ಸೌತ್​​ ವೆಸ್ಟ್​​ ಮೈನಿಂಗ್​​ ಕಂಪನಿಗೆ ಪರವಾನಗಿ ವಿಚಾರದಲ್ಲಿ ಭಾರೀ ಅವ್ಯವಹಾರ ನಡೆದಿದ್ದು ತನಿಖೆ ನಡೆಸಲು ಆದೇಶಿಸುವಂತೆ ಸಮಾಜ ಪರಿವರ್ತನಾ ಸಮಿತಿ ಸುಪ್ರೀಂಕೋರ್ಟ್​​ ಮೆಟ್ಟಿಲೇರಿತ್ತು. ದಾಖಲೆಗಳ ಪರಿಶೀಲನೆ ನಡೆಸಿದ್ದ ಸುಪ್ರೀಂ ಕೋರ್ಟ್​​​ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿತ್ತು.  ಬಿಎಸ್​​ವೈ, ರಾಘವೇಂದ್ರ, ವಿಜಯೇಂದ್ರ, ಅಳಿಯ ಸೋಹನ್​ ಕುಮಾರ್​​, ಪ್ರೇರಣ ಟ್ರಸ್ಟ್​​ನ ಇಬ್ಬರು ಸಿಬ್ಬಂದಿ, ಸೌತ್​​ ವೆಸ್ಟ್​​ ಮೈನಿಂಗ್​​ ಸಿಬ್ಬಂದಿ ಸೇರಿ 13 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು.ಈ  ಸಂಬಂಧ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ ಇಂದಿಗೆ ತೀರ್ಪು ಕಾಯ್ದಿರಿಸಿದೆ.

ಬೆಂಗಳೂರು(ಅ.26): ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತವರ ಕುಟುಂಬಕ್ಕೆ ಇಂದು ನಿರ್ಣಾಯಕ ದಿನ. ಸೌತ್​​ ವೆಸ್ಟ್​​ ಮೈನಿಂಗ್​​​ ಗಣಿ ಕಂಪನಿಗೆ ಪರವಾನಗಿ ನೀಡಿದ್ದಕ್ಕೆ ಪ್ರೇರಣಾ ಟ್ರಸ್ಟ್ ಮೂಲಕ ಕಿಕ್​​ ಬ್ಯಾಕ್​ ಆರೋಪ ಸುತ್ತಿಕೊಂಡ ಆರೋಪವಿದೆ. ಕೋರ್ಟ್​​ ಒಂದು ವೇಳೆ ಆರೋಪ ಸಾಭೀತು ಎಂದಲ್ಲಿ ಇಡೀ ಕುಟುಂಬವೇ ಜೈಲುಪಾಲಾಗುವ ಸಾಧ್ಯತೆಯಿದೆ.

ಬಿಜೆಪಿಯ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಮತ್ತೊಂದು ಅಗ್ನಿ ಪರೀಕ್ಷೆ ಶುರುವಾಗಿದೆ. ಸೌತ್ ವೆಸ್ಟ್ ಮೈನಿಂಗ್ ಕಂಪನಿಯಿಂದ ಕಿಕ್ ಬ್ಯಾಕ್ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ 13 ಮಂದಿ ಆರೋಪಿಗಳ ಪಟ್ಟಿಯಲ್ಲಿ ಬಿಎಸ್​. ಯಡಿಯೂರಪ್ಪ ಮಾತ್ರವಲ್ಲದೇ ಅವರ ಪುತ್ರರಾದ ರಾಘವೇಂದ್ರ, ವಿಜಯೇಂದ್ರ ಹಾಗೂ ಅಳಿಯ ಸೋಹನ್​​ ಕುಮಾರ್​ ಅವರಿಗೂ ಇಂದು ನಿರ್ಣಯಕ ದಿನ.

ಉಪ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯಡಿಯೂರಪ್ಪ ಜಿಂದಾಲ್ ಗ್ರೂಪ್‌ನ ಸೌತವೆಸ್ಟ್ ಮೈನಿಂಗ್ ಕಂಪನಿಗೆ ಗಣಿ ಪರವಾನಗಿ ಕೊಡಿಸಿದ್ದರು. ಇದಕ್ಕೆ ಪ್ರತಿಯಾಗಿ ಸೌತವೆಸ್ಟ್ ಕಂಪನಿಯು ಯಡಿಯೂರಪ್ಪ ಪುತ್ರರ ಒಡೆತನದ ಪ್ರೇರಣಾ ಟ್ರಸ್ಟ್‌ಗೆ ದೇಣಿಗೆ ನೀಡಿರುವ ಆರೋಪ. 2006ರ ಮಾರ್ಚ್ ನಂತರ 2011ರವರೆಗೆ ಸುಮಾರು 20 ಕೋಟಿ ರೂಪಾಯಿ ಸಂದಾಯ ಮಾಡಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದ್ರಲ್ಲಿ ವಿಜಯೇಂದ್ರ, ರಾಘವೇಂದ್ರ, ಸೋಹನ್ ಕುಮಾರ್ ಶಾಮೀಲಾಗಿರುವ ಆರೋಪ ಕೇಳಿಬಂದಿತ್ತು.

