2013 ರ ನಂತರ ಇದೇ ಮೊದಲ ಬಾರಿಗೆ NICE ಪ್ರಾಧಿಕಾರ ಜು.01 ರಿಂದ ಜಾರಿಯಾಗುವಂತೆ ಟೋಲ್ ದರವನ್ನು ಹೆಚ್ಚಿಸಲು ನಿರ್ಧರಿಸಿದೆ.

ಬೆಂಗಳೂರು (ಜು.06): 2013 ರ ನಂತರ ಇದೇ ಮೊದಲ ಬಾರಿಗೆ NICE ಪ್ರಾಧಿಕಾರ ಜು.01 ರಿಂದ ಜಾರಿಯಾಗುವಂತೆ ಟೋಲ್ ದರವನ್ನು ಹೆಚ್ಚಿಸಲು ನಿರ್ಧರಿಸಿದೆ.

ಈಗ ಟೋಲ್ ಗೇಟ್’ಗಳಲ್ಲಿ ಸಂಗ್ರಹಿಸುತ್ತಿರುವ ದರವು ಪರಿಷ್ಕರಣಾ ದರಕ್ಕಿಂತ ಕಡಿಮೆಯೇ ಇದೆ. ಮೂಲ ಸೌಕರ್ಯಗಳ ನಿರ್ವಹಣೆ ಮತ್ತು ಸಂರಕ್ಷಣೆಗಾಗಿ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಎನ್’ಐಸಿಇಎಲ್ ಹೇಳಿದೆ.

ರಾಜ್ಯ ಸರ್ಕಾರದೊಂದಿಗೆ ಮಾಡಿಕೊಂಡ ಒಪ್ಪಂದದ ನಿಬಂಧನೆಗಳ ಅನುಸಾರ ದರವನ್ನು ಪರಿಷ್ಕರಿಸಲಾಗುವುದು. ಟೋಲ್ ದರದ ಮೇಲೆ ಶೇ.10 ರಷ್ಟು ಪ್ರತಿಶತ ಪರಿಷ್ಖರಣೆ ಮಾಡಲು ನೈಸ್’ಗೆ ಒಪ್ಪಂದದಲ್ಲಿ ಅವಕಾಶ ನೀಡಿದೆ.

ಎಲ್ಲಿಂದ-ಎಲ್ಲಿಗೆ ವಾಹನ ಈಗಿನದರ ಮುಂಚಿನ ದರ

ಹೊಸೂರು ರಸ್ತೆ-ಬನ್ನೇರುಘಟ್ಟ ರಸ್ತೆ ಕಾರು ರೂ. 40 ರೂ. 33

ಬಸ್ ರೂ. 115 ರೂ. 90

ಬೈಕ್ ರೂ. 15 ರೂ.13

ಕನಕಪುರ ರಸ್ತೆ- ಕ್ಲೋವರ್ ಲೀಫ್ ಕಾರು ರೂ.20

ಬಸ್ ರೂ.55

ಬೈಕ್ ರೂ. 7

ಮೈಸೂರು ರಸ್ತೆ-ಮಾಗಡಿ ರಸ್ತೆ ಕಾರು ರೂ. 40

ಬಸ್ ರೂ. 115

ಬೈಕ್ ರೂ. 15

ಮಾಗಡಿ ರಸ್ತೆ-ಯುಮಕೂರು ರಸ್ತೆ ಕಾರು ರೂ. 35 

ಬಸ್ ರೂ. 90

ಬೈಕ್ ರೂ.10

ಲಿಂಕ್ ರಸ್ತೆ ಬಳಕೆದಾರರು ಕಾರು ರೂ.45

ಬಸ್ ರೂ. 110

ಬೈಕ್ ರೂ. 16

ಬಸ್’ಗಳ ಟೋಲ್ ದರ ಹೆಚ್ಚಾಗಿರುವುದರಿಂದ ಈ ಮಾರ್ಗಗಳಲ್ಲಿ ಓಡಾಡುವ ಬಿಎಂಟಿಸಿ ಬಸ್’ಗಳ ದರವು ಹೆಚ್ಚಾಗಲಿದೆ.