ತಿದ್ದವರ ಮೇಲೆ ಗುಂಡು ಹಾರಿಸಿ ನರಮೇಧ ನಡೆಸಿದ್ದ ಭಯೋತ್ಪಾದಕರ ಮೇಲೆ ಈಜಿಪ್ಟ್ ವಾಯುಪಡೆ ಶನಿವಾರ ಪ್ರತಿದಾಳಿ ಆರಂಭಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉಗ್ರರ ಅಡಗುದಾಣಗಳ ಮೇಲೆ ದಾಳಿ ನಡೆಸಿ ಹಲವಾರು ಮಂದಿ ಭಯೋತ್ಪಾದಕರನ್ನು ಹತ್ಯೆ ಮಾಡಿದೆ.

ಅವರಿಗೆ ಸೇರಿದ ವಾಹನಗಳನ್ನೂ ನಾಶಪಡಿಸಿದೆ. ಈ ನಡುವೆ, ಈಜಿಪ್ಟ್ ಉತ್ತರ ಸಿನಾಯ್ ಪ್ರಾಂತ್ಯದಲ್ಲಿ ನಡೆದ ಈ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 235ರಿಂದ 305ಕ್ಕೆ ಏರಿಕೆಯಾಗಿದೆ.