ಮೋದಿ ಪಡೆದುಕೊಂಡ 50 ದಿನಗಳ ಕಾಲಾವಕಾಶಕ್ಕೆ ಇಂದೇ ಡೆಡ್ ಲೈನ್. ಇಂದು ಸಂಜೆಯೊಳಗೆ ಹಳೆಯ ನೋಟು ಬ್ಯಾಂಕ್ ಸೇರದಿದ್ದರೆ, ಉಳಿದಿರುವುದು ಇನ್ನೊಂದೇ ಆಯ್ಕೆ ಅದು ಆರ್ಬಿಐ.
ಪ್ರಧಾನಿ ಮೋದಿ ದೇಶದ ಪರಿಸ್ಥಿತಿಯನ್ನ 50 ದಿನಗಳಲ್ಲಿ ಬದಲಾಯಿಸ್ತೀನಿ ಎಂದಾಗ ಇಡೀ ದೇಶವೇ ಅವರಿಗೆ ಬೆಂಬಲವಾಗಿ ನಿಂತಿತ್ತು. ಅದೇ ರೀತಿ ಪ್ರಧಾನಿಗಳು ನೀಡಿದ 50 ದಿನಗಳ ಗಡುವು ಇಂದಿಗೆ ಮುಕ್ತಾಯವಾಗ್ತಿದೆ. ಹಾಗಾದ್ರೆ ದೇಶದ ಪರಿಸ್ಥಿತಿ ಬದಲಾಯ್ತಾ? ನೋಟ್ ಬ್ಯಾನ್ ಎಫೆಕ್ಟ್ ನಿಂದ ಏನೆಲ್ಲಾ ಬದಲಾವಣೆಯಾಯ್ತು..? ಪ್ರಧಾನಿಯವರ ಮುಂದಿನ ನಡೆ ಏನು? ಈ ಬಗ್ಗೆ ಇಲ್ಲಿದೆ ಡೀಟೈಲ್ಸ್.
ಮೋದಿ ಪಡೆದುಕೊಂಡ 50 ದಿನಗಳ ಕಾಲಾವಕಾಶಕ್ಕೆ ಇಂದೇ ಡೆಡ್ ಲೈನ್. ಇಂದು ಸಂಜೆಯೊಳಗೆ ಹಳೆಯ ನೋಟು ಬ್ಯಾಂಕ್ ಸೇರದಿದ್ದರೆ, ಉಳಿದಿರುವುದು ಇನ್ನೊಂದೇ ಆಯ್ಕೆ ಅದು ಆರ್ಬಿಐ.
ತೆರಿಗೆ ಸಂಗ್ರಹ ಕುಸಿದಿಲ್ಲ.. ಬದಲಿಗೆ ಹೆಚ್ಚಾಗಿದೆ..!
ಜನರಿಗೆ ಬೇಕಿರುವುದು ಇದೇ ಸಮಾಧಾನ. ಇಂದು ಹಳೆಯ 500, 1000 ರೂ. ನೋಟುಗಳನ್ನು ಬ್ಯಾಂಕುಗಳಿಗೆ ಹಾಕಲು ಕೊನೆಯ ದಿನ.. ಇಂದು ಕಳೆದ ಮೇಲೆ, ನಾಳೆ ಶನಿವಾರ ರಾತ್ರಿ 7.30ಕ್ಕೆ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅವರಿಂದ ಮತ್ತಿನ್ಯಾವ ಆಶ್ವಾಸನೆ ಸಿಗಲಿದೆ ಇದಕ್ಕೆ ರಾತ್ರಿಯ ಅವರ ಭಾಷಣವನ್ನೇ ಕೇಳಬೇಕು.
ಇನ್ನೊಂದು ಕಡೆ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ಧಾರೆ. ಪ್ರಧಾನಿ ಜನಪ್ರಿಯತೆ ಸಹಿಸಲಾಗದೇ ಕಾಂಗ್ರೆಸ್ ಹತಾಶಗೊಂಡಿದೆ ಎಂದಿದ್ದಾರೆ. ಈಗ ಸರ್ಕಾರದ ಮುಂದೆ ಎರಡು ಸವಾಲಿದೆ. ಒಂದು ಎಟಿಎಂ ಮತ್ತು ಬ್ಯಾಂಕುಗಳಲ್ಲಿ ಹಣದ ಕೊರತೆ ಎದುರಾಗದಂತೆ ನೋಡಿಕೊಳ್ಳುವುದು. ಈ ಸವಾಲನ್ನ ಗೆದ್ದರೆ, ಪ್ರತಿಪಕ್ಷಗಳ ಬಾಯಿ ತಂತಾನೇ ಮುಚ್ಚಿಕೊಳ್ಳುತ್ತೆ. ಅಲ್ಲಿಗೆ ಎರಡನೇ ಸವಾಲೂ ಗೆದ್ದಂತೆ. ಎಲ್ಲದಕ್ಕೂ ಮೊದಲು ಕೇಂದ್ರ ಸರ್ಕಾರ ಜನರಿಗೆ ಹಣ ತಲುಪಿಸಿ ಸವಾಲು ಗೆಲ್ಲಬೇಕು. ಆದರೆ, ಈಗಲೂ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.
ಜನ ಕಾಯುತ್ತಿರುವುದು ಈ ಸಮಾಧಾನಗಳಿಗೆ ಮಾತ್ರ.
