ಇಂದು ನಲಪಾಡ್ ಜಾಮೀನು ಅರ್ಜಿ ತೀರ್ಪು; ತಂದೆಗೆ ಕ್ಲಾಸ್ ತೆಗೆದುಕೊಂಡ ಮಗ..!

First Published 2, Mar 2018, 11:27 AM IST
Today Nalapad Bail Verdict
Highlights

ಇದಕ್ಕೂ ಮೊದಲು ಜೈಲಿನಿಂದಲೇ ತಂದೆ ಹ್ಯಾರಿಸ್'ಗೆ ಕರೆ ಮಾಡಿದ್ದ ನಲಪಾಡ್ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾನೆ ಎನ್ನಲಾಗಿದೆ. ನಿನ್ನಿಂದ ಆಗುತ್ತೋ ಇಲ್ವೋ ಹೇಳು. ಹೊರಗಡೆ ನಮ್ಮ ಹುಡುಗರು ಇದ್ದಾರೆ, ಅವರ ಮೂಲಕ ನಾನು ಬೇಲ್ ಮಾಡಿಸಿಕೊಳ್ಳುತ್ತೇನೆ ಎಂದು ತಂದೆ ಮೇಲೆ ಅರಚಾಡಿದ್ದಾನೆ ಎನ್ನಲಾಗಿದೆ.

ಬೆಂಗಳೂರು(ಮಾ.02): ಉಧ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿ ಜೈಲು ಪಾಲಾಗಿರುವ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಜಾಮೀನು ಅರ್ಜಿಯ ತೀರ್ಪು ಇಂದು ಹೊರಬೀಳಲಿದ್ದು, ಪುಂಡಾಟ ಮಾಡಿದ ನಲಪಾಡ್'ಗೆ ಮತ್ತೆ ಜೈಲಾ ಇಲ್ಲವೇ ಬೇಲಾ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

ಜಾಮೀನು ವಿಚಾರಣೆಯ ವಾದ-ಪ್ರತಿವಾದ ಆಲಿಸಿರುವ 63ನೇ ಸೆಷನ್ಸ್ ಕೋರ್ಟ್'ನ ನ್ಯಾಯಾಧೀಶರು ಇಂದು ಆದೇಶ ಪ್ರಕಟಿಸಲಿದ್ದಾರೆ. ನ್ಯಾಯದೀಶ ಪರಮೇಶ್ವರ ಪ್ರಸನ್ನ ಅವರು ಜಾಮೀನು ಕುರಿತು ತೀರ್ಪು ನೀಡಲಿದ್ದಾರೆ. ಕಳೆದ 10 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ನಲಪಾಡ್ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಇದಕ್ಕೂ ಮೊದಲು ಜೈಲಿನಿಂದಲೇ ತಂದೆ ಹ್ಯಾರಿಸ್'ಗೆ ಕರೆ ಮಾಡಿದ್ದ ನಲಪಾಡ್ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾನೆ ಎನ್ನಲಾಗಿದೆ. ನಿನ್ನಿಂದ ಆಗುತ್ತೋ ಇಲ್ವೋ ಹೇಳು. ಹೊರಗಡೆ ನಮ್ಮ ಹುಡುಗರು ಇದ್ದಾರೆ, ಅವರ ಮೂಲಕ ನಾನು ಬೇಲ್ ಮಾಡಿಸಿಕೊಳ್ಳುತ್ತೇನೆ ಎಂದು ತಂದೆ ಮೇಲೆ ಅರಚಾಡಿದ್ದಾನೆ ಎನ್ನಲಾಗಿದೆ. ಜೈಲಿನಿಂದ ಫೊನ್ ಮಾಡಿ ಉರ್ದು ಭಾಷೆಯಲ್ಲೇ ತಂದೆ ಹ್ಯಾರಿಸ್ ಮೇಲೆ ಎಗರಾಡಿರುವ ನಲಪಾಡ್, ಕ್ಯಾ ಕರ್ತಾ ತು, ಇತ್ನಾ ದಿನ್, ದೇಖ್ನೆ ಕೋ ನಹೀ ಆಯ ತು(ಇಷ್ಟು ದಿನ ಏನ್ ಮಾಡ್ತಿದ್ದೀಯ ನೀನು..? ಇನ್ನೂ ನನ್ನ ನೋಡೋಕೆ ಬಂದಿಲ್ಲ), ಬಾಹರ್ ಆಯೇ ತೋ, ದಿಕಾ ತೂ(ನಾನು ಹೊರಗೆ ಬಂದ ಮೇಲೆ ನೋಡ್ಕೋತೇನೆ) ಎಂದು ತಂದೆಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾನೆ.

loader