ಭಾರತದ ಆರ್ಥಿಕ ವ್ಯವಸ್ಥೆ ಚೀನಾ, ಅಮೆರಿಕಾಗಿಂತ ಉತ್ತಮ

TOI Budget 2018 special Indias economy is more globalised than China and US
Highlights

ಕಳೆದ 10 ವರ್ಷಗಳಲ್ಲಿ ನೆರೆಯ ದೇಶದ ಆಮದು-ರಫ್ತು ವಹಿವಾಟು ಶೇ.25 ರಷ್ಟು ಕಡಿಮೆಯಾಗಿದ್ದರೆ, ಭಾರತವು  ಗಮನಾರ್ಹ ಸಾಧನೆ ದಾಖಲಿಸಿದೆ.

ನವದೆಹಲಿ(ಜ.22): ಭಾರತದ ಆರ್ಥಿಕ ವ್ಯವಸ್ಥೆ ವಿಶ್ವದ ಪ್ರಮುಖ ಅಭಿವೃದ್ಧಿ ದೇಶಗಳಾದ ಅಮೆರಿಕಾ ಹಾಗೂ ಚೀನಾಗಿಂತ ಉತ್ತಮವಾಗಿದೆ 'ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಜಾಗತಿಕ ಮಟ್ಟದಲ್ಲಿ ಆಮದು ಹಾಗೂ ರಫ್ತು ಒಳಗೊಂಡ ವಹಿವಾಟು ಜಿಡಿಪಿಯಲ್ಲಿ ಅಮೆರಿಕಾ ಹಾಗೂ ಚೀನಾಗಿಂತ ಅತ್ಯುತ್ತಮ ಸ್ಥಿತಿಯಲ್ಲಿದೆ. 2016ರಲ್ಲಿ ಪ್ರಕಟಗೊಂಡಿರುವ ಅಂಕಿಅಂಶಗಳಿಂದ ಭಾರತದ ವಹಿವಾಟಿನ ಜಿಡಿಪಿ ಶೇ.40 ರಷ್ಟಿದ್ದರೆ, ಚೀನಾದ್ದು ಶೇ.37.07 ಹಾಗೂ ಅಮೆರಿಕಾ ದೇಶವು ಶೇ.29 ಮಾತ್ರ ಒಳಗೊಂಡಿದೆ.

ಕಳೆದ 10 ವರ್ಷಗಳಲ್ಲಿ ನೆರೆಯ ದೇಶದ ಆಮದು-ರಫ್ತು ವಹಿವಾಟು ಶೇ.25 ರಷ್ಟು ಕಡಿಮೆಯಾಗಿದ್ದರೆ, ಭಾರತವು  ಗಮನಾರ್ಹ ಸಾಧನೆ ದಾಖಲಿಸಿದೆ. ಅಮೆರಿಕಾವು 1990ರಿಂದ ಹೆಚ್ಚು ಪ್ರಗತಿಯನ್ನು ಕಂಡಿಲ್ಲ. ಇತ್ತೀಚಿಗೆ ವಿಶ್ವ ಹಣಕಾಸು ಸಂಸ್ಥೆ ಭಾರತದ ಆರ್ಥಿಕತೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿತ್ತು.  

loader