'ಮಹಾ' ರಾಜಕೀಯದಲ್ಲಿ ಬಿಗ್ ಟ್ವಿಸ್ಟ್: ಕಾಂಗ್ರೆಸ್‌ನಿಂದ ಶಿವಸೇನೆಗೆ ಬಿಗ್ ಆಫರ್!
'ಮಹಾ' ರಾಜಕೀಯದಲ್ಲಿ ಬಿಗ್ ಟ್ವಿಸ್ಟ್: ಕಾಂಗ್ರೆಸ್‌ನಿಂದ ಶಿವಸೇನೆಗೆ ಬಿಗ್ ಆಫರ್!| ಬಿಜೆಪಿ ತೊರೆದರೆ ಜತೆ ಕೈಜೋಡಿಸಲು ಸಿದ್ಧ: ಕಾಂಗ್ರೆಸ್| ಸಿಎಂ ಪಟ್ಟಬಿಟ್ಟುಕೊಡಲೂ ಸಜ್ಜಾಗಿದೆ ಪಕ್ಷ?| ಶಿವಸೇನೆ+ಕಾಂಗ್ರೆಸ್+ಎನ್‌ಸಿಪಿಗೂ ಇದೆ ಬಹುಮತ
ಮುಂಬೈ[ಅ.26]: ಮುಖ್ಯಮಂತ್ರಿ ಹುದ್ದೆಗಾಗಿ ಮಹಾರಾಷ್ಟ್ರದ ಬಿಜೆಪಿ- ಶಿವಸೇನೆ ನಡುವೆ ಹಗ್ಗಜಗ್ಗಾಟ ನಡೆಯುತ್ತಿರುವಾಗಲೇ, ಶಿವಸೇನೆಯನ್ನು ಸೆಳೆಯಲು ಕಾಂಗ್ರೆಸ್ ಬಹಿರಂಗ ಆಹ್ವಾನ ನೀಡಿದೆ. ಒಂದು ವೇಳೆ, ಶಿವಸೇನೆ ಏನಾದರೂ ಬಿಜೆಪಿ ಸಂಗ ತೊರೆಯುವ ಧೈರ್ಯ ತೋರಿದರೆ, ಉದ್ಧವ್ ಠಾಕ್ರೆ ನೇತೃತ್ವದ ಪಕ್ಷದ ಜತೆ ಕೈಜೋಡಿಸಲು ತಾವು ಸಿದ್ಧವಾಗಿದ್ದೇವೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಬಾಳಾಸಾಹೇಬ್ ಥೋರಟ್ ಹೇಳಿದ್ದಾರೆ.
ಈ ಕುರಿತು ಶಿವಸೇನೆ ಪ್ರಸ್ತಾವ ಕಳಿಸಿದರೆ, ದೆಹಲಿಯಲ್ಲಿರುವ ಪಕ್ಷದ ನಾಯಕರ ಜತೆ ಚರ್ಚೆ ನಡೆಸುತ್ತೇನೆ. ಇದಕ್ಕೆ ಮುಕ್ತವಾಗಿದ್ದೇನೆ ಎಂದು ಖಾಸಗಿ ವಾಹಿನಿಯೊಂದಕ್ಕೆ ಅವರು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಬಿಜೆಪಿಯನ್ನು ತೊರೆದು ಬಂದರೆ, ಶಿವಸೇನೆಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಲೂ ಕಾಂಗ್ರೆಸ್ ಸಿದ್ಧವಾಗಿದೆ.
‘ಮಹಾ ಜನಾದೇಶ’ ಇಲ್ಲ: ಬಿಜೆಪಿಗೆ ಶಿವಸೇನೆ ಚಾಟಿ!
ಇದೇ ವೇಳೆ, ಬಾರಾಮತಿಗೆ ತೆರಳಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಜತೆಗೆ ಥೋರಟ್ ಅವರು ಭವಿಷ್ಯದ ರಾಜಕೀಯ ನಡೆಗಳ ಕುರಿತು ಮಾತುಕತೆ ನಡೆಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಒಂದು ಪಕ್ಷಕ್ಕೆ ಬಹುಮತ ಬಂದಿಲ್ಲ. 288 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 145 ಸ್ಥಾನ ಬೇಕು. ಬಿಜೆಪಿ (105)- ಶಿವಸೇನೆ (56) ಮಿತ್ರಕೂಟ 166 ಸ್ಥಾನ ಗಳಿಸಿವೆ. ಆದರೆ ಮುಖ್ಯಮಂತ್ರಿ ಹುದ್ದೆಯನ್ನು ತನಗೂ ನೀಡಬೇಕು ಎಂದು ಶಿವಸೇನೆ ಪಟ್ಟು ಹಿಡಿದಿದೆ. ಶಿವಸೇನೆ ಏನಾದರೂ ಮುನಿಸಿಕೊಂಡು ಹೊರಬಂದು ಕಾಂಗ್ರೆಸ್ ಹಾಗೂ ಎನ್‌ಸಿಪಿ ಜತೆಗೂಡಿದರೆ ಹೊಸ ಮೈತ್ರಿಕೂಟದ ಬಲ 154 ಆಗುತ್ತದೆ. ಬಹುಮತಕ್ಕೆ ಸಮಸ್ಯೆಯಾಗುವುದಿಲ್ಲ.
ಕೆಲವೆಡೆ ಕಾಂಗ್ರೆಸ್ ಕಮಾಲ್, ಹಲವೆಡೆ ಬಿಜೆಪಿ ಧಮಾಲ್: ಬೈ ಎಲೆಕ್ಷನ್ ರಿಸಲ್ಟ್!
ಅಕ್ಟೋಬರ್ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