ನಮಸ್ಕಾರ ಓದುಗರೇ, ನಿಮ್ಮ ರಾಶಿ ಫಲಾಫಲಗಳು ಹೀಗಿವೆ

First Published 23, Mar 2018, 7:26 AM IST
Today Horoscope
Highlights

ಮೇಷ : ಲಾಭ ಸ್ಥಾನಕ್ಕೆ ಗುರು ದೃಷ್ಟಿ ಯಿರುವುದರಿಂದ ವ್ಯಾಪಾರಿಗಳಿಗೆ ಶುಭ ದಿನ, ಆರೋಗ್ಯ ಸಮಸ್ಯೆಯೂ ಕಾಡಲಿದೆ ಜಾಗರೂಕರಾಗಿರಿ

ಮೇಷ : ಲಾಭ ಸ್ಥಾನಕ್ಕೆ ಗುರು ದೃಷ್ಟಿ ಯಿರುವುದರಿಂದ ವ್ಯಾಪಾರಿಗಳಿಗೆ ಶುಭ ದಿನ, ಆರೋಗ್ಯ ಸಮಸ್ಯೆಯೂ ಕಾಡಲಿದೆ ಜಾಗರೂಕರಾಗಿರಿ

ವೃಷಭ : ಸುಖಾಧಿಪತಿ ಲಾಭದಲ್ಲಿರುವುದರಿಂದ  ಉತ್ತಮ ದಿನ, ಆದರೆ ಶನಿ-ಕುಜರ ಯುತಿಯ ಸಂಕಷ್ಟ ಇದ್ದೇ ಇರಲಿದೆ, ಎಳ್ಳು ದಾನ ಮಾಡಿ 

ಮಿಥುನ  : ವ್ಯಯಾಧಿಪನು ದಶಮದಲ್ಲಿದ್ದಾನೆ ಉದ್ಯೋಗ ನಷ್ಟವಾಗಬಹುದು, ಅಥವಾ ಉದ್ಯೋಗದಲ್ಲಿ ಕಿರಿಕಿರಿಯೂ ಆಗಬಹುದು, ವಿಷ್ಣು ಸ್ಮರಣೆ ಮಾಡಿ

ಕಟಕ  : ಪಂಚಮಾಧಿಪತಿಯು ಷಷ್ಠ ಸ್ಥಾನದಲ್ಲಿರುವುದರಿಂದ ಮನೋವ್ಯಾಧಿ, ಚಂದ್ರನ ಆರಾಧನೆ ಮಾಡಿ

ಸಿಂಹ  : ವಕೀಲರಿಗೆ ಹಿನ್ನಡೆ, ಅಂದುಕೊಂಡ ಕಾರ್ಯಗಳು ಸಾಗುವುದಿಲ್ಲ, ಧರ್ಮಸ್ಥಳ ಮಂಜುನಾಥ ದರ್ಶನ ಮಾಡಿ

ಕನ್ಯಾ  : ಸಾಮಾನ್ಯದಿನವಾಗಿರಲಿದೆ, ಮನೆಯಲ್ಲಿ ಸಂಭ್ರಮದ ವಾತಾವರಣ, ಮಕ್ಕಳಲ್ಲಿ ಸಣ್ಣಪುಟ್ಟ ಕಲಹ, ಬುಧನ ಆರಾಧನೆ ಮಾಡಿ

ತುಲಾ  : ಗಂಡ-ಹೆಂಡಿರಲ್ಲಿ ಸಾಮರಸ್ಯ, ಒಡೆದು ಹೋದ ಸಂಬಂಧ ಕುದುರುವುದು, ಲಕ್ಷ್ಮೀನಾರಾಯಣ ದರ್ಶನ ಮಾಡಿ

ವೃಶ್ಚಿಕ : ಧನಾಧಿಪತಿ ವ್ಯಯದಲ್ಲಿದ್ದು, ಧನ ಸ್ಥಾನದಲ್ಲಿ ಶನಿ-ಕುಜರ ಯುತಿ ಮನೆಯಲ್ಲಿ ಹಣ ಕಳವು, ಧನವ್ಯಯ, ಶನಿಯ ಶಾಂತಿ ಮಾಡಿಸಿ

ಧನಸ್ಸು :  ಧನಾಗಮನ, ಆರೋಗ್ಯದಲ್ಲಿ ಏರು ಪೇರು, ಮಾನಸಿಕ ಚಿಂತೆ, ದಕ್ಷಿಣಾಮೂರ್ತಿ ದರ್ಶನ ಮಾಡಿ

ಮಕರ  : ಸಾಡೇಸಾತ್ ಶುರುವಾಗಿದೆ, ಆದರೆ ಉದ್ಯೋಗಕ್ಕೇನೂ ತೊಂದರೆ  ಇಲ್ಲ, ಶಿವನಿಗೆ ಬಿಲ್ವಪತ್ರೆ ಸಮರ್ಪಿಸಿ

ಕುಂಭ : ಭಾಗ್ಯದ ಗುರುವಿನಿಂದ ಭಾಗ್ಯೋದಯ, ಧನಾಗಮನ, ಆರೋಗ್ಯದಲ್ಲಿ ಕೊಂಚ ಏರುಪೇರು

ಮೀನ :  ಜಗದ್ಗುರುಗಳ ದರ್ಶನ ಮಾಡಿ, ಗುರು ಸ್ಮರಣೆಯಿಂದ ಸರ್ವ ಕಷ್ಟ ನಿವಾರಣೆ

loader