ಸುಪ್ರೀಂಕೋರ್ಟ್​​ ಮೆಟ್ಟಿಲೇರಿದ್ದ ಸಮಾಜ ಪರಿವರ್ತನಾ ಸಮಿತಿ

ಸೌತ್​​ ವೆಸ್ಟ್​​ ಮೈನಿಂಗ್​​ ಕಂಪನಿಗೆ ಪರವಾನಗಿ ವಿಚಾರದಲ್ಲಿ ಭಾರೀ ಅವ್ಯವಹಾರ ನಡೆದಿದ್ದು ತನಿಖೆ ನಡೆಸಲು ಆದೇಶಿಸುವಂತೆ ಸಮಾಜ ಪರಿವರ್ತನಾ ಸಮಿತಿ ಸುಪ್ರೀಂಕೋರ್ಟ್​​ ಮೆಟ್ಟಿಲೇರಿತ್ತು. ದಾಖಲೆಗಳ ಪರಿಶೀಲನೆ ನಡೆಸಿದ್ದ ಸುಪ್ರೀಂ ಕೋರ್ಟ್​​​ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿತ್ತು. ಬಿಎಸ್​​ವೈ, ರಾಘವೇಂದ್ರ, ವಿಜಯೇಂದ್ರ, ಅಳಿಯ ಸೋಹನ್​ ಕುಮಾರ್​​, ಪ್ರೇರಣ ಟ್ರಸ್ಟ್​​ನ ಇಬ್ಬರು ಸಿಬ್ಬಂದಿ, ಸೌತ್​​ ವೆಸ್ಟ್​​ ಮೈನಿಂಗ್​​ ಸಿಬ್ಬಂದಿ ಸೇರಿ 13 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು.ಈ ಸಂಬಂಧ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ ಇಂದಿಗೆ ತೀರ್ಪು ಕಾಯ್ದಿರಿಸಿದೆ.

ಬಿಎಸ್​ವೈ ಪರ ಘಟಾನುಘಟಿ ವಕೀಲರಿಂದ ವಾದ ಮಂಡನೆ

ಈ ಪ್ರಕರಣದಲ್ಲಿಯೂ ಕ್ಲೀನ್​ ಚಿಟ್​​ ಪಡೆಯಲು ಬಿಎಸ್​ವೈ ಘಟಾನುಘಟಿ ವಕೀಲರ ಮೂಲಕ ವಾದ ಮಂಡಿಸಿದ್ದಾರೆ. ಈ ಪ್ರಕರಣದಲ್ಲಿ ಹೇಳಿಕೆ ದಾಖಲಿಸಲು 2016 ಮೇ 2 ರಂದು ಕೋರ್ಟ್​​ಗೆ ಹಾಜಾರಾಗಿದ್ದ ವೇಳೆ ನ್ಯಾಯಾಧೀಶರು ಕೇಳಿದ ಒಟ್ಟು 473 ಪ್ರಶ್ನೆಗಳಿಗೂ ಉತ್ತರಿಸಿದ ಯಡಿಯೂರಪ್ಪ ಕಣ್ಣೀರಿಟ್ಟಿದ್ದರು. ಅಲ್ಲದೆ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿಕೆ ನೀಡಿದ್ದರು. ಮತ್ತೊಂದೆಡೆ ಸಿಬಿಐ ಸೂಕ್ತ ದಾಖಲೆಗಳನ್ನು ಕಲೆ ಹಾಕಿ 13 ಮಂದಿ ಆರೋಪಿಗಳು ಎಂದು ವಾದಿಸಿದೆ. ವಾದ ಪ್ರತಿವಾದ ಆಲಿಸಿರುವ ಕೋರ್ಟ್​ ಯಾವ ತೀರ್ಪು ನೀಡುತ್ತದೆ ಎನ್ನುವುದು ಸದ್ಯದ ಕುತೂಹಲ. ಒಂದು ವೇಳೆ ಯಡಿಯೂರಪ್ಪ ವಿರುದ್ಧ ತೀರ್ಪು ಬಂದಲ್ಲಿ ಮಕ್ಕಳು ಹಾಗೂ ಅಳಿಯ ಜೊತೆ ಜೈಲು ಕಂಬಿ ಎಣಿಸಬೇಕಿದೆ.