ಗಾಂಧಿನಗರ(ಸೆ.17): ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು 66ನೇ ಹುಟ್ಟು ಹಬ್ಬ ಸಂಭ್ರಮ.. ಈಗಾಗಲೇ ಪ್ರಧಾನಿ ಗುಜರಾತ್​ನ ಗಾಂಧಿನಗರಕ್ಕೆ ತೆರಳಿ ತಾಯಿ ಹೀರಾಬೆನ್​ರವರ ಆಶೀರ್ವಾದ ಪಡೆದಿದ್ದಾರೆ. 

ಪ್ರಧಾನಿಯವರು ನವಸಾರಿ ಜಿಲ್ಲೆಯ ಬುಡಕಟ್ಟು ಅಂಗವಿಕಲ ಮಕ್ಕಳೊಂದಿಗೆ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ. ಬುಡಕಟ್ಟು ಜಿಲ್ಲೆಯಾದ ದಾಹೋದ್‌ಗೆ ತೆರಳಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. 

ಸೂರತ್ ಮೂಲದ ಬೇಕರಿಯೊಂದರ ಮಾಲೀಕರು, ಸ್ವಯಂ ಸೇವಾ ಸಂಸ್ಥೆಯೊಂದರ ಜೊತೆಗೂಡಿ ಪಿರಮಿಡ್ ಆಕಾರದ ಬೃಹತ್ ಕೇಕ್ ತಯಾರಿಸಿದ್ದಾರೆ. 

ಸೂರತ್ ನ ‘ಅತುಲ್ ಬೇಕರಿ’ ಸ್ವಯಂ ಸೇವಾ ಸಂಸ್ಥೆ ‘ಶಕ್ತಿ ಫೌಂಡೇಶನ್’ ಜೊತೆಗೂಡಿ ಈ ಕೇಕ್ ತಯಾರಿಸಿದ್ದು, ಮಹಿಳಾ ಸಬಲೀಕರಣಕ್ಕಾಗಿ 5 ಸಾವಿರ ಮಹಿಳೆಯರ ಸಮ್ಮುಖದಲ್ಲಿ ಮೋದಿ ಕೇಕ್ ಕತ್ತರಿಸಲಿದ್ದಾರೆ. ಈ ಮೂಲಕ ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.