ದೇಶವೇ ಎದುರು ನೋಡುತ್ತಿರುವ ಗುಜರಾತ್​ ಎರಡನೇ ಹಂತದ ಚುನಾವಣೆ  ಇವತ್ತು ನಡೆಯುತ್ತಿದೆ. ಮೊದಲ ಹಂತದ ಚುನಾವಣೆ ಮುಕ್ತಾಯವಾಗಿದ್ದು , ಇವತ್ತಿನ ಚುನಾವಣೆ ಬಿಜೆಪಿ , ಕಾಂಗ್ರೆಸ್​ ಪಕ್ಷ ಪ್ರತಿಷ್ಠೆಯ ಚುನಾವಣೆ . 

ನವದೆಹಲಿ (ಡಿ.14): ದೇಶವೇ ಎದುರು ನೋಡುತ್ತಿರುವ ಗುಜರಾತ್​ ಎರಡನೇ ಹಂತದ ಚುನಾವಣೆ ಇವತ್ತು ನಡೆಯುತ್ತಿದೆ. ಮೊದಲ ಹಂತದ ಚುನಾವಣೆ ಮುಕ್ತಾಯವಾಗಿದ್ದು , ಇವತ್ತಿನ ಚುನಾವಣೆ ಬಿಜೆಪಿ , ಕಾಂಗ್ರೆಸ್​ ಪಕ್ಷ ಪ್ರತಿಷ್ಠೆಯ ಚುನಾವಣೆ . 

ತೀವ್ರ ಕುತೂಹಲ ಕೆರಳಿಸಿರುವ ಗುಜರಾತ್​ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಚುನಾವಣೆ ನಡೆಯುತ್ತಿದೆ. ಇಲ್ಲಿ ಗೆದ್ದವರು, ಮುಂದೆ ದೇಶದಲ್ಲೇ ಜಯಭೇರಿ ಬಾರಿಸ್ತಾರೆ ಅನ್ನೋ ಮಾತು ದೇಶಾದ್ಯಂತ ರಿಂಗಣಿಸ್ತಿದೆ. ಈಗಾಗಲೇ 89 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಮುಗಿದಿದ್ದು, ಶೇ.68ರಷ್ಟು ಮಂದಿ ಮತ ಚಲಾಯಿಸಿದ್ದಾರೆ.

182 ವಿಧಾನಸಭಾ ಕ್ಷೇತ್ರಗಳ ಪೈಕಿ ಈಗಾಗಲೇ 89 ಕ್ಷೇತ್ರಗಳಲ್ಲಿ ಮತದಾರ ಪ್ರಭು ಅಭ್ಯರ್ಥಿಗಳ ಹಣೆಬರಹವನ್ನು ಬರೆದಿದ್ದಾಗಿದೆ. ಇನ್ನುಳಿದ 93 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು , ಇವತ್ತು ಎರಡನೇ ಹಂತದ ಚುನಾವಣೆ ಪ್ರಕ್ರಿಯೆಯಲ್ಲಿದೆ. ಡಿಸೆಂಬರ್​ 18ರಂದು ಎರಡೂ ಹಂತಗಳ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಇನ್ನು ಗುಜರಾತ್​ನಲ್ಲಿ ಕಳೆದ ಎರಡು ಚುನಾವಣೆಗಳ ಫಲಿತಾಂಶವನ್ನು ನೋಡೋದಾದರೆ,

ಒಟ್ಟು ಕ್ಷೇತ್ರಗಳು 182

ಬಿಜೆಪಿ 117 ಕ್ಷೇತ್ರಗಳಲ್ಲಿ ಗೆಲುವು

ಕಾಂಗ್ರೆಸ್ 59 ಕ್ಷೇತ್ರಗಳಲ್ಲಿ ಜಯ 

ಇತರೆ 6 ಕ್ಷೇತ್ರಗಳಲ್ಲಿ ಜಯಭೇರಿ

2012ರಲ್ಲಿ ಫಲಿತಾಂಶ 

ಒಟ್ಟು ಕ್ಷೇತ್ರಗಳು 182

ಬಿಜೆಪಿ 115 ಕ್ಷೇತ್ರಗಳಲ್ಲಿ ಜಯ

ಕಾಂಗ್ರೆಸ್ 61 ಕ್ಷೇತ್ರಗಳಲ್ಲಿ ಜಯ 

ಇತರೆ 6 ಕ್ಷೇತ್ರಗಳಲ್ಲಿ ಜಯಭೇರಿ

ಈ ಬಾರಿಯೂ ಗುಜರಾತ್​ ಚುನಾವಣಾ ಪೂರ್ವ ಸಮೀಕ್ಷೆಯೂ ಹೊರಬಿದ್ದಿದ್ದು ಮೋದಿ ನಾಡದಲ್ಲಿ ಮತ್ತೆ ಕಮಲ ಅರಳೋದು ಸ್ಪಷ್ಟವಾಗಿದೆ. ಹಾಗಾದ್ರೆ ಯಾವ್ಯಾವ ಸಮೀಕ್ಷೆ ಏನ್​ ಏನ್​ ಹೇಳಿದೆ ಅನ್ನೋದನ್ನು ನೋಡೋದಾದರೆ.

ರಿಪಬ್ಲಿಕ್ ಟಿವಿ ಸಮೀಕ್ಷೆ

ಪಕ್ಷ ಸ್ಥಾನಗಳು

ಬಿಜೆಪಿ 110-125

ಕಾಂಗ್ರೆಸ್ 53-68​

ಇತರೆ 1-4

ಟೈಮ್ಸ್​ ನೌ-ವಿಎಂ​ಆರ್​ ಚುನಾವಣಾ ಪೂರ್ವ ಸಮೀಕ್ಷೆ

ಪಕ್ಷ ಸ್ಥಾನಗಳು

ಬಿಜೆಪಿ 118-134

ಕಾಂಗ್ರೆಸ್ 49-61​

ಇತರರು 0-3

ಒಟ್ಟಿನಲ್ಲಿ ಗುಜರಾತ್ ಚುನಾವಣೆ ಭಾರೀ ಕುತೂಹಲ ಕೆರಳಿಸಿದ್ದು , ಮೋದಿ ಅಲೆ ಮ್ಯಾಜಿಕ್ ಮಾಡುತ್ತಾ.. ಇಲ್ಲ ರಾಹುಲ್ , ಹಾರ್ದಿಕ್ ಪಟೇಲ್ , ಮೇವಾನಿ ಭಾಷಣ ವರ್ಕ್​ಔಟ್​ ಆಗುತ್ತಾ ಅನ್ನೋದು ಡಿಸೆಂಬರ್​ 18ರಂದು ನಡೆಯುವ ಮತ ಎಣಿಕೆಯಲ್ಲಿ ನಿರ್ಧಾರ ವಾಗಲಿದೆ.